ಬೆಂಗಳೂರು: ಜನಸಾಮಾನ್ಯರ ಸಮಸ್ಯೆಗಳಿಗೆ(Problems) ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳಲು ಮತ್ತು ಆಡಳಿತದಲ್ಲಿ ಪಾರದರ್ಶಕತೆ ತರಲು ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸರ್ಕಾರವು ಮುಂದಾಗಿದ್ದು, ಅದೇ ರೀತಿಯಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಭಾಷಿಣಿ ಸಾಧನವನ್ನು (Tool) ಅಳವಡಿಸಿಕೊಳ್ಳಲಾಗುವುದು ಎಂದು ಐಟಿ ಮತ್ತು ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ(Priyanka Karge) ಅವರ ತಿಳಿಸಿದರು.
ಪ್ರಜಾ ಸೇವಾ ಇಲಾಖೆಯ ಇ.ಡಿ.ಸಿಎಸ್ ನಿರ್ದೇಶನಾಲಯವು ಇಂದು ವಿಕಾಸ ಸೌಧದಲ್ಲಿ “ಭಾಷಿಣಿ-ರಾಜ್ಯಂ” ಎಂಬ ವಿಷಯದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು ಕರ್ನಾಟಕವು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸುತ್ತಿರುವ ಪ್ರಗತಿಯ ಜೊತೆಗೆ ಭಾμÁ ತಂತ್ರಜ್ಞಾನದ ಬಳಕೆಯನ್ನು ವಿಸ್ತರಿಸುವ ಅವಶ್ಯಕತೆ ಇದೆ ಎಂದರು.
ಭಾಷಿಣಿ ಯೋಜನೆಯನ್ನು ಮತ್ತಷ್ಟು ವೇಗವಾಗಿ ಮುನ್ನಡೆಸಲು ಕರ್ನಾಟಕ ಅತ್ಯಂತ ಸೂಕ್ತವಾದ ರಾಜ್ಯವಾಗಿದ್ದು, ಪ್ರಸ್ತುತ ಕರ್ನಾಟಕವು ವಿಶ್ವದಲ್ಲೇ 4ನೇ ಅತಿ ದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಆಗಿ ಹೊರಹೊಮ್ಮಿದ್ದು, ಕೃತಕ ಬುದ್ಧಿಮತ್ತೆ (ಎಐ) ಕೌಶಲ್ಯದಲ್ಲಿ 5ನೇ ಸ್ಥಾನದಲ್ಲಿದೆ. ಅಲ್ಲದೆ, ಅತ್ಯಂತ ಸಾಂದ್ರಿತ ಹಾಗೂ ದಕ್ಷ ಮಾನವ ಸಂಪನ್ಮೂಲವನ್ನು ಹೊಂದಿರುವ ಹೆಗ್ಗಳಿಕೆ ರಾಜ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ದೇಶದಲ್ಲಿ ಭಾಷಿಣಿ ಯೋಜನೆಯಡಿ ಸಾಧಿಸಿರುವ ಪ್ರಗತಿಯು ಅತ್ಯಂತ ಶ್ಲಾಘನೀಯವಾಗಿದೆ. ನಮ್ಮ ದೇಶದ ಸಾಂವಿಧಾನಿಕ ಮಾನ್ಯತೆ ಪಡೆದಿರುವ 22 ಬಾಷೆ ಗಳನ್ನು ಸಂಯೋಜಿಸಿ, ಸ್ವಯಂಚಾಲಿತ ಧ್ವನಿ ಗುರುತಿಸುವಿಕೆ (Automatic Speech Recognition),ನ್ಯೂರಲ್ ಮೆಷಿನ್ ಅನುವಾದ ಹಾಗೂ ಪಠ್ಯದಿಂದ ಧ್ವನಿಗೆ ರೂಪಾಂತರಿಸುವ (Text to Speech) ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.
ಕರ್ನಾಟಕದ ಪ್ರತಿ 150 ಕಿಲೋಮೀಟರ್ಗೆ ಭಾμÁ ಶೈಲಿ ಬದಲಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಮರಾಠಿ, ಉರ್ದು ಪ್ರಭಾವ ಹೆಚ್ಚಿದ್ದರೆ, ಗಡಿಭಾಗಗಳಾದ ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಪ್ರದೇಶಗಳಲ್ಲಿ ತೆಲುಗು ಮತ್ತು ತಮಿಳು ಭಾμÉಗಳ ಪ್ರಭಾವವಿದೆ. ಕರಾವಳಿ ಭಾಗದಲ್ಲಿ ತುಳು ಹಾಗೂ ಬ್ಯಾರಿ ಭಾಷೆಗಳಿದ್ದರೆ, ಕೊಡಗಿನ ಭಾಗದಲ್ಲಿ ಮಲಯಾಳಂ ಭಾಷೆಯ ಪ್ರಭಾವ ಕಂಡುಬರುತ್ತದೆ.
