ಜುಲೈ 3 ಮತ್ತು 4 ರಂದು ‘ಅಗ್ರಿ-ಟೆಕ್ ಮತ್ತು ಪ್ಲಾಂಟೇಶನ್ 5.0′ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜನೆ

ಬೆಂಗಳೂರು, ಜುಲೈ 01: ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಪ್ಲಾಂಟೇಶನ್ ಮ್ಯಾನೇಜ್ಮೆಮೆಂಟ್ (IIPMB), ICAR-ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (CPCRI), ICAR-ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR), ಮತ್ತು ICAR-ಭಾರತೀಯ ಸಾಂಬಾರ ಪದಾರ್ಥಗಳ ಸಂಶೋಧನಾ ಸಂಸ್ಥೆ (IISR) ಗಳ ಸಹಯೋಗದೊಂದಿಗೆ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಜುಲೈ 3 ಮತ್ತು 4 ರಂದು ಬೆಂಗಳೂರಿನ IIPMB ಆವರಣದಲ್ಲಿ ಆಯೋಜಿಸುತ್ತಿದೆ.

“ಅಗ್ರಿ-ಟೆಕ್ ಮತ್ತು ಪ್ಲಾಂಟೇಶನ್ 5.0: ಕೃಷಿ ವ್ಯವಹಾರದ ಭವಿಷ್ಯವನ್ನು ರೂಪಿಸುವ ಆವಿμÁ್ಕರಗಳು, ಸುಸ್ಥಿರತೆ ಮತ್ತು ಮೌಲ್ಯ ಸರಪಳಿ ಆಧಾರಿತ ವ್ಯಾಪಾರ ಕಾರ್ಯತಂತ್ರಗಳು” ಎಂಬ ವಿಷಯದ ಮೇಲಿನ ಈ ಸಮ್ಮೇಳನವು ನಡೆಯಲಿದೆ.

ಸಮ್ಮೇಳನದ ಪ್ರಮುಖ ಮುಖ್ಯಾಂಶಗಳು:
ಸಂಶೋಧನಾ ಪ್ರಬಂಧಗಳ ಮಂಡನೆ: ದೇಶದಾದ್ಯಂತದ ವಿದ್ವಾಂಸರು, ಸಂಶೋಧಕರು, ಶಿಕ್ಷಣ ತಜ್ಞರು ಮತ್ತು ಉದ್ಯಮದ ವೃತ್ತಿಪರರು ಸುಮಾರು 100 ಸಂಶೋಧನಾ ಪ್ರಬಂಧಗಳನ್ನು ಈ ಸಮ್ಮೇಳನದಲ್ಲಿ ಮಂಡಿಸಲಿದ್ದಾರೆ.

ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಅಮೆರಿಕಾ (USA), ಶ್ರೀಲಂಕಾ ಮತ್ತು ನೆದಲ್ಯಾರ್ಂಡ್ಸ್ ದೇಶಗಳ ಅಂತಾÀರಾಷ್ಟ್ರೀಯ ತಜ್ಞರು ಹಾಗೂ ಭಾರತದ ಸರ್ಕಾರಿ, ಉದ್ಯಮ ಮತ್ತು ಶೈಕ್ಷಣಿಕ ವಲಯದ ಪ್ರಮುಖರು ಭಾಗವಹಿಸಲಿದ್ದಾರೆ.

ಕೃಷಿ ಮತ್ತು ತೋಟಗಾರಿಕಾ ವಲಯದಲ್ಲಿ ಉದಯೋನ್ಮುಖ ತಂತ್ರಜ್ಞಾನಗಳು, ಸುಸ್ಥಿರತೆಯ ಸವಾಲುಗಳು, ಡಿಜಿಟಲ್ ರೂಪಾಂತರ ಮತ್ತು ನವೀನ ಉದ್ಯಮ ಮಾದರಿಗಳ ಬಗ್ಗೆ ಚರ್ಚಿಸಲು ಸಂಶೋಧಕರು, ನೀತಿ ನಿರೂಪಕರು, ಉದ್ಯಮಿಗಳು ಮತ್ತು ವಿದ್ಯಾರ್ಥಿಗಳಿಗೆ ಜಾಗತಿಕ ವೇದಿಕೆಯನ್ನು ಕಲ್ಪಿಸುವುದು ಇದರ ಉದ್ದೇಶವಾಗಿದೆ.

