ಜಪಾನ್ನ (Japan) ಕಕಮಿಗಹಾರಾದಲ್ಲಿ ನಡೆದ ಏಷ್ಯನ್ ಗೇಮ್ಸ್ (Asian Games) 2026ರ ಪುರುಷರ ಹಾಕಿ (Men’s Hockey) ಸೆಮಿಫೈನಲ್ನಲ್ಲಿ (Semi Final) ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 4-3 ಗೋಲುಗಳಿಂದ ಮಣಿಸಿ ಫೈನಲ್ಗೆ ಪ್ರವೇಶಿಸಿದೆ. ಈ ಗೆಲುವಿನೊಂದಿಗೆ ಭಾರತ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದೆ.
ಭಾರತ ಆರಂಭದಲ್ಲೇ ಪ್ರಾಬಲ್ಯ ಸಾಧಿಸಿತು. ನಾಯಕ ಹರ್ಮನ್ಪ್ರೀತ್ ಸಿಂಗ್ 5ನೇ ಮತ್ತು 13ನೇ ನಿಮಿಷಗಳಲ್ಲಿ ಎರಡು ಪೆನಾಲ್ಟಿ ಕಾರ್ನರ್ಗಳನ್ನು ಗೋಲಾಗಿಸಿ ಭಾರತಕ್ಕೆ 2-0 ಮುನ್ನಡೆ ನೀಡಿದರು. 23ನೇ ನಿಮಿಷದಲ್ಲಿ ಸುಖಜೀತ್ ಸಿಂಗ್ ಫೀಲ್ಡ್ ಗೋಲು ದಾಖಲಿಸಿ ಭಾರತದ ಮುನ್ನಡೆಯನ್ನು 3-0ಕ್ಕೆ ವಿಸ್ತರಿಸಿದರು.
ಆದರೆ ದ್ವಿತೀಯಾರ್ಧದಲ್ಲಿ ಪಾಕಿಸ್ತಾನ ಭರ್ಜರಿ ಪುಟಿದೇಳಿತು. ಅಬು ಮಹಮೂದ್, ಹನ್ನಾನ್ ಶಾಹಿದ್ ಮತ್ತು ವಹೀದ್ ಅಶ್ರಫ್ ರಾಣಾ ಗೋಲುಗಳ ಮೂಲಕ ಪಾಕಿಸ್ತಾನ 3-3ರಿಂದ ಪಂದ್ಯವನ್ನು ಸಮಬಲಕ್ಕೆ ತಂದಿತು.
ಪಂದ್ಯ ಮುಗಿಯಲು ಕೇವಲ 49.2 ಸೆಕೆಂಡ್ಗಳು ಬಾಕಿಯಿದ್ದಾಗ ಅಭಿಷೇಕ್ ಹೊಡೆದ ಚೆಂಡು ಪಾಕಿಸ್ತಾನದ ಆಟಗಾರನ ಸ್ಟಿಕ್ಗೆ ತಾಗಿ ಗೋಲು ಬಲೆಗೆ ಸೇರಿತು. ಇದರೊಂದಿಗೆ ಭಾರತ 4-3ರ ರೋಚಕ ಗೆಲುವು ಸಾಧಿಸಿತು.
ಈ ಗೆಲುವಿನಿಂದ ಹಾಲಿ ಚಾಂಪಿಯನ್ ಭಾರತ ಫೈನಲ್ಗೆ ಪ್ರವೇಶಿಸಿದ್ದು, ಅಕ್ಟೋಬರ್ 3ರಂದು ಚಿನ್ನದ ಪದಕಕ್ಕಾಗಿ ಹೋರಾಡಲಿದೆ. ಎದುರಾಳಿ ದಕ್ಷಿಣ ಕೊರಿಯಾ–ಮಲೇಷ್ಯಾ ಸೆಮಿಫೈನಲ್ನ ವಿಜೇತರಾಗಿರುತ್ತಾರೆ.

