ಬೆಂಗಳೂರಿನಲ್ಲಿ ರಾಜ್ಯದ ಮೊದಲ ‘ಗಾಂಧಿ ಸ್ಮಾರಕ ಸ್ತಂಭ’ವನ್ನು ಅನಾವರಣಗೊಳಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು: ಮಹಾತ್ಮ ಗಾಂಧೀಜಿಯವರು(Mahatma Gandhiji) ಕರ್ನಾಟಕದಲ್ಲಿ ಭೇಟಿ ನೀಡಿದ್ದ ವಿವಿಧ 87 ಐತಿಹಾಸಿಕ ಸ್ಥಳಗಳಲ್ಲಿ ‘ಗಾಂಧಿ ಸ್ಮಾರಕ ಸ್ತಂಭ’(Gandhi Memorial Pillar) ಸ್ಥಾಪಿಸುವ ಕರ್ನಾಟಕ ಸರ್ಕಾರದ ಆಯವ್ಯಯ ಘೋಷಣೆಯ ಭಾಗವಾಗಿ, ರಾಜ್ಯದ ಮೊದಲ ಗಾಂಧಿ ಸ್ಮಾರಕ ಸ್ತಂಭವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(CM.D K Shivakumar) ಅವರು ಇಂದು ಬೆಂಗಳೂರಿನ ಇಂದಿನ ಸರ್ಕಾರಿ ಕಲಾ ಕಾಲೇಜು (GAS ಕಾಲೇಜು) ಆವರಣದಲ್ಲಿ ಅನಾವರಣಗೊಳಿಸಿದರು.
ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷಗಳು ಪೂರೈಸಿದ ನೆನಪಿಗಾಗಿ “ಗಾಂಧಿ ಭಾರತ” ಅಭಿಯಾನದಡಿಯಲ್ಲಿ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ಸ್ಮಾರಕ ಸ್ತಂಭಗಳನ್ನು ನಿರ್ಮಿಸಲಾಗುತ್ತಿದೆ.
ಶಾಸಕರು ಹಾಗೂ ಗಾಂಧಿ ಭಾರತ ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಎಚ್. ಕೆ. ಪಾಟೀಲ, ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಬಿ.ಎಲ್.ಶಂಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಜೆ. ಮಂಜುನಾಥ್ ಐ.ಎ.ಎಸ್.  ಸೇರಿದಂತೆ ಗಾಂಧಿ ಭಾರತ ಸಮಿತಿಯ ಪದಾಧಿಕಾರಿಗಳು,  ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕರು, ಅಪಾರ ಸಂಖ್ಯೆಯ ವಿಧ್ಯಾರ್ಥಿಗಳು  ಈ ‌ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಗಾಂಧಿ ಸ್ಮಾರಕ ಸ್ತಂಭ  ಸಿದ್ದಡಿಸಿದ ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್, ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ನಾಗೇಂದ್ರ ಕುಮಾರ್ ಜಿ.ಸಿ. ನಿರ್ಮಿತಿ ಕೇಂದ್ರದ ಅಭಿಯಂತರರಾದ ರಾಜೀವ್ ಅವರನ್ನು ಸನ್ಮಾನಿಸಿದರು.
ಅಲ್ಲದೇ ಈ ಮಹತ್ವದ ಕಾರ್ಯಕ್ರಮಕ್ಕೆ ಸಾಕ್ಷಿಯಾದಂತೆ ಸರ್ಕಾರಿ ಕಲಾ ಕಾಲೇಜಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ಗಿಡ ನೆಟ್ಟು ನೀರೆರದರು.
ಬೆಂಗಳೂರಿನ ಐತಿಹಾಸಿಕ ಕ್ಷಣ:
ಮಹಾತ್ಮ ಗಾಂಧೀಜಿಯವರು ತಮ್ಮ ಪತ್ನಿ ಕಸ್ತೂರಬಾ ಅವರೊಂದಿಗೆ 1915ರ ಮೇ 8ರ ಶನಿವಾರದಂದು ಪ್ರಥಮ ಬಾರಿಗೆ ಬೆಂಗಳೂರಿಗೆ ಆಗಮಿಸಿದ್ದರು. ಅಂದು ಆಗಿನ ಸರ್ಕಾರಿ ಪ್ರೌಢಶಾಲೆಗೆ (ಇಂದಿನ ಸರ್ಕಾರಿ ಕಲಾ ಕಾಲೇಜು) ಭೇಟಿ ನೀಡಿ, ತಮ್ಮ ರಾಜಕೀಯ ಗುರುಗಳಾಗಿದ್ದ ಗೋಪಾಲಕೃಷ್ಣ ಗೋಖಲೆ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದ್ದರು. ಅದರ ನೆನಪಿಗಾಗಿ ಈ ಸಭಾಂಗಣಕ್ಕೆ ಬಾಪೂಜಿ ಅವರ ಹೆಸರು ಇರಿಸಲಾಗಿದ್ದು, ಈಗ ಇದೇ ಆವರಣದಲ್ಲಿ ಮೊದಲ ಗಾಂಧಿ ಸ್ಮಾರಕ ಸ್ತಂಭ ನಿರ್ಮಿಸಲಾಗಿದೆ.
ಆಕರ್ಷಕ ಸ್ಮಾರಕ ಸ್ತಂಭದ ವಿವರ:
ಶಿಲ್ಪಿ: ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ಈ ಸ್ಮಾರಕದ ಆಕರ್ಷಕ ಕಲಾಕೃತಿಯನ್ನು ಸಿದ್ಧಪಡಿಸಿದ್ದು, ಸ್ಮಾರಕವು 10 ಅಡಿ ಎತ್ತರ ಹಾಗೂ 3 1/4 (ಮೂರು ಕಾಲು) ಅಡಿ ಅಗಲದ ಏಕಶಿಲಾ ಗ್ರಾನೈಟ್ ಕಲಾಕೃತಿ ಹೊಂದಿದೆ.
ವಿನ್ಯಾಸ: ಸ್ತಂಭದ ಮೇಲ್ಭಾಗದಲ್ಲಿ ನಾಲ್ಕು ಮುಖ ಸಿಂಹವುಳ್ಳ ರಾಷ್ಟ್ರೀಯ ಲಾಂಛನ, ಅದರ ಕೆಳಗೆ ಅಶೋಕ ಚಕ್ರ, ಧ್ಯಾನಸ್ಥ ಮಹಾತ್ಮ ಗಾಂಧೀಜಿ, ಅವರು ಬೋಧಿಸಿದ ಸಪ್ತ ಸಾಮಾಜಿಕ ಪಾತಕಗಳು, ಗಾಂಧೀಜಿಯವರ ಸಹಿ ಹಾಗೂ ಚರಕದ ಚಿತ್ರಣವಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಎಂ. ಎನ್. ಅನುಚೇತ್ ತಿಳಿಸಿದ್ದಾರೆ.

Hot this week

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಗಾಂಧಿ ಜಯಂತಿ ಆಚರಣೆ

ಬೆಂಗಳೂರು: 157 ನೇ ಗಾಂಧಿ ಜಯಂತಿ(Gandhi Jayanthi) ಅಂಗವಾಗಿ ವಾರ್ತಾ ಮತ್ತು...

BIG NEWS :MUMBAI TOLL : ಮುಂಬೈ ಟೋಲ್ ದರಗಳಲ್ಲಿ ಶೇ.20ರಷ್ಟು ಏರಿಕೆ

ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1,...

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

Topics

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಗಾಂಧಿ ಜಯಂತಿ ಆಚರಣೆ

ಬೆಂಗಳೂರು: 157 ನೇ ಗಾಂಧಿ ಜಯಂತಿ(Gandhi Jayanthi) ಅಂಗವಾಗಿ ವಾರ್ತಾ ಮತ್ತು...

BIG NEWS :MUMBAI TOLL : ಮುಂಬೈ ಟೋಲ್ ದರಗಳಲ್ಲಿ ಶೇ.20ರಷ್ಟು ಏರಿಕೆ

ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1,...

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

Related Articles