ಕಾರ್ಯಕ್ರಮದಲ್ಲಿ ತಾಂತ್ರಿಕ ಅವಧಿಗಳು, ಪ್ಯಾನೆಲ್ ಚರ್ಚೆಗಳು, ಪೋಸ್ಟರ್ ಪ್ರಸ್ತುತಿಗಳು ಮತ್ತು ‘ಅಗ್ರಿ ಬಿಸಿನೆಸ್ ಕೊಲಾಬರೇಷನ್ ಫೋರಮ್’ ಮೂಲಕ ಪಾಲುದಾರರ ನಡುವೆ ಜ್ಞಾನ ವಿನಿಮಯ ಮತ್ತು ಸಹಭಾಗಿತ್ವವನ್ನು ವೃದ್ಧಿಸಲಾಗುತ್ತದೆ.

ಭಾರತ ಸರ್ಕಾರದ ಎಂಎಸ್‍ಎಂಇ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವರಾದ  ಶೋಭಾ ಕರಂದ್ಲಾಜೆ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದು,  ಐಟಿಸಿ ಲಿಮಿಟೆಡ್  ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಸೋಮನಾಥ್ ಚಟರ್ಜಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ,  ಸಿ. ಮುರುಗನ್, (ಡೆಪ್ಯುಟಿ ಚೇರ್‍ಪರ್ಸನ್, ಟೀ ಬೋರ್ಡ್ ಆಫ್ ಇಂಡಿಯಾ) ಎಂ. ಎಸ್. ಮಣಿವಣ್ಣನ್, (ಕಾರ್ಯದರ್ಶಿ, ಸ್ಪೈಸಸ್ ಬೋರ್ಡ್), ಕೂರ್ಮಾ ರಾವ್ ಎಂ.,  (ಸಿಇಒ ಮತ್ತು ಕಾರ್ಯದರ್ಶಿ, ಕಾಫಿ ಬೋರ್ಡ್ ಆಫ್ ಇಂಡಿಯಾ),  ಎನ್. ಭವಾನಿ ಶ್ರೀ,  (ರಾಷ್ಟ್ರೀಯ ಅರಿಶಿನ ಮಂಡಳಿ),  ಡಾ. ಕೆ. ಬಾಲಚಂದ್ರ ಹೆಬ್ಬಾರ್ (ನಿರ್ದೇಶಕರು, ICAR-CPCRI), ಡಾ. ತುಸಾರ್ ಕಾಂತಿ ಬೆಹೆರಾ (ನಿರ್ದೇಶಕರು, ICAR-IIHR) ಅವರು ಉಪಸ್ಥಿತರಿರುವರು.

ಈ ಸಮ್ಮೇಳನವು ಕೃಷಿ ಮತ್ತು ತೋಟಗಾರಿಕೆ ಉದ್ಯಮದಲ್ಲಿ ನಾವೀನ್ಯತೆ, ಸುಸ್ಥಿರತೆ ಮತ್ತು ಸ್ಪರ್ಧಾತ್ಮಕತೆಯನ್ನು ಉತ್ತೇಜಿಸಲು ಅಗತ್ಯವಿರುವ ಕಾರ್ಯಸಾಧ್ಯವಾದ ಒಳನೋಟಗಳು ಮತ್ತು ನೀತಿ ಶಿಫಾರಸುಗಳನ್ನು ರೂಪಿಸುವ ನಿರೀಕ್ಷೆಯಿದೆ ಎಂದು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಪ್ಲಾಂಟೇಶನ್ ಮ್ಯಾನೇಜ್ಮೆಮೆಂಟ್ ಪ್ರಕಟಣೆಯಲ್ಲಿ ತಿಳಿಸಿದೆ.

Hot this week

ಪತ್ರಕರ್ತರು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು-ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಪತ್ರಕರ್ತರು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು-ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರು, ಜುಲೈ 01:ಏನೇ ವೈಯಕ್ತಿಕ...

