ಸಿಸಿಬಿ, ಚಾಮರಾಜಪೇಟೆ, ಕೋರಮಂಗಲ, ಬಾಣಸವಾಡಿ, ವೈಟ್‌ಫೀಲ್ಡ್, ಮಲ್ಲೇಶ್ವರಂ
ಹಾಗೂ ಪುಲಕೇಶಿನಗರ ಪೊಲೀಸರ ಕಾರ್ಯಾಚರಣೆ,
ನಿಷೇಧಿತ ಮಾದಕ ವಸ್ತುಗಳಾದ 13 ಕೆಜಿ 135 ಗ್ರಾಂ ಎಂ.ಡಿ.ಎಂ.ಎ, 181.3 ಗ್ರಾಂ ಕೋಕೇನ್, 15 ಗ್ರಾಂ ಹೆರಾಯಿನ್, 59 ಕೆಜಿ 322 ಗ್ರಾಂ ಗಾಂಜಾ, 07 ಕೆಜಿ ಅಫೀಮು, 225 ಗ್ರಾಂ ಮೆಫೆಡ್ರೋನ್, 06 ಮೊಬೈಲ್ ಪೋನ್, 01 ಕಾರು, 01 ದ್ವಿಚಕ್ರ ವಾಹನ ವಶ, 01 ವಿದೇಶಿಯ, 10 ಹೊರ ರಾಜ್ಯದ(ಓರ್ವ ಮಹಿಳೆ), 06 ಸ್ಥಳಿಯ ವ್ಯಕ್ತಿಗಳೂ ಸೇರಿದಂತೆ ಒಟ್ಟು 17 ವ್ಯಕ್ತಿಗಳ ಬಂಧನ,
ಒಟ್ಟು ಮೌಲ್ಯ ₹ 15.29 ಕೋಟಿ (ಮಾರುಕಟ್ಟೆ ಮೌಲ್ಯ ₹ 30.58 ಕೋಟಿ)
ಸಿಸಿಬಿ, ಚಾಮರಾಜಪೇಟೆ, ಕೋರಮಂಗಲ, ಬಾಣಸವಾಡಿ, ವೈಟ್‌ಫೀಲ್ಡ್, ಮಲ್ಲೇಶ್ವರಂ ಹಾಗೂ ಪುಲಕೇಶಿನಗರ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದಾಗಿ ಭಾತ್ಮೀದಾರರಿಂದ ಅಧಿಕಾರಿ/ಸಿಬ್ಬಂದಿಯವರುಗಳಿಗೆ ವಿವಿಧ ದಿನಾಂಕಗಳ0ದು ಖಚಿತ ಮಾಹಿತಿಗಳು ದೊರೆತ್ತಿರುತ್ತವೆ. ಈ ಮಾಹಿತಿಗಳನ್ನಾಧಾರಿಸಿ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿ, ಭಾತ್ಮೀದಾರರು ತಿಳಿಸಿದ ಸ್ಥಳಗಳ ಮೇಲೆ ದಾಳಿ ಮಾಡಿ, 01 ವಿದೇಶಿಯ, 10 ಹೊರ ರಾಜ್ಯದ(ಓರ್ವ ಮಹಿಳೆ) ಹಾಗೂ 06 ಸ್ಥಳಿಯ ವ್ಯಕ್ತಿಗಳೂ ಸೇರಿದಂತೆ ಒಟ್ಟು 17 ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ.
ವಶಕ್ಕೆ ಪಡೆದ 17 ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿ, ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ವಿದೇಶ, ಹೊರ ರಾಜ್ಯದ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡಿರುತ್ತಾರೆೆ.
ಅವರುಗಳ ವಶದಲ್ಲಿದ್ದ ನಿಷೇಧಿತ ಮಾದಕ ವಸ್ತುಗಳಾದ 13 ಕೆಜಿ 135 ಗ್ರಾಂ ಎಂ.ಡಿ.ಎA.ಎ, 181.3 ಗ್ರಾಂ ಕೋಕೇನ್, 15 ಗ್ರಾಂ ಹೆರಾಯಿನ್, 59 ಕೆಜಿ 322 ಗ್ರಾಂ ಗಾಂಜಾ, 07 ಕೆಜಿ ಅಫೀಮು, 225 ಗ್ರಾಂ ಮೆಫೆಡ್ರೋನ್, 06 ಮೊಬೈಲ್ ಪೋನ್, 01 ಕಾರು, 01 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ ₹ 15,29,00,000/-(ಹದಿನೈದು ಕೋಟಿ ಇಪ್ಪತ್ತೊಂಭತ್ತು ಲಕ್ಷ ರೂಪಾಯಿ). (ಮಾರುಕಟ್ಟೆ ಮೌಲ್ಯ ₹ 30.58 ಕೋಟಿ). ಈ ಪ್ರಕರಣದ ಆರೋಪಿಗಳಿಗೆ ನಿಷೇಧಿತ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಅಪರಿಚಿತ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರೆದಿದ್ದು, ಪ್ರಕರಣಗಳು ಪ್ರಗತಿಯಲ್ಲಿರುತ್ತವೆ.
ಈ ಪ್ರಕರಣಗಳಲ್ಲಿ ಭಾಗಿಯಾಗಿದ್ದ 17 ಆರೋಪಿಗಳನ್ನು ವಿವಿಧ ದಿನಾಂಕಗಳ0ದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು 17 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಾಚರಣೆಗಳನ್ನು ಉಪ ಪೊಲೀಸ್ ಆಯುಕ್ತರುಗಳಾದ ಅಪರಾಧ-02 ವಿಭಾಗದ ಶ್ರೀ.ರಾಜಾ ಇಮಾಮ್ ಕಾಸೀಂ.ಪಿ, ಪಶ್ಚಿಮ ವಿಭಾಗದ ಶ್ರೀ.ಯತೀಶ್.ಎನ್, ಐಪಿಎಸ್, ಆಗ್ನೇಯ ವಿಭಾಗದ ಮೊಹಮ್ಮದ್ ಸುಜೀತ.ಎಂ.ಎಸ್, ಐಪಿಎಸ್, ಪೂರ್ವ ವಿಭಾಗದ ಡಾ:ವಿಕ್ರಮ್ ಅಮಟೆ, ಐಪಿಎಸ್, ವೈಟ್‌ಫೀಲ್ಡ್ ವಿಭಾಗದ .ಸೈದುಲು ಅಡಾವತ್, ಐಪಿಎಸ್, ಉತ್ತರ ವಿಭಾಗದ ಬಿ.ಎಸ್.ನೇಮಗೌಡ, ಐಪಿಎಸ್ ರವರುಗಳ ಮಾರ್ಗದರ್ಶನದಲ್ಲಿ, ಸಂಬ0ಧಿಸಿದ ಉಪ ವಿಭಾಗಗಳ ಸಹಾಯಕ ಪೊಲೀಸ್ ಆಯುಕ್ತರುಗಳ ನೇತೃತ್ವದಲ್ಲಿ, ಸಿಸಿಬಿ, ಚಾಮರಾಜಪೇಟೆ, ಕೋರಮಂಗಲ, ಬಾಣಸವಾಡಿ, ವೈಟ್‌ಫೀಲ್ಡ್, ಮಲ್ಲೇಶ್ವರಂ ಹಾಗೂ ಪುಲಕೇಶಿನಗರ ಪೊಲೀಸ್ ಠಾಣಾ ಪೊಲೀಸ್ ಇನ್ಸ್ಪೆಕ್ಟರ್‌ಗಳು ಮತ್ತು ಇತರೆ ಅಧಿಕಾರಿ/ಸಿಬ್ಬಂದಿಯವರುಗಳ ತಂಡವು ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.


