ಬೆಂಗಳೂರು ನಗರದ ಕೆ.ಜಿ ಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ರೌಡಿ ವ್ಯಕ್ತಿ ಸೈಯದ್ ಮಾಝ್, (24) ಎಂಬಾತ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುತ್ತಾನೆ. ಈತನು ಹಲವು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದು ಹಾಗೂ ತನ್ನ ಬಳಿ ಕಾನೂನು ಬಾಹಿರವಾಗಿ ಮಾರಾಕಾಸ್ತ ಗಳನ್ನು ಸಾರ್ವಜನಿಕವಾಗಿ ಹಿಡಿದುಕೊಂಡು ಓಡಾಡುತ್ತಾ ಸಾರ್ವಜನಿಕರಿಗೆ ಭಯ ಹುಟ್ಟಿಸುತ್ತಾ, ತನ್ನ ಎದುರು ತಂಡದವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲು ಸಂಚು ರೂಪಿಸುತ್ತಿರುವುದಾಗಿ ಭಾತ್ಮೀದಾರರಿಂದ ಮಾಹಿತಿ ಸಂಗ್ರಹಿಸಿರುತ್ತಾರೆ.
ಅ0ತೆಯೇ, ಈತನನ್ನು ವಶಕ್ಕೆ ಪಡೆದು ಮನೆಯನ್ನು ಪರಿಶೀಲನೆ ಮಾಡಲಾಗಿ ಮಾರಕಾಸ್ತ ಗಳನ್ನು ಅಕ್ರಮವಾಗಿಟ್ಟು ಕೊಂಡಿರುವುದು ಕಂಡು ಬಂದಿರುತ್ತದೆ. ಹಾಗೂ ಮಾರಕಾಸ್ತçಗಳು ಸಮೇತ ಸದರಿ ವ್ಯಕಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ.
ಈ ಆರೋಪಿ ವಿರುದ್ದ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಭಾರತೀಯ ಶಸ್ತಾçಸ್ತಾç ಕಾಯ್ದೆ ಅಡಿ ಪ್ರಕರಣ ದಾಖಲಾಗಿರುತ್ತದೆ. ಈ ರೌಡಿಯ ವಿರುದ್ಧ ದಾಖಲಾಗಿರುವ ಒಟ್ಟು ಅಪರಾಧ ಪ್ರಕರಣಗಳ ಪೈಕಿ 02 ಪ್ರಕರಣಗಳಲ್ಲಿ ಉದ್ಘೋಷಣೆ ಮತ್ತು 06 ಪ್ರಕರಣಗಳಲ್ಲಿ ವಾರೆಂಟ್ ಜಾರಿ ಬಾಕಿ ಇರುವುದು ಕಂಡುಬ0ದಿರುತ್ತದೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಅಪರ ಪೊಲೀಸ್ ಆಯುಕ್ತರು, ಅಪರಾಧಗಳು ರವರಾದ, ಅಜಯ್ ಹಿಲೋರಿ ಐ.ಪಿ.ಎಸ್, ಮತ್ತು ಉಪ ಪೊಲೀಸ್ ಆಯುಕ್ತರು, ಅಪರಾಧ-1 ರವರಾದ, ಶ್ರೀಹರಿ ಬಾಬು, ಐ.ಪಿ.ಎಸ್, ರವರ ಮಾರ್ಗದರ್ಶನದಲ್ಲಿ, ಸಿಸಿಬಿ, ಸಂಘಟಿತ ಅಪರಾಧ ದಳ(ಪೂರ್ವ)ದ ಸಹಾಯಕ ಪೊಲೀಸ್ ಆಯುಕ್ತ ಆನಂದ ಸಿ.ಎಸ್, ಕೆಎಸ್‌ಪಿಎಸ್, ರವರ ನೇತೃತ ್ವದಲ್ಲಿ ಕೈಗೊಂಡಿರುತ್ತಾರೆ ಎಂದು ವರದಿಗಳು ತಿಳಿಸಿವೆ.
