Bengaluru : ಯಶವಂತಪುರ ಪೊಲೀಸ್ ಠಾಣೆ ರೌಡಿ ಜಮ್ಶೀದ್ ಅಲಿಯಾಸ್ ಜಮ್ಶೀದ್ ಖಾನ್(41 ವರ್ಷ) ಎಂಬಾತನನ್ನು ಗೂಂಡಾಕಾಯ್ದೆಯಲ್ಲಿ ಬಂಧಿಸುವಲ್ಲಿ ಯಶಸ್ವಿಆಗಿದ್ದಾರೆ. ಬೆಂಗಳೂರಿನ ಆರ್.ಎಂ.ಸಿ.ಯಾರ್ಡ್, ಸೋಲದೇವನಹಳ್ಳಿ, ಪೀಣ್ಯ, ರಾಜಗೋಪಾಲನಗರ, ಬಾಗಲಗುಂಟೆ, ವಿದ್ಯಾರಣ್ಯಪುರ, ಸಿದ್ದಾಪುರ, ಮೈಕೋಲೇಔಟ್, ಆಡುಗೋಡಿ, ಚನ್ನಪಟ್ಟಣ ಪೊಲೀಸ್ ಠಾಣೆಗಳಲ್ಲಿ ಸಕ್ರಿಯವಾಗಿ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ಕೊಲೆ ಪ್ರಯತ್ನ, ಸುಲಿಗೆ, ದರೋಡೆಗೆ ಸಂಚು, ದರೋಡೆ, ದೊಂಬಿ, ಹಲ್ಲೆ, ಮಾರಕಾಸ್ತçಗಳನ್ನಿಟ್ಟುಕೊಂಡು ಸಾರ್ವಜನಿಕರನ್ನು ಬೆದರಿಸುವುದು, ಗಾಂಜಾ ಮಾರಾಟ ಇತರೆ ಹಲವು ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ ಎಂದು ತಿಳಿದುಬಂದಿದೆ.
ಈತನು 2009ನೇ ಸಾಲಿನಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದು, ಈತನ ವಿರುದ್ಧ ಮೇಲ್ಕಂಡ ಪೊಲೀಸ್ ಠಾಣೆಗಳಲ್ಲಿ 2009 ರಿಂದ 2026ನೇ ಸಾಲಿನ ಜನವರಿ ಮಾಹೆಯವರೆಗೆ 31 ಪ್ರಕರಣ ದಾಖಲಾಗಿರುತ್ತವೆ ಎನ್ನಲಾಗಿದೆ.
2026ನೇ ಸಾಲಿನಲ್ಲಿ ಯಶವಂತಪುರ ಪೊಲೀಸ್ ಠಾಣೆಯ ಶಸ್ತç ಕಾಯ್ದೆ ಪ್ರಕರಣದಲ್ಲಿ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿರುತ್ತದೆ. ನಂತರ ಆತನು ಕಾರಾಗೃಹದಿಂದ ಬಿಡುಗಡೆಯಾಗಿದ್ದು,
ಈತ ನ್ಯಾಯಾಲಯದ ಜಾಮೀನಿನ ಷರತ್ತುಗಳನ್ನು ಉಲ್ಲಂಘನೆ ಮಾಡುತ್ತಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿರುತ್ತಾನೆ. ದಿನಾಂಕ 8-7-2026ರ0ದು ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಪ್ರೋಕ್ಲಮೇಷನ್ನಲ್ಲಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿರುತ್ತದೆ.
ಈತ ರೌಡಿ ಚಟುವಟಿಕೆ ಮತ್ತು ಅಪರಾಧ ಚಟುವಟಿಕೆಗಳನ್ನು ರೂಢಿಗತವಾಗಿ ಮುಂದುವರಿಸಿಕೊAಡು, ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡುತ್ತಿದ್ದುದರಿಂದ ಈತ ಗೂಂಡಾ ಕಾಯ್ದೆಯಡಿ ಬಂಧಿತ.
ಪೊಲೀಸ್ ಇನ್ಸ್ಪೆಕ್ಟರ್, ಯಶವಂತಪುರ ಪೊಲೀಸ್ ಠಾಣೆ ರವರು ಸಹಾಯಕ ಪೊಲೀಸ್ ಆಯುಕ್ತರು, ಯಶವಂತಪುರ ಹಾಗೂ ಉಪ ಪೊಲೀಸ್ ಆಯುಕ್ತರು, ಉತ್ತರ ವಿಭಾಗ ರವರಿಗೆ ವರದಿಯನ್ನು ಸಲ್ಲಿಸಿದ್ದು, ಸದರಿ ವರದಿಯನ್ನು ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರಿಗೆ ರವಾನಿಸಿದ್ದು, ಪೊಲೀಸ್ ಆಯುಕ್ತರು ವರದಿಯನ್ನು ಪರಿಶೀಲಿಸಿ, ಘನ ಉಚ್ಚ ನ್ಯಾಯಾಲಯದ ಸಲಹಾ ಮಂಡಳಿಗೆ ಹಾಗೂ ಕರ್ನಾಟಕ ಸರ್ಕಾರಕ್ಕೆ ವರದಿಯನ್ನು ಕಳುಹಿಸಿಕೊಟ್ಟಿರುತ್ತದೆ.

