ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಸಾರ್ವಜನಿಕರ ನೀರಿನ ಕುಂದುಕೊರತೆಗಳನ್ನು(Water grievances) ಪರಿಹರಿಸುವ ಸಲುವಾಗಿ ಸೆಪ್ಟೆಂಬರ್ 24 ರಂದು 9:30 ರಿಂದ 11:00 ಗಂಟೆಯವರೆಗೆ ನಗರದ ವಿವಿಧ ಉಪವಿಭಾಗಗಳಲ್ಲಿ ‘ನೀರಿನ ಅದಾಲತ್’(Water Adalat) ಅನ್ನು ಆಯೋಜಿಸಿದೆ.
ಈ ಅದಾಲತ್ ನಲ್ಲಿ ಸಾರ್ವಜನಿಕರು ನೀರಿನ ಬಿಲ್ಲು ವ್ಯತ್ಯಾಸ ಮತ್ತು ದೂರುಗಳು ಹೊಸ ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ ಗೃಹ ಬಳಕೆಯಿಂದ ಗೃಹೇತರ ಬಳಕೆಗೆ ಪರಿವರ್ತಿಸುವಲ್ಲಿ ಆಗುತ್ತಿರುವ ವಿಳಂಬ ಸರಬರಾಜು ಮತ್ತು ಇತರೆ ಕುಂದುಕೊರತೆಗಳು ತಮ್ಮ ಸಮಸ್ಯೆಗಳಿಗೆ ನೇರ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಅದಾಲತ್ ನಡೆಯುವ ಉಪವಿಭಾಗಗಳು ಮತ್ತು ವಿಳಾಸದ ವಿವರಗಳು:
ಕೇಂದ್ರ-1-2: 2ನೇ ಅಡ್ಡ ರಸ್ತೆ, ಕೆಂಪೇಗೌಡ ಗೋಪುರ, 10ನೇ ಮುಖ್ಯ ರಸ್ತೆ, ಸದಾಶಿವನಗರ, ಬೆಂಗಳೂರು-80 (ದೂರವಾಣಿ: 9591987961), ಕೇಂದ್ರ-2-2: 10ನೇ ಮುಖ್ಯ ರಸ್ತೆ, 7ನೇ ಅಡ್ಡ ರಸ್ತೆ, ಇಂದಿರಾನಗರ ಕ್ಲಬ್ ಹಿಂಭಾಗ, 2ನೇ ಹಂತ, ಹೆಚ್.ಎ.ಎಲ್ (ದೂರವಾಣಿ: 7760963674), ಕೇಂದ್ರ-3-2: ದ್ವಾರಕನಾಥ ರಸ್ತೆ, ನ್ಯಾಷನಲ್ ಕಾಲೇಜು ಮುಂಭಾಗ, ವಿ.ವಿ.ಪುರಂ, ಬೆಂಗಳೂರು-04 (ದೂರವಾಣಿ: 9845444085), ಕೇಂದ್ರ-4-2: ಸ್ವಾಮಿ ವಿವೇಕಾನಂದ ರಸ್ತೆ, ಅಡೋ ಮಾಲ್ ಎದುರು, ಹಲಸೂರು, ಬೆಂಗಳೂರು-08 (ದೂರವಾಣಿ: 9845444052), ಪೂರ್ವ-1-3: 1ನೇ ‘ಬಿ‘ ಅಡ್ಡರಸ್ತೆ, ಎನ್.ಜಿ.ಎಫ್ ಲೇಔಟ್ ಪೂರ್ವ, ವಿಜಿನಪುರ, ಕಸ್ತೂರಿನಗರ, ಬೆಂಗಳೂರು-16 (ದೂರವಾಣಿ: 9740984162), ಪಶ್ಚಿಮ-1-3: ಡಾ. ಎಂ.ಸಿ. ಮೋದಿ ರಸ್ತೆ, ರಾಜಾಜಿನಗರ, ಬೆಂಗಳೂರು-10 (ದೂರವಾಣಿ: 9845444073), ಪಶ್ಚಿಮ-2-3: 3ನೇ ಮುಖ್ಯರಸ್ತೆ, 2ನೇ ಹಂತ, ಬೃಂದಾವನನಗರ, ಕರಿಹೋಬನಹಳ್ಳಿ, ಬೆಂಗಳೂರು-73 (ದೂರವಾಣಿ: 9008822833), ಪಶ್ಚಿಮ-3-3: #3, ಎಂ.ಎನ್.ಕೆ ಪಾರ್ಕ್, ಬಸವನಗುಡಿ, ಬೆಂಗಳೂರು-04 (ದೂರವಾಣಿ: 9845444041), ಪಶ್ಚಿಮ-4-3: 1ನೇ ಮುಖ್ಯರಸ್ತೆ, ನೆಲಮಹಡಿ, 3ನೇ ಹಂತ, ಬನಶಂಕರಿ (ಬನಗಿರಿನಗರ), ಬೆಂಗಳೂರು-85 (ದೂರವಾಣಿ: 9845444113), ಉತ್ತರ-2-3: 1ನೇ ಮುಖ್ಯರಸ್ತೆ, ಕಸ್ತೂರಿನಗರ, ಬೆಂಗಳೂರು-43 (ದೂರವಾಣಿ: 9845444058), ದಕ್ಷಿಣ-3-3: ಕಪಿಲ ಭವನ, 1ನೇ ಮಹಡಿ, 4ನೇ ‘ಟಿ’ ಬ್ಲಾಕ್, ಜಯನಗರ, ಬೆಂಗಳೂರು-41 (ದೂರವಾಣಿ: 8792293344) ಕೇಂದ್ರಗಳಲ್ಲಿ ಅದಾಲತ್ ನಡೆಯಲಿದೆ.
ಸಾರ್ವಜನಿಕರು ನೀರಿನ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಮಂಡಳಿಯ 24/7 ಸಹಾಯವಾಣಿ ಸಂಖ್ಯೆ 1916 ಗೆ ಕರೆ ಮಾಡಬಹುದು. ಜೊತೆಗೆ ವಾಟ್ಸ್‍ಆಪ್ ಸಂಖ್ಯೆ 8762228888 ಗೆ ಸಂದೇಶ ಕಳುಹಿಸುವ ಮೂಲಕವೂ ದೂರು ದಾಖಲಿಸಬಹುದು ಎಂದು ಜಲಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುಕೆಪಿ ನಿವೇಶನ ಅಕ್ರಮ: ತಪ್ಪಿತಸ್ಥರನ್ನು ಮುಲಾಜಿಲ್ಲದೆ ಜೈಲಿಗಟ್ಟಿ – ಸಚಿವ ಚಲುವರಾಯಸ್ವಾಮಿ ಖಡಕ್ ಎಚ್ಚರಿಕೆ*
