ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಕಲೀಲಾ ಮುಹೂರ್ತ

’ಕಲೀಲಾ’(Kaleela) ಚಿತ್ರದ ಮುಹೂರ್ತ ಸಮಾರಂಭವು ಶ್ರೀ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ(Sree Panchamukhi Ganapathi Temple) ಅದ್ದೂರಿಯಾಗಿ ನಡೆಯಿತು. ಮೊದಲ ದೃಶ್ಯಕ್ಕೆ ಸ್ಟಾರ್ ನಿರ್ದೇಶಕ ಸಿಂಪಲ್ ಸುನಿ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಕೆವಿಆರ್ ಪಿಕ್ಚರ‍್ಸ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ. ಕೆ.ರಾಘವ್ ಕಥೆ,ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ನಂತರ ಮಾತನಾಡಿದ ನಿರ್ದೇಶಕರು, ಇದೊಂದು ಮಾಸ್ ಕಂಟೆಂಟ್ ಜತೆಗೆ ಅಣ್ಣ ತಂಗಿ ಬಾಂಧವ್ಯವನ್ನು ಹೇಳಲಾಗುತ್ತಿದೆ. ’ಒಂದು ನಿಮಿಷದ ಕೋಪ, ಜೀವನವೆಲ್ಲ ತಾಪ’ ಎಂಬ ಗಾದೆಯಂತೆ ಚಿತ್ರದಲ್ಲಿ ಏನೂ ತಿಳಿಯದ ಮುಗ್ದ ಹುಡುಗನೊಬ್ಬ ಕೋಪದಲ್ಲಿ ತಪ್ಪು ಮಾಡಿಕೊಂಡು, ಮುಂದೆ ಆಗುವಂತ ಅನಾಹುತ, ನೋವುಗಳನ್ನು ಹೇಗೆ ಎದುರಿಸುತ್ತಾನೆ?. ಆತನ ಉದ್ದ ಹೆಸರನ್ನು ಕಡಿತ ಮಾಡಿದರೆ ಕಲೀಲ ಅಂತ ಕರೆಯಲಾಗುತ್ತದೆ. ಅಲ್ಲದೆ ಒಂದಷ್ಟು ಬಿಸಿ ರಕ್ತದ ಹುಡುಗಿಯರು ಬೈಕ್ ಓಡಿಸುತ್ತಾ, ಮಾರಿಯರಾಗಿ ಏನು ಮಾಡುತ್ತಾರೆ. ಇಂತಹ ಸನ್ನಿವೇಶಗಳು ಬಿಜಾಪುರದಲ್ಲಿ ತೆರೆದುಕೊಳ್ಳುತ್ತದೆ. ಈಗಿನ ಜನರು ಇಷ್ಟಪಡುವಂತ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಕಾಲ್ಪನಿಕ ದೃಶ್ಯಗಳನ್ನು ಸೃಷ್ಟಿಸಲಾಗಿದೆ. ಮಿಕ್ಕಂತೆ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಮಾಧ್ಯಮದ ಸಹಕಾರ ಬೇಕೆಂದು ಕೆ.ರಾಘವ್ ಕೋರಿಕೊಂಡರು.

ಬಡ ಕಾರ್ಮಿಕನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇಲ್ಲಿಯವೆರೆಗೂ ಮಾಡಿರದ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದೇನೆಂದು ನಾಯಕ ರಾಕೇಶ್ ಅಡಿಗ ಮಾತಿಗೆ ವಿರಾಮ ಹಾಕಿದರು. ಬಡ ಹಳ್ಳಿ ಹುಡುಗಿಯಾಗಿ ಖುಷಿ ನಾಯಕಿಯಾಗಿ ಹನ್ನೋಂದನೇ ಅವಕಾಶವಂತೆ. ಉಳಿದಂತೆ ಅಪೂರ್ವ, ಶಿಳ್ಳೆ ಮಂಜುನಾಥ್, ಜೋಗಿ ಉಮೇಶ್‌ಪುಂಗ, ಕಡ್ಡಿ ವಿಶ್ವ, ಬಲರಾಜವಾಡಿ, ಕಾಕ್ರೋಚ್ ಸುಧಿ, ವರ್ಧನ್, ಶೋಭಿತ, ಮಫ್ತಿ ಪ್ರದೀಪ್, ಪೂಜಾಶೆಟ್ಟಿ, ಶಿಲ್ಪ, ನಾಗೇಂದ್ರ ಕೋಟೆ ಮುಂತಾದವರು ನಟಿಸುತ್ತಿದ್ದಾರೆ.

ನಾಲ್ಕು ಹಾಡುಗಳಿಗೆ ಸಂಗೀತ ಮನುರಾಜ್, ಛಾಯಾಗ್ರಹಣ ಎಸ್.ಹಾಲೇಶ್, ಸಂಕಲನ ಗಿರೀಶ್‌ಕುಮಾರ್, ನೃತ್ಯ ರಘು.ಆರ್.ಜೆ, ಸಾಹಸ ಜಾನಿ ಮಾಸ್ಟರ್-ಮರಿಸ್ವಾಮಿ ಅವರದಾಗಿದೆ. ಬೆಂಗಳೂರು, ಬಿಜಾಪುರ ಮತ್ತು ಮೈಸೂರು ಸುಂದರ ತಾಣಗಳಲ್ಲಿ ನಲವತ್ತೈದು ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

ಕಾನ್ಧಾರಿ ಚಿತ್ರದಲ್ಲಿ ಉತ್ತರ ಕನ್ನಡ ಜಿಲ್ಲೆ ಬಣ್ಣನೆ

Hot this week

ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ಉರ್ದು ಉತ್ಸವ’ ಕನ್ನಡಕ್ಕೆ ಮಾಡುವ ದ್ರೋಹ

‘ವಿಶ್ವ ಉರ್ದು ದಿನ’(World Urdu Day) ವೆಂದು (ಕವಿ ಮತ್ತು ತತ್ವಜ್ಞಾನಿ ಅಲ್ಲಮ...

ಕರಡು ಮತದಾರರ ಪಟ್ಟಿಯಲ್ಲಿ ಕಾಣೆಯಾದ ಹೆಸರುಗಳು: ಚುನಾವಣಾ ಆಯೋಗದಿಂದ ವಿಶೇಷ ಪರಿಶೀಲನೆ

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಬಳಿಕ ಮತದಾರರ ಪಟ್ಟಿಯಿಂದ...

‘ಒಂದು ದೇಶ, ಒಂದು ಚುನಾವಣೆ’: ಸುಪ್ರೀಂ ಕೋರ್ಟ್‌ನೊಂದಿಗೆ ನಿಗದಿಯಾಗಿದ್ದ ಸಭೆ ರದ್ದು

ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಉದ್ದೇಶದ...

ಪಶುವೈದ್ಯರ ನೇಮಕಾತಿ ಪ್ರಶ್ನೆಪತ್ರಿಕೆ ಸೋರಿಕೆ

ಪಶುವೈದ್ಯರ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಮುಂದುವರಿದಂತೆ,...

Topics

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಗಾಂಧಿ ಜಯಂತಿ ಆಚರಣೆ

ಬೆಂಗಳೂರು: 157 ನೇ ಗಾಂಧಿ ಜಯಂತಿ(Gandhi Jayanthi) ಅಂಗವಾಗಿ ವಾರ್ತಾ ಮತ್ತು...

Related Articles