ಈ ರೀತಿಯ ಪ್ರಾದೇಶಿಕ ಬಾಷೆ ವೈವಿಧ್ಯತೆ ಮತ್ತು ಉಪಭಾಗಗಳ ಮಿಶ್ರಣದಿಂದಾಗಿ ಸ್ಥಳೀಯ ಮಟ್ಟದಲ್ಲಿ ನಾಗರಿಕರಿಗೆ ಸರ್ಕಾರಿ ಸೇವೆಗಳನ್ನು ತಲುಪಿಸುವುದು ಸವಾಲಿನ ಕೆಲಸವಾಗಿದ್ದು, ಇದನ್ನು ಭಾಷಿಣಿ ತಂತ್ರಜ್ಞಾನದ ಮೂಲಕ ಸುಲಭಗೊಳಿಸಬಹುದು ಎಂದರು.
ಪ್ರಜಾಸೇವೆ ಹಾಗೂ ಇ-ಆಡಳಿತದಲ್ಲಿ ಪ್ರಸ್ತುತ 700ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ನೀಡಲಾಗುತ್ತಿದ್ದು, ಸಾರ್ವಜನಿಕರು ಇಂದು ಉದ್ದನೆಯ ಅರ್ಜಿಗಳನ್ನು ತುಂಬುವ ಬದಲಿಗೆ ವ್ಯಾಟ್ಸಾಪ್, ಚಾಟ್ಬಾಟ್ಗಳು, ಧ್ವನಿ ಹಾಗೂ ವೀಡಿಯೊ ಸಂದೇಶಗಳ ಮೂಲಕ ದೂರುಗಳನ್ನು ಸಲ್ಲಿಸಲು ಇಷ್ಟಪಡುತ್ತಿದ್ದಾರೆ. ಈ ದೂರು ಹಾಗೂ ಸೇವೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪ್ರಜಾಸೇವೆ ಮತ್ತು ಇ-ಆಡಳಿತ ವಿಭಾಗಗಳಲ್ಲಿ ‘ಭಾಷಿಣಿ’ ಹಾಗೂ ತಂತ್ರಜ್ಞಾನ ಸಾಧನವನ್ನು ಸಕ್ರಿಯವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ಸಹನೆಯಿಂದ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡು, ಅದನ್ನು ತಳಮಟ್ಟದ ಆಡಳಿತದಲ್ಲಿ ಅಳವಡಿಸಿಕೊಳ್ಳಬೇಕು. ಆಡಳಿತದಲ್ಲಿ ಪಾರದರ್ಶಕತೆ ಬಂದಾಗ ಮಾತ್ರ ಸರ್ಕಾರದ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯ ಮೂಡಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ತಲುಪಿಸಬೇಕು ಎಂದು ಕರೆ ನೀಡಿದರು.
ಪ್ರಜಾ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಹರ್ಷಗುಪ್ತ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಇ-ಆಫೀಸ್ ವ್ಯವಸ್ಥೆಯಲ್ಲಿ ‘ಭಾಷಿಣಿ’ ಸಾಧನವನ್ನು ಅಳವಡಿಸಿಕೊಳ್ಳಲಾಗಿದ್ದು, ಇದರಿಂದ ಆಡಳಿತ ಯಂತ್ರದ ಕಾರ್ಯವೈಖರಿಯಲ್ಲಿ ಮಹತ್ವದ ಬದಲಾವಣೆ ಕಂಡುಬರುತ್ತಿದೆ. ಈ ಹಿಂದೆ ಇ-ಆಫೀಸ್ನಲ್ಲಿ ಪ್ರತಿಯೊಂದನ್ನೂ ಟೈಪ್ ಮಾಡಬೇಕಾಗಿತ್ತು. ಆದರೆ ಭಾಷಿಣಿ ಸಾಧನವನ್ನು ಸಂಯೋಜಿಸಿದ ನಂತರ, ಕಳೆದ ಒಂದು ತಿಂಗಳಿನಿಂದ ಅಧಿಕಾರಿಗಳು ಇದನ್ನು ಸುಲಭವಾಗಿ ಬಳಸುತ್ತಿದ್ದಾರೆ.
