ಬೆಸ್ಕಾಂ ಗ್ರಾಹಕ ಸಂವಾದ ಸಭೆ: ಸೆಪ್ಟೆಂಬರ್ 19 ರಂದು ವಿದ್ಯುತ್‌ ಸಮಸ್ಯೆಗಳ ಪರಿಹಾರಕ್ಕೆ ಅವಕಾಶ

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ತನ್ನ ಎಲ್ಲಾ ಕಾರ್ಯ ಮತ್ತು ಪಾಲನಾ (O&M) ಉಪವಿಭಾಗಗಳ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 19, 2026 (ಶನಿವಾರ) ರಂದು ‘ಗ್ರಾಹಕ ಸಂವಾದ ಸಭೆ’ ಯನ್ನು(Customer Interaction Meeting) ಆಯೋಜಿಸಿದೆ.

ಪ್ರತಿ ತಿಂಗಳ ಮೂರನೇ ಶನಿವಾರದಂದು ನಿಯಮಿತವಾಗಿ ನಡೆಸಲಾಗುವ ಈ ಸಂವಾದ ಸಭೆಯು ಮಧ್ಯಾಹ್ನ 3.00 ಗಂಟೆಯಿಂದ ಸಾಯಂಕಾಲ 5.30 ಗಂಟೆಯವರೆಗೆ ನಡೆಯಲಿದೆ.

ವಿದ್ಯುತ್ ಸರಬರಾಜು, ಬಿಲ್ಲಿಂಗ್, ಹೊಸ ಸಂಪರ್ಕ ಹಾಗೂ ಇನ್ನಿತರ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವ ಸಾರ್ವಜನಿಕರು ಮತ್ತು ಬೆಸ್ಕಾಂ ಗ್ರಾಹಕರು ಈ ಸಭೆಯಲ್ಲಿ ನೇರವಾಗಿ ಪಾಲ್ಗೊಂಡು, ಬೆಸ್ಕಾಂ ಅಧಿಕಾರಿಗಳೊಂದಿಗೆ ಮುಖಾಮುಖಿ ಚರ್ಚಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ತಮ್ಮ ವ್ಯಾಪ್ತಿಯ ಬೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗೀಯ ಕಚೇರಿಗಳಲ್ಲಿ ನಡೆಯುವ ಈ ಸಭೆಯಲ್ಲಿ ಗ್ರಾಹಕ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಸೇವೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಬೆಸ್ಕಾಂ ಪ್ರಧಾನ ವ್ಯವಸ್ಥಾಪಕರು (ಗ್ರಾಹಕ ಸೇವೆ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಪಿಎಸ್‍ಸಿ: ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಹುದ್ದೆಗಳ ಮುಖ್ಯ ಪರೀಕ್ಷೆಯ ಅರ್ಹತಾ ಪಟ್ಟಿ ಪ್ರಕಟ

Hot this week

ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ಉರ್ದು ಉತ್ಸವ’ ಕನ್ನಡಕ್ಕೆ ಮಾಡುವ ದ್ರೋಹ

‘ವಿಶ್ವ ಉರ್ದು ದಿನ’(World Urdu Day) ವೆಂದು (ಕವಿ ಮತ್ತು ತತ್ವಜ್ಞಾನಿ ಅಲ್ಲಮ...

ಕರಡು ಮತದಾರರ ಪಟ್ಟಿಯಲ್ಲಿ ಕಾಣೆಯಾದ ಹೆಸರುಗಳು: ಚುನಾವಣಾ ಆಯೋಗದಿಂದ ವಿಶೇಷ ಪರಿಶೀಲನೆ

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಬಳಿಕ ಮತದಾರರ ಪಟ್ಟಿಯಿಂದ...

‘ಒಂದು ದೇಶ, ಒಂದು ಚುನಾವಣೆ’: ಸುಪ್ರೀಂ ಕೋರ್ಟ್‌ನೊಂದಿಗೆ ನಿಗದಿಯಾಗಿದ್ದ ಸಭೆ ರದ್ದು

ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಉದ್ದೇಶದ...

ಪಶುವೈದ್ಯರ ನೇಮಕಾತಿ ಪ್ರಶ್ನೆಪತ್ರಿಕೆ ಸೋರಿಕೆ

ಪಶುವೈದ್ಯರ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಮುಂದುವರಿದಂತೆ,...

Topics

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಗಾಂಧಿ ಜಯಂತಿ ಆಚರಣೆ

ಬೆಂಗಳೂರು: 157 ನೇ ಗಾಂಧಿ ಜಯಂತಿ(Gandhi Jayanthi) ಅಂಗವಾಗಿ ವಾರ್ತಾ ಮತ್ತು...

Related Articles