ಮಾಧ್ಯಮ ಸಂಸ್ಥೆಗಳ ಗಮನಕ್ಕಾಗಿ :
1. ಮೈಸೂರು ದಸರಾ 2026ರ (Mysuru Dasara) ಕಾರ್ಯಕ್ರಮಗಳ ವರದಿಗಾಗಿ ಮಾಧ್ಯಮ ಮಾನ್ಯತೆ ಹೊಂದಿದ ರಾಷ್ಟ್ರಮಟ್ಟದ ಹಾಗೂ ರಾಜ್ಯ ಮಟ್ಟದ ಸುದ್ದಿ ವಾಹಿನಿಗಳ (ಇಬ್ಬರು ವರದಿಗಾರ ಮತ್ತು ಇಬ್ಬರು ವಿಡಿಯೋಗ್ರಾಹಕ ಮಾತ್ರ) ಹಾಗೂ ಮುದ್ರಣ ಮಾಧ್ಯಮ (Print Media) ಹಾಗೂ ಸುದ್ದಿವಾಹಿನಿಗಳ (Electronic Media) (ಓರ್ವ ವರದಿಗಾರ ಮತ್ತು ಓರ್ವ ಛಾಯಾಗ್ರಾಹಕ) ಮತ್ತು ಇತರೆ ಭಾಷೆಯ ಮುದ್ರಣ ಮತ್ತು ಸುದ್ದಿವಾಹಿನಿಗಳ (ಓರ್ವ ವರದಿಗಾರ ಮತ್ತು ಓರ್ವ ಛಾಯಾಗ್ರಾಹಕ ಅಥವಾ ಓರ್ವ ವಿಡಿಯೋಗ್ರಾಹಕ ಮಾತ್ರ) ಮಾಧ್ಯಮ ಪ್ರತಿನಿಧಿಗಳು (Correspondents) ಮಾತ್ರ ತಮ್ಮ ಸಂಸ್ಥೆಯ ಮುಖ್ಯಸ್ಥರ ಶಿಫಾರಸ್ಸಿನೊಂದಿಗೆ ಪ್ರವೇಶ ಪತ್ರಕ್ಕಾಗಿ ಮನವಿಯನ್ನು ಸಲ್ಲಿಸುವುದು.
2. ಅಧಿಕೃತ ಪ್ರವೇಶ ಪತ್ರಕ್ಕಾಗಿ ತಮ್ಮ ಹೆಸರು, ಹುದ್ದೆ, ಸಂಪರ್ಕ ಸಂಖ್ಯೆ ಹಾಗೂ ಇ-ಮೇಲ್ ವಿಳಾಸದ ಜೊತೆ ಸಂಪೂರ್ಣ ಮಾಹಿತಿ ಒಳಗೊಂಡ ಕಡ್ಡಾಯವಾಗಿ ತಮ್ಮ ಸಂಸ್ಥೆಯ ಶಿಫಾರಸ್ಸು ಪತ್ರದೊಂದಿಗೆ ಉಪ ನಿರ್ದೇಶಕರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧನ್ವಂತರಿ ರಸ್ತೆ, ಮೈಸೂರು ಇವರಿಗೆ ದಿನಾಂಕ: 23-09-2026ರ ಮಧ್ಯಾಹ್ನ 3.00 ಗಂಟೆಯ ಒಳಗಾಗಿ ನಿಗಧಿತ ನಮೂನೆಯ ಅರ್ಜಿಗಳನ್ನು ಭರ್ತಿ ಮಾಡಿ ಎರಡು ಪಾಸ್ ಪೋರ್ಟ್ ಆಳತೆಯ ಭಾವಚಿತ್ರದೊಂದಿಗೆ ಸಲ್ಲಿಸಲು ಕೋರಿದೆ.
3. ಶಿಫಾರಸ್ಸು ಪತ್ರ ಇಲ್ಲದ ಮಾಧ್ಯಮದ ಪ್ರತಿನಿಧಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
4. ವಿದ್ಯುನ್ಮಾನ ಮಾಧ್ಯಮದ ಓ.ಬಿ. ವ್ಯಾನ್ ಪಾಸ್ ಪಡೆಯಲು ಓಬಿ ವಾಹನದ ಸಂಖ್ಯೆ ಹಾಗೂ ಓರ್ವ ಚಾಲಕರ ಹೆಸರು ಕಡ್ಡಾಯವಾಗಿ ಒದಗಿಸುವುದು (ಓಬಿ ವ್ಯಾನ್ ಚಾಲಕರ ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ).
