ಬೆಂಗಳೂರು: ವೇದಾಂತ ಮಾಲಾ ಕಲಾ ಕುಟೀರವು ದೇವಿ ತತ್ತ್ವ,ಭರತನಾಟ್ಯದ ಮನಮೋಹಕ ಸಂಜೆಯನ್ನು ಭಾನುವಾರ ಆಯೋಜಿಸಿದೆ
ಕಾರ್ಯಕ್ರಮವು ಇದೇ ಸೇ 13ರ ಭಾನುವಾರ ಸಂಜೆ 4-00ರಿಂದ ಶುರುವಾಗಲಿದೆ,ಶ್ರೀ ಜಯರಾಮ ಸೇವಾ ಮಂಡಳಿ ಜಯನಗರ 8ನೇ ಬ್ಲಾಕ್ನಲ್ಲಿ ನಡೆಯಲಿದ್ದು ಸಮಾರಂಭದ ಮುಖ್ಯ ಅಥಿತಿಗಳಾಗಿ ಶ್ರೀಮತಿ ಸಂಗೀತಾ ಕಣ್ಣನ್ ಪ್ರಾಂಶುಪಾಲರು, ಕ್ಯಾಪಿಟಲ್ ಪಬ್ಲಿಕ್ ಸ್ಕೂಲ್ ಶ್ರೀಮತಿ ಲತಾ ರಮೇಶ್ ನಿರ್ದೇಶಕರು, ಶಿವ ಅನುಗ್ರಹ ಲಲಿತ ಕಲಾ ಟ್ರಸ್ಟ್ ಹಾಗು ಶ್ರೀ ಛಾಯಾಪತಿ ಕಾಂಚಿಬೈಲ್ ಅಧ್ಯಕ್ಷರು, ಶೃಷ್ಟಿ ಕಲಾ ವಿದ್ಯಾಲಯ, ಇವರು ಉಪಸ್ಥಿತರಿರಲಿದ್ದಾರೆ,
ಈ ದೇವಿ ತತ್ತ್ವವು ದೇವಿಯ ಸಾರ ಶಕ್ತಿ, ಕರುಣೆ, ಸೌಂದರ್ಯ ಮತ್ತು ಸಾಮರ್ಥ್ಯದ ದೈವಿಕ ಸ್ವರೂಪವನ್ನು ಭರತನಾಟ್ಯದ ಸುಂದರ ಅಭಿವ್ಯಕ್ತಿಯ ಮೂಲಕ ಅನಾವರಣಗೊಳಿಸುವ ವಿಶೇಷ ನೃತ್ಯ ಕಾರ್ಯಕ್ರಮವಾಗಿದೆ ಎಂದು ವೇದಾಂತ ಮಾಲಾ ಕಲಾ ಕುಟೀರದ ಮಾಲಾ ವೆಂಕಟೇಶ್ ಮತ್ತು ವಿನಂತಿ ಮಿಥುನ್ ತಿಳಿಸಿದ್ದು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಮ್ಮನ್ನು ಪ್ರೋತ್ಸಾಹಿಸಬೇಕೆಂದು ಅವರು ಕೋರಿದ್ದಾರೆ.
ವಿಶೇಷ ಆಹ್ವಾನಿತಾರಾಗಿ ಕರ್ನಾಟಕ ಕಲಾ ದರ್ಶನಿಯ ಶ್ರೀನಿವಾಸ ಸಾಸ್ಥಾನ, ಕರ್ನಾಟಕ ಮಹಿಳಾ ಯಕ್ಷಗಾನದ ಮುಖ್ಯಸ್ತೆ ಗೌರಿ ಸಾಸ್ಥಾನ ಮತ್ತು ಕಲಾಕ್ಷೇತ್ರ ಅಕಾಡೆಮಿಯ ವನಿತಾ ಕುಮಾರ್ ಅವರು ಉಪಸ್ಥಿತರಿರುವರು.

