ನಿಮಗಿರುವ ಊಟ ಇಲ್ಲಿ ಇರಬಹುದು…..ಹೋಟೆಲ್ ಮಾಲಿಕ….

ಸತ್ಯವಾದದ್ದು….

ಹೋಟೆಲ್ ಮಾಲಿಕ ಎಲೆಯಿಟ್ಟು ಊಟ ಬಡಿಸಲು ಬಗ್ಗುತಿದ್ದಂತೆ ಆ ವ್ಯಕ್ತಿ ಕೇಳಿದರು…..

ಊಟಕ್ಕೆ ಎಷ್ಟಾಗುತ್ತದೆ?

ಮಾಲಿಕ ಉತ್ತರಿಸಿದರು….

ಮೀನು ಬೇಕಿದ್ದರೆ 50 ರೂಪಾಯಿ, ಮೀನು ಬೇಡವಾದರೆ 30 ರೂಪಾಯಿ….

ಆ ವ್ಯಕ್ತಿ ತನ್ನ ಹರಿದ ಅಂಗಿಯ ಕಿಸೆಯಿಂದ ತೆಗೆದ ಹತ್ತು ರೂಪಾಯಿ ಯನ್ನು ಮಾಲಿಕನತ್ತ ಚಾಚುತ್ತಾ…

ನನ್ನ ಕೈಯಲ್ಲಿ ಇದುವೇ ಇರೋದು..
ಇದಕ್ಕೆ ಸಿಕ್ಕುವುದು ಕೊಟ್ಟರೆ ಸಾಕು…. ಬರೀ ಅನ್ನವಾದರೂ ಸಾಕು..

ಹಸಿವು ನೀಗಿದರೆ ಸಾಕು..

ನಿನ್ನೆ ಮಧ್ಯಾಹ್ನದಿಂದ ಏನೂ ತಿಂದಿಲ್ಲ….

ಅದು ಹೇಳಬೇಕಾದರೆ ಅವರ ಮಾತುಗಳು ತಡವರಿಸಿದವು….

ಹೋಟೆಲ್ ಮಾಲಿಕ ಮೀನು ಬಿಟ್ಟು ಬಾಕಿ ಎಲ್ಲಾ ಅವರಿಗೆ ಬಡಿಸಿದರು….

ನಾನು ಅವರು ಊಟ ಮಾಡುವುದನ್ನೇ ನೋಡಿ ನಿಂತೆ… ಅವರ ಕಣ್ಣಿನಿಂದ ಕಣ್ಣೀರು ಸಣ್ಣದಾಗಿ ಕೆಲ ಜಾರುತಿತ್ತು.ಅದನ್ನು ಉಜ್ಜಿಕೊಂಡು ಸಣ್ಣ ಮಗುವಿನಂತೆ ನಿಧಾನವಾಗಿ ಊಟಮಾಡುವುದನ್ನ ಕಂಡ ಪಕ್ಕದಲ್ಲಿ ಕುಳಿತ ವ್ಯಕ್ತಿ ಕೇಳಿದರು…

ನೀವ್ಯಾಕೆ ಅಳುತಿದ್ದೀರಾ?

ಅವರು ಕೇಳಿದ ವ್ಯಕ್ತಿಯ ಮುಖವನ್ನ ನೋಡಿ ಕಣ್ಣನ್ನು ಉಜ್ಜಿಕೊಂಡು ಹೇಳಿದರು….

ನನ್ನ ಕಳೆದು ಹೋದ ಜೀವನವನ್ನು ನೆನೆದು ಕಣ್ಣೀರು ಬಂತು.. ಮೂರು ಮಕ್ಕಳು ನನಗೆ ಎರಡು ಗಂಡು, ಒಂದು ಹೆಣ್ಣು…
ಮೂರು ಜನರಿಗೂ ಒಳ್ಳೆಯ ಕೆಲಸವಿದೆ… ನನಗೆ ಸಿಕ್ಕದ ಎಲ್ಲಾ ಸೌಭಾಗ್ಯ ವನ್ನು ನಾನು ಅವರಿಗೆ ನೀಡಿದೆ…. ಅದಕ್ಕಾಗಿ ನಾನು ಕಳೆದು ಕೊಂಡದ್ದು ನನ್ನ ಯೌವನ ವನ್ನು…. ಇಪ್ಪತ್ತೆಂಟು ವರುಷದ ಪ್ರವಾಸ ಜೀವನ…..

ಎಲ್ಲದಕ್ಕೂ ನನ್ನ ಬೆನ್ನೆಲುಬಾಗಿದ್ದ ಅವಳು ಮೊದಲೇ ನನ್ನನ್ನು ಒಂಟಿಯಾಗಿಸಿ ಹೊರಟು ಹೋದಳು…. ಆಸ್ತಿ ಪಾಲು ಮಾಡುವವರೆಗೆ ನಾನಂದರಾಯಿತು ನನ್ನ ಮಕ್ಕಳು, ಸೊಸೆಯಂದಿರಿಗೆ. ಪಾಲು ಮಾಡುತಿದ್ದಂತೆ ನಾನು ಅವರಿಗೆ ಭಾರವಾಗತೊಡಗಿದೆ….