ಧ್ವನಿಯಿಂದ ಪಠ್ಯಕ್ಕೆ, ಇಂಗ್ಲಿಷ್ ಅಥವಾ ಕನ್ನಡದಲ್ಲಿ ಮಾತನಾಡುವ ವಿಷಯವನ್ನು ನೇರವಾಗಿ ಪಠ್ಯ ರೂಪಕ್ಕೆ ಬದಲಾಯಿಸಲು ಇದು ನೆರವಾಗುತ್ತದೆ. ಹಾಗೆಯೇ ಇಂಗ್ಲಿಷ್ನಲ್ಲಿರುವ ಟಿಪ್ಪಣಿಗಳನ್ನು ಕನ್ನಡಕ್ಕೆ ಹಾಗೂ ಕನ್ನಡದಲ್ಲಿರುವುದನ್ನು ಇಂಗಿಷ್ ಗೆ ಸುಲಭವಾಗಿ ಅನುವಾದಿಸಬಹುದು ಎಂದು ತಿಳಿಸಿದರು.
ವೈದ್ಯರು ರೋಗಿಯೊಂದಿಗೆ ಮಾತನಾಡುವಾಗಲೇ, ಅವರ ಹೆಸರು, ರೋಗಲಕ್ಷಣಗಳು ಹಾಗೂ ಕಾಯಿಲೆಯ ವಿವರಗಳನ್ನು ಈ ತಂತ್ರಜ್ಞಾನದ ಮೂಲಕ ಸ್ವಯಂ ಚಾಲಿತವಾಗಿ ಗುರುತಿಸಿ, ವರದಿಯನ್ನು ನೀಡುವುದರಿಂದ ವೈದ್ಯರ ಕೆಲಸ ಸುಗಮವಾಗಲಿದೆ.
ಭಾಷಿಣಿ ಸಾಧನದಲ್ಲಿ ಇನ್ನೂ ಕೆಲವು ತಾಂತ್ರಿಕ ಸುಧಾರಣೆಗಳನ್ನು ತರಲು ಕೋರಲಾಗಿದ್ದು, ಮುಂದಿನ ದಿನಗಳಲ್ಲಿ ಈ ಸಾಧನವನ್ನು ಸರಕಾರಿ ಇಲಾಖೆಗಳು ಸೇರಿದಂತೆ ಹಲವು ಸಾರ್ವಜನಿಕ ಸೇವೆಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಸರ್ಕಾರವು ನಿರ್ಧರಿಸಿದೆ ಎಂದರು.
ದೆಹಲಿಯಿಂದ ಆಗಮಿಸಿದ್ದ ಭಾಷಿಣಿ ತಂಡದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಅಮಿತಾಭ್ ನಾಗ್, ಅವರು ಸಚಿವರ ಸಮ್ಮುಖದಲ್ಲಿ ಬಂಗಾಲಿ ಮತ್ತು ಇಂಗ್ಲೀಷ್ ನಲ್ಲಿ ಮಾತನಾಡಿದುದನ್ನು ಹೇಗೆ ಪಠ್ಯದಲ್ಲಿ ನೀಡುತ್ತದೆ ಎಂಬುದರ ಪ್ರಾತ್ಯಕ್ಷಿಕೆಯನ್ನು ನೀಡಿದರು.
ಈ ಕಾರ್ಯಾಗಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಆರ್ಡಿಪಿಆರ್ ಮತ್ತು ಇ-ಗವರ್ನೆನ್ಸ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಪಂಕಜ್ ಕುಮಾರ್ ಪಾಂಡೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಮಂಜುನಾಥ್ ಹಾಗೂ ಟಿಸಿಎಸ್ ನ ನಿರ್ದೇಶಕರಾದ ಹರ್ಷಲ್ ಗೋಯಲ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಹಾಗೂ ಸ್ಟಾರ್ಟ್ ಅಪ್ ಭಾಗವಹಿಸಿದ್ದರು.
ಕೆಆರ್ಎಸ್ ಬೃಂದಾವನದಲ್ಲಿ ಕಾವೇರಿ ಆರತಿ ಕಾರ್ಯಕ್ರಮ – ಅ.16ರಿಂದ 21ರವರೆಗೆ ಆಯೋಜನೆ

