ಸುಭುದೇಂದ್ರ ತೀರ್ಥ ಸ್ವಾಮೀಜಿ ರಕ್ಷಾ ಫೌಂಡೇಷನ್ ನಿಂದ ಶ್ರೀ ಲಲಿತಾ ಸಹಸ್ರನಾಮ ಪಠಣ

 ಜಯನಗರ,ಜೂ.19: ಜಾತಿ, ಮತ, ಧರ್ಮ ಭೇಧವಿಲ್ಲ, ದೇವರ ಮುಂದೆ ಎಲ್ಲರು ಸಮಾನರು ಎಂದು ಮಂತ್ರಾಲಯ (Mantralaya) ಮಠದ ಸುಭುದೇಂದ್ರ ತೀರ್ಥ ಸ್ವಾಮೀಜಿ (Subhudendra Swamiji) ಹೇಳಿದ್ದಾರೆ. ಚಂದ್ರಗುಪ್ತಮೌರ್ಯ ಆಟದ ಮೈದಾನದಲ್ಲಿ ರಕ್ಷಾ ಫೌಂಡೇಷನ್ ನಿಂದ (Raksha Foundation) 4ನೇ ವರ್ಷದ ಲಲಿತಾ ಸಹಸ್ರನಾಮ ಸಮಾರಂಭ ಆಯೋಜಿಸಿದ್ದು, 3000 ಕ್ಕೂ ಹೆಚ್ಚು ಮಹಿಳೆಯರು ಶ್ರೀ ಲಲಿತಾ ಸಹಸ್ತನಾಮ ಸ್ತ್ರೋತ್ರ ಪಠಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ, ಶಾಸಕರಾದ ಸಿ.ಕೆ.ರಾಮಮೂರ್ತಿ, ಆರ್.ಎಸ್.ಎಸ್.ಕ್ಷೇತ್ರಿಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ಮತ್ತು ಚಲನಚಿತ್ರ ನಟಿ ಪ್ರಣೀತ ಸುಭಾಶ್, ಬಿಬಿಎಂಪಿ ಮಾಜಿ ಸದಸ್ಯರಾದ ನಾಗರತ್ನ ರಾಮಮೂರ್ತಿ ಭಾಗವಹಿಸಿದ್ದರು.
ಬಳಿಕ ಮಾತನಾಡಿದ ಸುಭುದೇಂದ್ರ ತೀರ್ಥ ಸ್ವಾಮೀಜಿ, ಉದ್ಯಾನನಗರಿ ಬೆಂಗಳೂರಿನಲ್ಲಿ ಲಲಿತಾ ಸಹಸ್ರನಾಮ ಪೂಜೆ, ಪಠಣ ಕಾರ್ಯಕ್ರಮವನ್ನು ನಾಲ್ಕು ವರ್ಷಗಳಿಂದ ಹಮ್ಮಿಕೊಂಡು ಬರುತ್ತಿರುವುದು ಉತ್ತಮ ಬೆಳವಣಿಗೆ. ರಕ್ಷಾ ಫೌಂಡೇಷನ್ ನಿಂದ 14ವರ್ಷದಿಂದ ನೋಟ್ ಪುಸ್ತಕವನ್ನು ಕಾರ್ಯಕ್ರಮ ಮಾಡುತ್ತಿದೆ. ಜಾತಿ ಮತ ಪಂಥ ಭೇದವಿಲ್ಲದೇ ಎಲ್ಲರು ಸೇರಿ ಲಲಿತಾರಾಧನೆ ಮಾಡುತ್ತಿದ್ದಾರೆ. ಶ್ರೀಮಂತರು, ಮಧ್ಯಮ ವರ್ಗ, ಬಡವರು, ಪೌರ ಕಾರ್ಮಿಕರು ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಪೌರ ಕಾರ್ಮಿಕರು ಕರ್ತವ್ಯದ ಜೊತೆಯಲ್ಲಿ ದೈವ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ದೇವರ ಮುಂದೆ ಎಲ್ಲರು ಸಮಾನರು. ಸನಾತನ ಹಿಂದೂ ಧರ್ಮದಲ್ಲಿ ವೈಶಿಷ್ಯಗಳನ್ನು ಕಾಣಬಹುದು. ಲೋಕಕಂಠಕರನ್ನು ನಾಶವಾಗಿ ಶಿಷ್ಟರನ್ನು ರಕ್ಷಣೆ ಮಾಡಲು ಶ್ರೀ ಲಲಿತಾ ಅವತಾರಿಸಿದ್ದಾಳೆ. ಪ್ರತಿನಿತ್ಯ ಶ್ರೀ ಲಲಿತಾ ತಾಯಿ ಉಪಾಸನೆ, ಸ್ಮರಣೆ ಮಾಡಿದರೆ ಕಷ್ಟ ದೂರವಾಗಲಿದೆ ಎಂದರು. ಬಿ.ವೈ.ವಿಜಯೇಂದ್ರ ಮಾತನಾಡಿ, ರಕ್ಷಾ ಫೌಂಡೇಷನ್ ನಿಂದ ಪುಣ್ಯದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಲಲಿತಾಂಬೆಯ ಆರಾಧನೆಯಿಂದ ಮತ್ತು ಸ್ವಾಮೀಜಿ ಆಶೀರ್ವಾದ ಮಾರ್ಗದರ್ಶನ ಎಲ್ಲರಿಗೂ ಲಭಿಸಬೇಕು. ದೇಶ ಮತ್ತು ಸಂಸ್ಕೃತಿ ಸಂಪ್ರಾದಯ ಉಳಿಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದದ್ದು ಎಂದು ಹೇಳಿದರು.
ಸಿ.ಕೆ.ರಾಮಮೂರ್ತಿ ಮಾತನಾಡಿ, ಹೆಣ್ಣು ತಾಯಿ, ತಂಗಿ ಅಕ್ಕ, ಪತ್ನಿಯಾಗಿ ಮತ್ತು ಕುಟುಂಬದ ಜೊತೆಯಲ್ಲಿ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾಳೆ. ಪಾಪ ಪರಿಹಾರ, ಗೃಹ ದೋಷ ನಿವಾರಣೆ, ಶತ್ರುಭಯ, ಸಂತಾನಭಾಗ್ಯ ಲಭಿಸುತ್ತದೆ ಎಂದು ನಮ್ಮ ಪುರಾಣದಲ್ಲಿ ಉಲ್ಲೇಖವಿದೆ. ನಾನು ಎಂಬುದು ಅಹಂಕಾರ, ನಾವೆಲ್ಲರು ಎಂದು ಕೂಡಿ ಬಾಳಬೇಕು ಅದು ನಿಜವಾದ ಜೀವನ ಅರ್ಥ ಎಂದರು. ಮಾಜಿ ಪಾಲಿಕೆ ಸದಸ್ಯರುಗಳಾದ ಬಿ.ಸೋಮಶೇಖರ್, ಮಾಲತಿ ಸೋಮಶೇಖರ್, ಚಂದ್ರಶೇಖರ್ ರಾಜು, ಗೋವಿಂದನಾಯ್ಡು, ಜೆಲ್ಲಿ ರಮೇಶ್, ಧನರಾಜ್, ದೀಪಿಕಾ ಮಂಜುನಾಥ್ ರೆಡ್ಡಿ, ಚನ್ನಗಿರಿಯಪ್ಪ, ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಮುಖರು, ಸಾರ್ವಜನಿಕರು ಭಾಗವಹಿಸಿದ್ದರು.

Hot this week

ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಜುಲೈ 1 ರಂದು ಪತ್ರಿಕಾ ದಿನಾಚರಣೆ ಹಾಗೂ ವಿಚಾರ ಸಂಕಿರಣ

ಬೆಂಗಳೂರು, ಜೂನ್ 29 (ಕರ್ನಾಟಕ ವಾರ್ತೆ) :ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ...

ಶ್ರೀ ಕೃಷ್ಣ ರುಕ್ಷ್ಮಿಣಿ ಕಾನೂನು ಮಹಾವಿದ್ಯಾಲಯದಲ್ಲಿ ಮೌಲ್ಯೋತ್ಸವ

ಬೆಂಗಳೂರು: ಚಿಕ್ಕಜಾಲದ ಚೊಕ್ಕನಹಳ್ಳಿಯಲ್ಲಿರುವ ಶ್ರೀ ರೇವಣ ಸಿದ್ದೇಶ್ವರ ಎಜುಕೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ...

ಸಂಗೀತಾಸಕ್ತರನ್ನು ರಂಜಿಸಿದ “ನಾದ ನಮನ” ಸಂಗೀತ ಸಂಜೆ

ಬೆಂಗಳೂರು, ಜೂ.27: ಸಾಕಿ ಚಾರಿಟೇಬಲ್ ಟ್ರಸ್ಟ್(Saki Charitable Trust) ನಿಂದ ನಗರದ...

ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ ಸಿ.ಎ ಡಾ. ವಿಷ್ಣು ಭರತ್ ಆಲಂಪಳ್ಳಿ ಪುನರಾಯ್ಕೆ

ಬೆಂಗಳೂರು,ಜೂ.29: ನಗರದ 91 ವರ್ಷಗಳ ಹಳೆಯ ಎಪಿಎಸ್ ಶಿಕ್ಷಣ ಸಂಸ್ಥೆಗಳಿಗೆ ನೂತನ...

Topics

ಶ್ರೀರಾಮ ಮಂದಿರದ ಹುಂಡಿ ಹಣ ದುರುಪಯೋಗ; ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ !

ಅಯೋಧ್ಯೆಯ ಶ್ರೀರಾಮ ಮಂದಿರವು ಕೇವಲ ಒಂದು ಧಾರ್ಮಿಕ ಸ್ಥಳವಲ್ಲ, ಅದು ಜಗತ್ತಿನಾದ್ಯಂತ...

ರೋಟರಿ ಜಿಲ್ಲೆ 3191ರ ಜಿಲ್ಲಾ ಗವರ್ನರ್ ಆಗಿ ಡಾ. ಅನಿಲ್ ಗುಪ್ತ ಪದಗ್ರಹಣ (Dr. Anil Gupta sworn in as District Governor of Rotary District 3191)

ಬೆಂಗಳೂರು, ಜೂ29: ಉದ್ಯಮಿ ಹಾಗೂ ದೀರ್ಘಕಾಲದ ರೋಟೇರಿಯನ್ ಡಾ. ಅನಿಲ್ ಗುಪ್ತ...

ಶ್ರೀರಾಮಮಂದಿರದ ಹುಂಡಿ ಹಣ ದುರುಪಯೋಗ; ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ !

ಅಯೋಧ್ಯೆಯ ಶ್ರೀರಾಮ ಮಂದಿರವು(Ayodhya Sree Ram Temple) ಕೇವಲ ಒಂದು ಧಾರ್ಮಿಕ...

Related Articles