ಯಶವಂತಪುರ ರೌಡಿ ಜಮ್‌ಶೀದ್ ಖಾನ್ ಗೂಂಡಾ ಕಾಯ್ದೆಯಡಿ ಬಂಧನ

Bengaluru : ಯಶವಂತಪುರ ಪೊಲೀಸ್ ಠಾಣೆ ರೌಡಿ ಜಮ್‌ಶೀದ್ ಅಲಿಯಾಸ್ ಜಮ್‌ಶೀದ್ ಖಾನ್(41 ವರ್ಷ) ಎಂಬಾತನನ್ನು ಗೂಂಡಾಕಾಯ್ದೆಯಲ್ಲಿ ಬಂಧಿಸುವಲ್ಲಿ ಯಶಸ್ವಿಆಗಿದ್ದಾರೆ. ಬೆಂಗಳೂರಿನ ಆರ್.ಎಂ.ಸಿ.ಯಾರ್ಡ್, ಸೋಲದೇವನಹಳ್ಳಿ, ಪೀಣ್ಯ, ರಾಜಗೋಪಾಲನಗರ, ಬಾಗಲಗುಂಟೆ, ವಿದ್ಯಾರಣ್ಯಪುರ, ಸಿದ್ದಾಪುರ, ಮೈಕೋಲೇಔಟ್, ಆಡುಗೋಡಿ, ಚನ್ನಪಟ್ಟಣ ಪೊಲೀಸ್ ಠಾಣೆಗಳಲ್ಲಿ ಸಕ್ರಿಯವಾಗಿ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ಕೊಲೆ ಪ್ರಯತ್ನ, ಸುಲಿಗೆ, ದರೋಡೆಗೆ ಸಂಚು, ದರೋಡೆ, ದೊಂಬಿ, ಹಲ್ಲೆ, ಮಾರಕಾಸ್ತçಗಳನ್ನಿಟ್ಟುಕೊಂಡು ಸಾರ್ವಜನಿಕರನ್ನು ಬೆದರಿಸುವುದು, ಗಾಂಜಾ ಮಾರಾಟ ಇತರೆ ಹಲವು ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ ಎಂದು ತಿಳಿದುಬಂದಿದೆ.
ಈತನು 2009ನೇ ಸಾಲಿನಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದು, ಈತನ ವಿರುದ್ಧ ಮೇಲ್ಕಂಡ ಪೊಲೀಸ್ ಠಾಣೆಗಳಲ್ಲಿ 2009 ರಿಂದ 2026ನೇ ಸಾಲಿನ ಜನವರಿ ಮಾಹೆಯವರೆಗೆ 31 ಪ್ರಕರಣ ದಾಖಲಾಗಿರುತ್ತವೆ ಎನ್ನಲಾಗಿದೆ.
2026ನೇ ಸಾಲಿನಲ್ಲಿ ಯಶವಂತಪುರ ಪೊಲೀಸ್ ಠಾಣೆಯ ಶಸ್ತç ಕಾಯ್ದೆ ಪ್ರಕರಣದಲ್ಲಿ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿರುತ್ತದೆ. ನಂತರ ಆತನು ಕಾರಾಗೃಹದಿಂದ ಬಿಡುಗಡೆಯಾಗಿದ್ದು,
ಈತ ನ್ಯಾಯಾಲಯದ ಜಾಮೀನಿನ ಷರತ್ತುಗಳನ್ನು ಉಲ್ಲಂಘನೆ ಮಾಡುತ್ತಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿರುತ್ತಾನೆ. ದಿನಾಂಕ 8-7-2026ರ0ದು ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಪ್ರೋಕ್ಲಮೇಷನ್‌ನಲ್ಲಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿರುತ್ತದೆ.
ಈತ ರೌಡಿ ಚಟುವಟಿಕೆ ಮತ್ತು ಅಪರಾಧ ಚಟುವಟಿಕೆಗಳನ್ನು ರೂಢಿಗತವಾಗಿ ಮುಂದುವರಿಸಿಕೊAಡು, ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡುತ್ತಿದ್ದುದರಿಂದ ಈತ ಗೂಂಡಾ ಕಾಯ್ದೆಯಡಿ ಬಂಧಿತ.
ಪೊಲೀಸ್ ಇನ್ಸ್ಪೆಕ್ಟರ್, ಯಶವಂತಪುರ ಪೊಲೀಸ್ ಠಾಣೆ ರವರು ಸಹಾಯಕ ಪೊಲೀಸ್ ಆಯುಕ್ತರು, ಯಶವಂತಪುರ ಹಾಗೂ ಉಪ ಪೊಲೀಸ್ ಆಯುಕ್ತರು, ಉತ್ತರ ವಿಭಾಗ ರವರಿಗೆ ವರದಿಯನ್ನು ಸಲ್ಲಿಸಿದ್ದು, ಸದರಿ ವರದಿಯನ್ನು ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರಿಗೆ ರವಾನಿಸಿದ್ದು, ಪೊಲೀಸ್ ಆಯುಕ್ತರು ವರದಿಯನ್ನು ಪರಿಶೀಲಿಸಿ, ಘನ ಉಚ್ಚ ನ್ಯಾಯಾಲಯದ ಸಲಹಾ ಮಂಡಳಿಗೆ ಹಾಗೂ ಕರ್ನಾಟಕ ಸರ್ಕಾರಕ್ಕೆ ವರದಿಯನ್ನು ಕಳುಹಿಸಿಕೊಟ್ಟಿರುತ್ತದೆ.

