ಡಿಜಿಟಲ್ ಇಸ್ಪೀಟ್ ಸ್ಕಾನರ್ ಕಾರ್ಡ್ಗಳು, ಎಲೆಕ್ಟಾನಿಕ್ ಡಿವೈಜ್ಗಳು ಮತ್ತು ಉಪಕರಣಗಳು, ಕೃತ್ಯಕ್ಕೆ ಬಳಸಿರುವ 01 ಕಾರು, 01 ಆಟೋರಿಕ್ಷಾ, 03 ದ್ವಿಚಕ್ರ ವಾಹನ, 7 ಮೊಬೈಲ್ ಪೋನ್ ವಶ, ಒಟ್ಟು ಮೌಲ್ಯ 50 ಲಕ್ಷ.
ಸಿಸಿಬಿಯ (CCB) ವಿಶೇಷ ವಿಚಾರಣಾ ದಳದ ಅಧಿಕಾರಿ/ಸಿಬ್ಬಂದಿಗಳಿಗೆ ಆರ್.ಟಿ.ನಗರದ (RT Nagar) ದಿಣ್ಣೂರು ಮುಖ್ಯರಸ್ತೆಯ ಚಾಮುಂಡಿನಗರ ಧರ್ಮಣ್ಣ ಗಾರ್ಡನ್ನಲ್ಲಿ ಅಕ್ರಮವಾಗಿ ಹಣ ಸಂಪಾದನೆ ಮಾಡುವ ದುರುದ್ದೇಶದಿಂದ ಡಿಜಿಟಲ್ ಇಸ್ಪೀಟ್ ಸ್ಕಾನರ್ (Digital Cards) ಕಾರ್ಡ್ಗಳನ್ನು ಹಾಗೂ ಎಲೆಕ್ಟಾನಿಕ್ ಡಿವೈಜ್ಗಳನ್ನು (Electronic Device) ತಯಾರು ಮಾಡಿ ಕೆಲವು ವ್ಯಕ್ತಿಗಳಿಗೆ ಮಾರಾಟ ಮಾಡಿ ಜೂಜಾಟಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕರಿಗೆ ವಂಚಿಸಿ ಅಕ್ರಮ ಹಣ ಗಳಿಸುತ್ತಿರುವ ವ್ಯಕ್ತಿಗಳ ಬಗ್ಗೆ ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದಿರುತ್ತದೆ. ಈ ಕುರಿತು ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಸಿಸಿಬಿಯ ಪೊಲೀಸರು ಬಾತ್ಮೀದಾರರು ತಿಳಿಸಿದ ಸ್ಥಳಕ್ಕೆ ಧಾವಿಸಿ, ದಾಳಿ ಮಾಡಿ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಐವರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿ, ಸಹಚರರುಗಳೊಂದಿಗೆ ಸೇರಿಕೊಂಡು ಅಕ್ರಮ ಹಣ ಸಂಪಾದನೆ ಮಾಡುವ ಉದ್ಧೇಶದಿಂದ ಈ ಕೃತ್ಯವೆಸಗಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾರೆ. ಅವರುಗಳ ವಶದಿಂದ ನಡಿಜಿಟಲ್ ಇಸ್ಪೀಟ್ ಸ್ಕಾನರ್ ಕಾರ್ಡ್ಗಳು ಹಾಗೂ ಎಲೆಕ್ಟಾçನಿಕ್ ಡಿವೈಜ್ಗಳು ಮತ್ತು ಉಪಕರಣಗಳು, ಕೃತ್ಯಕ್ಕೆ ಬಳಸಿರುವ 01 ಕಾರು, 01 ಆಟೋರಿಕ್ಷಾ, 03 ದ್ವಿಚಕ್ರ ವಾಹನಗಳು, 07 ಮೊಬೈಲ್ ಪೋನ್ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ ಐವತ್ತು ಲಕ್ಷ ರೂಪಾಯಿ.
ದಿನಾಂಕ: 04/08/2026 ರಂದು ಐವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 10 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಐವರು ಆರೋಪಿಗಳನ್ನು ಸುದೀರ್ಘ ವಿಚಾರಣೆಗೊಳಪಡಿಸಿ, ಮಾಹಿತಿಗಳನ್ನು ಸಂಗ್ರಹಿಸಿ ದಿನಾಂಕ:07/08/2026 ರಂದು ಐವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ. ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಇತರೆ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರೆದಿದ್ದು, ತನಿಖೆ ಪ್ರಗತಿಯಲ್ಲಿರುತ್ತದೆ.
ಈ ಕಾರ್ಯಾಚರಣೆಯನ್ನು ಅಪರ ಪೊಲೀಸ್ ಆಯುಕ್ತರು, ಅಪರಾಧ ರವರ ಮಾರ್ಗದರ್ಶನದಲ್ಲಿ, ಉಪ ಪೊಲೀಸ್ ಆಯುಕ್ತರು, ಅಪರಾಧ-01 ರವರ ನೇತೃತ್ವದಲ್ಲಿ, ಸಿಸಿಬಿ ವಿಶೇ?À ವಿಚಾರಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರುಗಳ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತದೆ.