ಮುಟ್ಟದಕ್ಕೆಲ್ಲಾ ನನ್ನನ್ನು ದೂರಲಾರಂಭಿಸಿದರು… ನಾನು ಒಬ್ಬ ಮುದುಕನಲ್ವಾ? ಆ ಒಂದು ಪರಿಗಣನೆಯಾದರು ಕೊಡಬಹುದಿತ್ತಲ್ಲಾ? ಅದೂ ಇಲ್ಲ… ಅವರ ಅಹಾರ ಸೇವನೆಯ ನಂತರವೇ ನಾನು ಕುಳಿತುಕೊಳ್ಳುತಿದ್ದೆ. ಆದರೂ ಬಯ್ಯುತಿದ್ದರು.. ಆಹಾರವೆಲ್ಲಾ ಕಣ್ಣೀರು ಬಿದ್ದು ಉಪ್ಪುರಸ‌ವಾಗುತಿತ್ತು ತಿನ್ನುವಾಗ..ಮೊಮ್ಮಕ್ಕಳು ಕೂಡಾ ನನ್ನಲ್ಲಿ ಮಾತಾಡುತಿರಲಿಲ್ಲ…

ಕಾರಣ ಮತನಾಡುವುದ ಕಂಡರೆ ಮಕ್ಕಳು ಅವರನ್ನು ಬಯ್ಯುತಿದ್ದರು… ಯಾವಾಗಳು ಅವರದು ಒಂದೇ ಮಾತು ಎಲ್ಲಿಗಾದರು ಹೊರಟು ಹೋಗಬಾರದೇ ಎಂದು… ಮರುಭೂಮಿಯಲ್ಲಿ ಬೆವರು ಸುರಿಸಿ ದುಡಿದು ಉಂಟುಮಾಡಿದ ಹಣದಲ್ಲಿ , ತಿನ್ನದೆಯೂ ಮಲಗದೆಯೂ ನಾನೂ ಅವಳೂ ಕೂಡಿ ಇಟ್ಟ ಹಣದಲ್ಲಿ ಕಟ್ಟಿದ ಮನೆ… ಅವಳ ನೆನಪುಗಳು ಮಲಗಿರೋದು ಆ ಮನೆಯಲ್ಲಿ. ಬಿಟ್ಟು ಹೋಗಲು ಮನಸು ಕೇಳಲಿಲ್ಲ.
ಅದರೇ ನಿನ್ನೆ ಹೊರಟು ಬಿಟ್ಟೆ…

ಸೊಸೆಯ ಒಡವೆ ಕದ್ದೆ ಎಂದು ಮಗ ನನ್ನಲ್ಲಿ ಸಿಟ್ಟುಗೊಂಡ. ಹೊಡೆದಿಲ್ಲ ಭಾಗ್ಯಕ್ಕೆ… ಇನ್ನೂ ಅಲ್ಲಿ ನಿಂತರೆ ಅದೂ ನಡೆಯಬಹುದು.. “ಅಪ್ಪನಿಗೆ ಹೊಡೆದ ಮಗ” ಎಂಬ ಹೆಸರು ಬರಬಾರದಲ್ಲ.,.. ಸಾಯಲು ಭಯವಿಲ್ಲ ಅಲ್ಲದೆ ಇನ್ಯಾರಿಗೆ ಬೇಕಾಗಿ ಬದುಕಬೇಕು.

ಅವರು ಪೂರ್ತಿ ಊಟ ಮಾಡದೆ ಎದ್ದರು.. ತನ್ನಲ್ಲಿರುವ ಹತ್ತು ರೂಪಾಯಿ ಮಾಲಿಕರೆಡೆಗೆ ಚಾಚಿದರು.. ಮಾಲಕರಂದರು ಬೇಡ ಕೈಯಲ್ಲಿ ಇರಲಿ….

ಯಾವಾಗ ಬೇಕಿದ್ದರು ಇಲ್ಲಿಗೆ ಬರಬಹುದು…

ನಿಮಗಿರುವ ಊಟ ಇಲ್ಲಿ ಇರಬಹುದು..

ಆದರೆ ಆ ವ್ಯಕ್ತಿ ಆ ಹತ್ತು ರೂಪಾಯಿ ಅಲ್ಲಿ ಇಟ್ಟು ಹೇಳಿದರು

ತುಂಬಾ ಸಂತೋಷವಾಯಿತು ನಿಮ್ಮ ಉಪಕಾರಕ್ಕೆ.. ಧರ್ಮಕೆ ತಿಂದು ಅಭ್ಯಾಸವಿಲ್ಲ. ಏನೂ ತಿಳಿಯದಿರಿ.. ಬರ್ತೀನಿ ಇನ್ನೊಮ್ಮೆ ಕಾಣುವಾ ಎಂದು ಅವರ ಗಂಟನ್ನು ಎತ್ತಿಕೊಂಡು ಎಲ್ಲಿಗೆಂದಿಲ್ಲದೆ ಅವರಷ್ಟಕೆ ನಡೆದು ಹೋದರು…
ಆ ವ್ಯಕ್ತಿ ನನ್ನ ಮನಸಿಗೆ ಉಂಟು ಮಾಡಿದ ಆ ಗಾಯ ಈಗಲೂ ಒಣಗಲಿಲ್ಲ.