Hot this week

‘ಆಸ್ಟ್ರಲ್ ಪೇಜೆಂಟ್ಸ್’ 10ನೇ ಆವೃತ್ತಿ ಯಶಸ್ವಿ: ದಶಕದ ಸಂಭ್ರಮ

ಬೆಂಗಳೂರು : ಕಳೆದ ಒಂಬತ್ತು ವರ್ಷಗಳಿಂದ ವೈಶಿಷ್ಟ್ಯಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಯೋಜನೆಗೊಳ್ಳುತ್ತಾ...

“ಪ್ರೋಷ್ಟಪದಿ ಭಾಗವತ” ಧಾರ್ಮಿಕ ಪ್ರವಚನ

ಸುಧೀಂದ್ರನಗರ : ಶ್ರೀ ರಾಘವೇಂದ್ರ ಸೇವಾ ಸಮಿತಿಯ (Raghavendra Seva Samithi)...

ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಗಣೇಶೋತ್ಸವ

ಬೆಂಗಳೂರು : ನಾಗರಬಾವಿ (Nagarabhavi) ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ (Canara Bank...

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಿಷೇಧಿತ ಮೊಬೈಲ್ ಬಳಕೆ: 9 ಆರೋಪಿಗಳ ಬಂಧನ

ಪರಪ್ಪನ ಅಗ್ರಹಾರ (Parappana Agrahara) ಠಾಣೆಯಲ್ಲಿ (Station) 13/01/2026 ರಂದು ಬೆಂಗಳೂರು...

20 ಮಂದಿಗೆ ಉಚಿತ ಕಾಶಿ–ಪ್ರಯಾಗ್ ಯಾತ್ರೆ : ಉಚಿತ ವಿಮಾನ ಪ್ರಯಾಣದ ಸೌಭಾಗ್ಯ

ಬೆಂಗಳೂರು, ಸೆ. 10: ಮಹಾ ಶಿವರಾತ್ರಿ  (Shivarathri) ಅಂಗವಾಗಿ ವಿಜಯನಗರದಲ್ಲಿ ಆಯೋಜಿಸಲಾಗಿದ್ದ...

Topics

ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ ಸಂವತ್ಸರ: ಪರಾಭವ SAMVATSARA : PARABHAVA. ಆಯಣ: ದಕ್ಷಿಣಾಯನ AYANA:...

ರಾಜಕೀಯ ರಂಗದಲ್ಲಿ ಆಧುನಿಕತೆ ಮತ್ತು ಹೋರಾಟಕ್ಕೆ ಇನ್ನೊಂದು ಹೆಸರೇ ಡಿ.ಕೆ.ಶಿವಕುಮಾರ್ : DCM ಜಿ. ಪರಮೇಶ್ವರ

ಬೆಂಗಳೂರು: ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್(CM D.K.Shivakumar) ಅವರ ನೇತೃತ್ವದ ರಾಜ್ಯ...

“ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ಸರಿಯಾದ ಹಾದಿಯಲ್ಲಿ ನಡೆಯುತ್ತಿದೆ” : ಮಾಜಿ ಸಿ ಎಂ ಸಿದ್ದರಾಮಯ್ಯ ಪ್ರಶಂಸೆ.

ಬೆಂಗಳೂರು: ನಮ್ಮ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದರ ಜೊತೆಗೆ,...

Related Articles