ಬೆಂಗಳೂರು: ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಖಾಲಿ ಇರುವ ಸಹಾಯಕ ಗ್ರಂಥಾಲಯ ಮತ್ತು ಮಾಹಿತಿ ಅಧಿಕಾರಿ (Assistant Library and Information Officer) ಹುದ್ದೆಯನ್ನು ನಿಯೋಜನೆ ಅಥವಾ ಬಡ್ತಿ ಮೂಲಕ ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.
ಸಹಾಯಕ ಗ್ರಂಥಾಲಯ ಮತ್ತು ಮಾಹಿತಿ ಅಧಿಕಾರಿ (Group ‘B’, Gazetted, Non-Ministerial) 01 ಹುದ್ದೆ ಖಾಲಿ ಇದ್ದು, ವೇತನ ಶ್ರೇಣಿ: Level 7 (CCS (RP) Rules 2016) ನಿಗದಿಪಡಿಸಲಾಗಿದೆ.
ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಗ್ರಂಥಾಲಯ ವಿಜ್ಞಾನ ಅಥವಾ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಪದವಿ ಪಡೆದಿರಬೇಕು. ಅನುಭವ: ಕೇಂದ್ರ ಅಥವಾ ರಾಜ್ಯ ಸರ್ಕಾರ, ಸ್ವಾಯತ್ತ ಸಂಸ್ಥೆಗಳು, ಸಾರ್ವಜನಿಕ ವಲಯದ undertakings ಅಥವಾ ವಿಶ್ವವಿದ್ಯಾಲಯಗಳ ಗ್ರಂಥಾಲಯದಲ್ಲಿ ಕನಿಷ್ಠ 2 ವರ್ಷಗಳ ವೃತ್ತಿಪರ ಅನುಭವವಿರಬೇಕು. ನಿಯೋಜನೆ ಆಧಾರದ ಮೇಲೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 56 ವರ್ಷಗಳು ಮೀರಿರಬಾರದು.
ಆಸಕ್ತರು ಮತ್ತು ಅರ್ಹರು ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ನಿಯಮಾವಳಿ ಪ್ರಕಾರ ತಮ್ಮ ವಿವರಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳು ಹಾಗೂ ಮೇಲಧಿಕಾರಿಗಳ ಅನುಮತಿಯೊಂದಿಗೆ Room No. 13052, A-Wing, 3rd Floor, Kartavya Bhawan-1, Dr. Rajendra Prasad Marg, New Delhi – 110 001 ಎಂಬ ವಿಳಾಸಕ್ಕೆ ಪ್ರಕಟಣೆ ಹೊರಬಂದ 60 ದಿನಗಳೊಳಗೆ ಅರ್ಜಿಗಳನ್ನು ಕಳುಹಿಸಬೇಕು.
ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ನಮೂನೆಯನ್ನು ಪಡೆದುಕೊಳ್ಳಲು ಸಚಿವಾಲಯದ ಅಧಿಕೃತ ವೆಬ್ಸೈಟ್ ಅಥವಾ ಉದ್ಯೋಗ ಸುದ್ದಿಯನ್ನು ಪರಿಶೀಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನೇಕಾರರ ಸಮಸ್ಯೆಗಳಿಗೆ ಪರಿಹಾರಕ್ಕೆ ಸರ್ಕಾರ ಬದ್ಧ; ಬೇಡಿಕೆಗಳ ಕುರಿತು ಸಿಎಂ ಜೊತೆ ಚರ್ಚೆ: ಸಚಿವ ರುದ್ರಪ್ಪ ಲಮಾಣಿ
