ಬೆಂಗಳೂರಿನ ವಿವಿಧ ಉಪವಿಭಾಗಗಳಲ್ಲಿ ಸೆಪ್ಟೆಂಬರ್ 24ರಂದು ‘ನೀರಿನ ಅದಾಲತ್’

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಸಾರ್ವಜನಿಕರ ನೀರಿನ ಕುಂದುಕೊರತೆಗಳನ್ನು(Water grievances) ಪರಿಹರಿಸುವ ಸಲುವಾಗಿ ಸೆಪ್ಟೆಂಬರ್ 24 ರಂದು 9:30 ರಿಂದ 11:00 ಗಂಟೆಯವರೆಗೆ ನಗರದ ವಿವಿಧ ಉಪವಿಭಾಗಗಳಲ್ಲಿ ‘ನೀರಿನ ಅದಾಲತ್’(Water Adalat) ಅನ್ನು ಆಯೋಜಿಸಿದೆ.

ಈ ಅದಾಲತ್ ನಲ್ಲಿ ಸಾರ್ವಜನಿಕರು ನೀರಿನ ಬಿಲ್ಲು ವ್ಯತ್ಯಾಸ ಮತ್ತು ದೂರುಗಳು ಹೊಸ ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ ಗೃಹ ಬಳಕೆಯಿಂದ ಗೃಹೇತರ ಬಳಕೆಗೆ ಪರಿವರ್ತಿಸುವಲ್ಲಿ ಆಗುತ್ತಿರುವ ವಿಳಂಬ ಸರಬರಾಜು ಮತ್ತು ಇತರೆ ಕುಂದುಕೊರತೆಗಳು ತಮ್ಮ ಸಮಸ್ಯೆಗಳಿಗೆ ನೇರ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಅದಾಲತ್ ನಡೆಯುವ ಉಪವಿಭಾಗಗಳು ಮತ್ತು ವಿಳಾಸದ ವಿವರಗಳು:

ಕೇಂದ್ರ-1-2: 2ನೇ ಅಡ್ಡ ರಸ್ತೆ, ಕೆಂಪೇಗೌಡ ಗೋಪುರ, 10ನೇ ಮುಖ್ಯ ರಸ್ತೆ, ಸದಾಶಿವನಗರ, ಬೆಂಗಳೂರು-80 (ದೂರವಾಣಿ: 9591987961), ಕೇಂದ್ರ-2-2: 10ನೇ ಮುಖ್ಯ ರಸ್ತೆ, 7ನೇ ಅಡ್ಡ ರಸ್ತೆ, ಇಂದಿರಾನಗರ ಕ್ಲಬ್ ಹಿಂಭಾಗ, 2ನೇ ಹಂತ, ಹೆಚ್.ಎ.ಎಲ್ (ದೂರವಾಣಿ: 7760963674), ಕೇಂದ್ರ-3-2: ದ್ವಾರಕನಾಥ ರಸ್ತೆ, ನ್ಯಾಷನಲ್ ಕಾಲೇಜು ಮುಂಭಾಗ, ವಿ.ವಿ.ಪುರಂ, ಬೆಂಗಳೂರು-04 (ದೂರವಾಣಿ: 9845444085), ಕೇಂದ್ರ-4-2: ಸ್ವಾಮಿ ವಿವೇಕಾನಂದ ರಸ್ತೆ, ಅಡೋ ಮಾಲ್ ಎದುರು, ಹಲಸೂರು, ಬೆಂಗಳೂರು-08 (ದೂರವಾಣಿ: 9845444052), ಪೂರ್ವ-1-3: 1ನೇ ‘ಬಿ‘ ಅಡ್ಡರಸ್ತೆ, ಎನ್.ಜಿ.ಎಫ್ ಲೇಔಟ್ ಪೂರ್ವ, ವಿಜಿನಪುರ, ಕಸ್ತೂರಿನಗರ, ಬೆಂಗಳೂರು-16 (ದೂರವಾಣಿ: 9740984162), ಪಶ್ಚಿಮ-1-3: ಡಾ. ಎಂ.ಸಿ. ಮೋದಿ ರಸ್ತೆ, ರಾಜಾಜಿನಗರ, ಬೆಂಗಳೂರು-10 (ದೂರವಾಣಿ: 9845444073), ಪಶ್ಚಿಮ-2-3: 3ನೇ ಮುಖ್ಯರಸ್ತೆ, 2ನೇ ಹಂತ, ಬೃಂದಾವನನಗರ, ಕರಿಹೋಬನಹಳ್ಳಿ, ಬೆಂಗಳೂರು-73 (ದೂರವಾಣಿ: 9008822833), ಪಶ್ಚಿಮ-3-3: #3, ಎಂ.ಎನ್.ಕೆ ಪಾರ್ಕ್, ಬಸವನಗುಡಿ, ಬೆಂಗಳೂರು-04 (ದೂರವಾಣಿ: 9845444041), ಪಶ್ಚಿಮ-4-3: 1ನೇ ಮುಖ್ಯರಸ್ತೆ, ನೆಲಮಹಡಿ, 3ನೇ ಹಂತ, ಬನಶಂಕರಿ (ಬನಗಿರಿನಗರ), ಬೆಂಗಳೂರು-85 (ದೂರವಾಣಿ: 9845444113), ಉತ್ತರ-2-3: 1ನೇ ಮುಖ್ಯರಸ್ತೆ, ಕಸ್ತೂರಿನಗರ, ಬೆಂಗಳೂರು-43 (ದೂರವಾಣಿ: 9845444058), ದಕ್ಷಿಣ-3-3: ಕಪಿಲ ಭವನ, 1ನೇ ಮಹಡಿ, 4ನೇ ‘ಟಿ’ ಬ್ಲಾಕ್, ಜಯನಗರ, ಬೆಂಗಳೂರು-41 (ದೂರವಾಣಿ: 8792293344) ಕೇಂದ್ರಗಳಲ್ಲಿ ಅದಾಲತ್ ನಡೆಯಲಿದೆ.