ಕರ್ನಾಟಕದಲ್ಲಿ ಕನಿಷ್ಠ ವೇತನ ಪರಿಷ್ಕರಣೆಯ ಅಂತಿಮ ಅಧಿಸೂಚನೆಯನ್ನು ಮರುಪರಿಶೀಲಿಸುವ/ಹಿಂಪಡೆಯುವ ಕ್ರಮದ ವಿರುದ್ಧ

ಕರ್ನಾಟಕದಲ್ಲಿ ಕನಿಷ್ಠ ವೇತನ ಪರಿಷ್ಕರಣೆಯ ಅಂತಿಮ ಅಧಿಸೂಚನೆಯನ್ನು ಮರು ಪರಿಶೀಲಿಸುವ/ಹಿಂಪಡೆಯುವ ಕ್ರಮದ...

ಗಣಿ ಭೂವಿಜ್ಞಾನ ಇಲಾಖೆಯ ರಾಜಧನ ಪಾವತಿ ಅವ್ಯವಸ್ಥೆಯಿಂದ ಗಣಿ ಗುತ್ತಿಗೆದಾರರಿಗೆ ಸಂಕಷ್ಟ

ಬೆಂಗಳೂರು:  ಅಧ್ಯಕ್ಷರಾದ ರವೀಂದ್ರ ಶೆಟ್ಟಿ(Ravindra Shetty) ಮಾತನಾಡಿ, 2023ರಲ್ಲಿ ಕಾನೂನುಬದ್ಧವಾಗಿ ಗಣಿ...

Topics

ಪತ್ರಕರ್ತರು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು-ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಪತ್ರಕರ್ತರು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು-ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರು, ಜುಲೈ 01:ಏನೇ ವೈಯಕ್ತಿಕ...

ಕರ್ನಾಟಕದಲ್ಲಿ ಕನಿಷ್ಠ ವೇತನ ಪರಿಷ್ಕರಣೆಯ ಅಂತಿಮ ಅಧಿಸೂಚನೆಯನ್ನು ಮರುಪರಿಶೀಲಿಸುವ/ಹಿಂಪಡೆಯುವ ಕ್ರಮದ ವಿರುದ್ಧ

ಕರ್ನಾಟಕದಲ್ಲಿ ಕನಿಷ್ಠ ವೇತನ ಪರಿಷ್ಕರಣೆಯ ಅಂತಿಮ ಅಧಿಸೂಚನೆಯನ್ನು ಮರು ಪರಿಶೀಲಿಸುವ/ಹಿಂಪಡೆಯುವ ಕ್ರಮದ...

ಗಣಿ ಭೂವಿಜ್ಞಾನ ಇಲಾಖೆಯ ರಾಜಧನ ಪಾವತಿ ಅವ್ಯವಸ್ಥೆಯಿಂದ ಗಣಿ ಗುತ್ತಿಗೆದಾರರಿಗೆ ಸಂಕಷ್ಟ

ಬೆಂಗಳೂರು:  ಅಧ್ಯಕ್ಷರಾದ ರವೀಂದ್ರ ಶೆಟ್ಟಿ(Ravindra Shetty) ಮಾತನಾಡಿ, 2023ರಲ್ಲಿ ಕಾನೂನುಬದ್ಧವಾಗಿ ಗಣಿ...

ಬೆಂಗಳೂರಿಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಬೆಂಗಳೂರಿಗೆ ಆಗಮಿಸಿದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu)...

ಮನೆಗೊಂದು ಗ್ರಂಥಾಲಯ ಕನ್ನಡಿಗರಿಗೆ ಹೆಮ್ಮೆ

ಮನೆಗೊಂದು ಗ್ರಂಥಾಲಯ ಕನ್ನಡಿಗರಿಗೆ ಹೆಮ್ಮೆ *ಹಾಸನ: ನಗರದ ಶಾಂತಿನಗರದ ಹಲ್ಮಿಡಿ ಶಾಸನ ವೃತ್ತ,...

ಗಾಂಧಿ ಭವನದಲ್ಲಿ ಜು.1ಕ್ಕೆ ಪತ್ರಿಕಾ ದಿನಾಚರಣೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟನೆ

ಗಾಂಧಿ ಭವನದಲ್ಲಿ ಜು.1ಕ್ಕೆ ಪತ್ರಿಕಾ ದಿನಾಚರಣೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟನೆಬೆಂಗಳೂರು: ಮಾಧ್ಯಮ...

Related Articles