ಅದ್ಯಾಕೆ ಎಲ್ಲಾ ಹಸುರು ಎಲೆಗಳೂ ಒಂದು ದಿನ ಹಣ್ಣೆಲೆಯಾಗುತದೆಯೆಂದು ಚಿಂತಿಸುತಿಲ್ಲ.???

ಬೇಡದ್ದು ,ಬೇಕಾದದ್ದು ಕಳುಹಿಸಿ MB ಮುಗಿಸುವಾಗಲೂ, ಇಂತಹ ಒಂದು ಪೋಷ್ಟು ಕೂಡಾ ಷೇರು ಮಾಡಿ. ಯಾರಾದರು ಒಬ್ಬರ ಮನಸಾದರೂ ಬದಲಾದರೆ ಸಾಕು ….

Source : Quora

Hot this week

ವಂದೇ ಮಾತರಂ ಗೀತೆ ಮೊಟಕು ವಿರುದ್ಧ ಪಾದಯಾತ್ರೆ, ಅಧಿಕಾರಿಗಳಿಗೆ ಮನವಿ: ಬಿ.ವೈ.ವಿಜಯೇಂದ್ರ

ಬೆಂಗಳೂರು: ಬಿಜೆಪಿ(BJP) ಮತ್ತು ಸಾರ್ವಜನಿಕರು ಇದೇ 15ರಿಂದ 5 ದಿನಗಳ ಕಾಲ...

ಸರ್. ಎಂ. ವಿಶ್ವೇಶ್ವರಯ್ಯ ಕೋ -ಆಪರೇಟಿವ್ ಬ್ಯಾಂಕ್ ನ ಪ್ರತಿಭಾ ಪುರಸ್ಕಾರ ಸಮಾರಂಭ

ಇಂದು ಚಂದ್ರಶೇಖರ ಭಾರತಿ(ChandraShekar Bharathi) ಸಭಾಂಗಣದಲ್ಲಿ ನೆಡೆದ ಸರ್ ಎಂ ವಿಶ್ವೇಶ್ವರಯ್ಯ...

ಗೌರಿ ಬಾಗಿನ ಕೊಡುವ ಸರಿಯಾದ ವಿಧಾನ

1. ಗೌರಿ ಬಾಗಿನ ಎಂದರೇನು? ಗೌರಿದೇವಿಯು ತವರಿಗೆ ಬಂದ ಮಗಳಂತೆ ಭಾವಿಸಿ, ಮುತ್ತೈದೆ...

ಬೀದರ್, ಸೆ. 12, 2026: ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ

ಬೀದರ್, ಸೆಪ್ಟೆಂಬರ್ 12, 2026: ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ನಿರ್ಣಾಯಕವಾಗಿದ್ದು, ವಿದ್ಯಾರ್ಥಿಗಳು ತಮ್ಮ ಜ್ಞಾನ, ಕೌಶಲ್ಯ ಮತ್ತು...

ಸರ್.‌ ಎಂ. ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಿಂದ 2026 ರ ಬ್ಯಾಚ್‌ ನ “ಆರಂಭ – 2026” ಗೆ ಚಾಲನೆ

ಬೆಂಗಳೂರು: ದೇಶ(Country) ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಮೂಲಕ 4.0 ಕೈಗಾರಿಕಾ ಕ್ರಾಂತಿಯತ್ತ(Industrial...

Topics

ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್‌ಗೆ Rs.1.10 ಕೋಟಿ ನಿವ್ವಳ ಲಾಭ – ಡಿ.ಆರ್. ವಿಜಯ ಸಾರಥಿ  

ಬೆಂಗಳೂರು: ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ 2025-26ನೇ ಸಾಲಿನಲ್ಲಿ Rs.1.10...

14-09-2026 – ಒಂದೇ ದಿನ ಶ್ರೀಸ್ವರ್ಣಗೌರಿ ವ್ರತ ಹಾಗೂ ಶ್ರೀವರಸಿದ್ಧಿ ವಿನಾಯಕ ವ್ರತ

ಸಾಮಾನ್ಯವಾಗಿ ಭಾದ್ರಪದ ಮಾಸದ ತದಿಗೆಯಂದು ಹಸ್ತಾ ನಕ್ಷತ್ರ(Hastha Nakshatra) ವಿರುವ ದಿನ,...

ನಾಳೆ ಸಂಜೆ ದೇವಿ ತತ್ತ್ವ,ಭರತನಾಟ್ಯದ ಮನಮೋಹಕ ಕಾರ್ಯಕ್ರಮ

ಬೆಂಗಳೂರು: ವೇದಾಂತ ಮಾಲಾ ಕಲಾ ಕುಟೀರವು ದೇವಿ ತತ್ತ್ವ,ಭರತನಾಟ್ಯದ ಮನಮೋಹಕ ಸಂಜೆಯನ್ನು...

Related Articles