ಸಾರ್ವಜನಿಕರು ನೀರಿನ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಮಂಡಳಿಯ 24/7 ಸಹಾಯವಾಣಿ ಸಂಖ್ಯೆ 1916 ಗೆ ಕರೆ ಮಾಡಬಹುದು. ಜೊತೆಗೆ ವಾಟ್ಸ್‍ಆಪ್ ಸಂಖ್ಯೆ 8762228888 ಗೆ ಸಂದೇಶ ಕಳುಹಿಸುವ ಮೂಲಕವೂ ದೂರು ದಾಖಲಿಸಬಹುದು ಎಂದು ಜಲಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಯುಕೆಪಿ ನಿವೇಶನ ಅಕ್ರಮ: ತಪ್ಪಿತಸ್ಥರನ್ನು ಮುಲಾಜಿಲ್ಲದೆ ಜೈಲಿಗಟ್ಟಿ – ಸಚಿವ ಚಲುವರಾಯಸ್ವಾಮಿ ಖಡಕ್ ಎಚ್ಚರಿಕೆ*

Hot this week

ಬೆಂಗಳೂರಿನಲ್ಲಿ ರಾಜ್ಯದ ಮೊದಲ ‘ಗಾಂಧಿ ಸ್ಮಾರಕ ಸ್ತಂಭ’ವನ್ನು ಅನಾವರಣಗೊಳಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು: ಮಹಾತ್ಮ ಗಾಂಧೀಜಿಯವರು(Mahatma Gandhiji) ಕರ್ನಾಟಕದಲ್ಲಿ ಭೇಟಿ ನೀಡಿದ್ದ ವಿವಿಧ 87...

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಗಾಂಧಿ ಜಯಂತಿ ಆಚರಣೆ

ಬೆಂಗಳೂರು: 157 ನೇ ಗಾಂಧಿ ಜಯಂತಿ(Gandhi Jayanthi) ಅಂಗವಾಗಿ ವಾರ್ತಾ ಮತ್ತು...

BIG NEWS :MUMBAI TOLL : ಮುಂಬೈ ಟೋಲ್ ದರಗಳಲ್ಲಿ ಶೇ.20ರಷ್ಟು ಏರಿಕೆ

ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1,...

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

Topics

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಗಾಂಧಿ ಜಯಂತಿ ಆಚರಣೆ

ಬೆಂಗಳೂರು: 157 ನೇ ಗಾಂಧಿ ಜಯಂತಿ(Gandhi Jayanthi) ಅಂಗವಾಗಿ ವಾರ್ತಾ ಮತ್ತು...

BIG NEWS :MUMBAI TOLL : ಮುಂಬೈ ಟೋಲ್ ದರಗಳಲ್ಲಿ ಶೇ.20ರಷ್ಟು ಏರಿಕೆ

ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1,...

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

Related Articles