ಈ ಪತ್ರದೊಂದಿಗೆ ನಿಗದಿತ ನಮೂನೆಯ ಅರ್ಜಿಯನ್ನು ಲಗತ್ತಿಸಲಾಗಿದ್ದು, ಅರ್ಜಿಯಲ್ಲಿರುವಂತೆಯೇ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸುವುದು.
ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸ್ವೀಕರಿಸಲಾಗುವ ಮನವಿಗಳು :
ಮೈಸೂರಿನಲ್ಲಿ ತಮ್ಮ ಸಂಸ್ಥೆಯ ಕಚೇರಿ ಅಥವಾ ಮಾಧ್ಯಮ ಪ್ರತಿನಿಧಿಗಳನ್ನು ಹೊಂದದೇ ಇರುವ ರಾಷ್ಟ್ರಮಟ್ಟದ ಮತ್ತು ರಾಜ್ಯಮಟ್ಟದ ಸುದ್ದಿ ವಾಹಿನಿಗಳು ಹಾಗೂ ಇತರೆ ಭಾಷೆಯ ಮುದ್ರಣ ಮಾಧ್ಯಮ ಹಾಗೂ ಸುದ್ದಿ ವಾಹಿನಿಗಳ ಮಾಧ್ಯಮ ಪ್ರತಿನಿಧಿಗಳು ಮಾತ್ರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೇಂದ್ರ ಕಚೇರಿಯ ಸುದ್ದಿ ಮತ್ತು ಪತ್ರಿಕಾ ಶಾಖೆಗೆ ದಿನಾಂಕ: 21-09-2026 ಅರ್ಜಿ ನಮೂನೆಗಳನ್ನು ಸಲ್ಲಿಸುವುದು.
1. ಉಳಿದಂತೆ ಎಲ್ಲಾ ಮಾಧ್ಯಮ ಪ್ರತಿನಿಧಿಗಳು ಮೈಸೂರಿನ ತಮ್ಮ ಸಂಸ್ಥೆಯ ಪ್ರತಿನಿಧಿಗಳ ಮುಖಾಂತರ, ಉಪನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೈಸೂರು ಇವರಿಗೆ ನಿಗದಿತ ಅವಧಿಯೋಳಗಾಗಿ ತಮ್ಮ ಅರ್ಜಿಗಳನ್ನು ದಿನಾಂಕ: 23-09-2026ರ ಮಧ್ಯಾಹ್ನ 3.00 ಗಂಟೆಯ ಒಳಗಾಗಿ ಸಲ್ಲಿಸುವುದು.
2. ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸಲ್ಲಿಸಲಾಗುವ ಮಾಧ್ಯಮ ಪ್ರತಿನಿಧಿಗಳ ಅರ್ಜಿಗಳನ್ನು ಆಯುಕ್ತರ ಶಿಫಾರಸ್ಸಿನೊಂದಿಗೆ ಉಪನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮೈಸೂರು ಇವರಿಗೆ ಕಳುಹಿಸಿಕೊಡಲಾಗುವುದು.
3. ಅರ್ಜಿ ಸಲ್ಲಿಸಿರುವ ಎಲ್ಲಾ ಮಾಧ್ಯಮ ಪ್ರತಿನಿಧಿಗಳು ಮೈಸೂರು ದಸರಾ ಮಹೋತ್ಸವದ ಪಾಸುಗಳನ್ನು ಉಪನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮೈಸೂರು ಇವರಿಂದ ಪಡೆಯುವುದು. ಯಾವುದೇ ಪಾಸುಗಳನ್ನು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ವಿತರಿಸಲಾಗುವುದಿಲ್ಲ.
4. ಹೆಚ್ಚಿನ ಮಾಹಿತಿಗಾಗಿ ಮೈಸೂರು ಉಪ ನಿರ್ದೇಶಕರ ಕಚೇರಿಯ ವಾರ್ತಾ ಸಹಾಯಕರಾದ ಶ್ರೀ ರಮೇಶ್, ಮೊಬೈಲ್ ಸಂಖ್ಯೆ 98443 93691 ಹಾಗೂ ಸ್ವಾಗತಕಾರ ಗ್ರಂಥಪಾಲಕರಾದ ಶ್ರೀಮತಿ ಗಾಯತ್ರಿ, ಮೊಬೈಲ್ ಸಂಖ್ಯೆ 96863 27885 ಇವರನ್ನು ಸಂಪರ್ಕಿಸುವುದು.
Application for Mysore Dasara Media Passes
Sl. No:
Name of Media:
Name of Person and Designation:
Mobile No:
email. Id :
Photo:

