ಮೈಸೂರು:ವಿಜಯನಗರದ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಅ.10ರಿಂದ 22ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ

ಮೈಸೂರು: ವಿಜಯನಗರ (Mysore Vijayanagar) ಮೊದಲನೇ ಹಂತದ ಸುದರ್ಶನ ನಾರಸಿಂಹ ಕ್ಷೇತ್ರದ (Sudarshan Narasimha Kshetra) ಶ್ರೀ ಯೋಗನರಸಿಂಹಸ್ವಾಮಿ (Sri Yoga Narasimha Temple) ದೇವಸ್ಥಾನದಲ್ಲಿ ಅ.10ರಿಂದ 22ರವರೆಗೆ ನವರಾತ್ರಿ ಉತ್ಸವ (Navarathri Utsav) ಹಾಗೂ ಜಾತ್ರಾ ಕಾರ್ಯಕ್ರಮಗಳು ನಡೆಯಲಿವೆ.

ಅ.10ರಂದು ಮಹಾಲಯ ಅಮಾವಾಸ್ಯೆ ಅಂಗವಾಗಿ ಸಂಜೆ 7 ಗಂಟೆಗೆ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಲಿದೆ. ಅ.11ರಂದು ಅರಿಶಿನ ಅಲಂಕಾರ, ಅ.12ರಂದು ಬೆಳಿಗ್ಗೆ 9 ಗಂಟೆಗೆ ಸ್ವಾತಿ ನಕ್ಷತ್ರದ ಅಂಗವಾಗಿ ಅಭಿಷೇಕ ಮತ್ತು ವಿಶೇಷ ಪೂಜೆ ಹಾಗೂ ಸಂಜೆ ತುಳಸಿ ಅಲಂಕಾರ ನಡೆಯಲಿದೆ.

ಅ.13ರಂದು ನವಪುಷ್ಪ ಅಲಂಕಾರ, ಅ.14ರಂದು ಗಂಧದ ಅಲಂಕಾರ, ಅ.15ರಂದು ನಿಂಬೆಹಣ್ಣಿನ ಅಲಂಕಾರ, ಅ.16ರಂದು ಪೂಲಂಗಿ ಅಲಂಕಾರ, ಅ.17ರಂದು ಬಿಲ್ವಪತ್ರೆ ಅಲಂಕಾರ, ಅ.18ರಂದು ಬೆಣ್ಣೆ ಅಲಂಕಾರ ಹಾಗೂ ಅ.19ರಂದು ಪುಳಿಯೋಗರೆ ಅಲಂಕಾರದೊಂದಿಗೆ ವಿಶೇಷ ಪೂಜೆ ನಡೆಯಲಿದೆ.

ಅ.20ರಂದು ಸಂಜೆ 7 ಗಂಟೆಗೆ ವಿಶ್ವರೂಪ ದರ್ಶನ, ಏಕಾಂತ ಸೇವೆ ಹಾಗೂ ವಿಶೇಷ ಪೂಜೆ ನೆರವೇರಲಿದೆ. ಅ.21ರಂದು ವಿಜಯದಶಮಿ ಅಂಗವಾಗಿ ರಾಜಾಲಂಕಾರ, ವಿಶೇಷ ಪೂಜೆ ಹಾಗೂ ಪ್ರೊ. ಭಾಷ್ಯಂ ಸ್ವಾಮೀಜಿ ಅವರ ನೇತೃತ್ವದಲ್ಲಿ ಮಹಾ ಸುದರ್ಶನ ಯಾಗ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಅ.22ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಯೋಗನರಸಿಂಹಸ್ವಾಮಿಗೆ ಮಹಾಭಿಷೇಕ ಮತ್ತು ವಿಶೇಷ ಪೂಜೆ ನೆರವೇರಲಿದ್ದು, ರಾತ್ರಿ 9 ಗಂಟೆಗೆ ಶಯನೋತ್ಸವ ನಡೆಯಲಿದೆ.

ನವರಾತ್ರಿ ಉತ್ಸವದ ಅಂಗವಾಗಿ ಭಕ್ತರಿಗೆ ಸಂಕಲ್ಪ, ವಿಶೇಷ ಪೂಜೆ, ವಿವಿಧ ಸೇವೆಗಳು ಹಾಗೂ ಅನ್ನಸಂತರ್ಪಣೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ದೇವಾಲಯದ ಸಂಸ್ಥಾಪಕರಾದ ಪರಮಪೂಜ್ಯ ನಾಡೋಜ ಪ್ರೊ. ಭಾಷ್ಯಂ ಸ್ವಾಮೀಜಿಯವರ ದಿವ್ಯ ಸಾನಿಧ್ಯ ಹಾಗೂ ನೇತೃತ್ವದಲ್ಲಿ, ಭಕ್ತಾದಿಗಳ ಸಹಕಾರದೊಂದಿಗೆ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಆಡಳಿತಾಧಿಕಾರಿ ಎನ್. ಶ್ರೀನಿವಾಸನ್ ತಿಳಿಸಿದ್ದಾರೆ.

ಸುದರ್ಶನ ನಾರಸಿಂಹ ಕ್ಷೇತ್ರಶ್ರೀ ಯೋಗನರಸಿಂಹಸ್ವಾಮಿ ದೇವಸ್ಥಾನ, ವಿಜಯನಗರ ಮೊದಲನೇ ಹಂತ, ಮೈಸೂರು–570017.ಮೊ.: 9900400000

Hot this week

ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಬಂಡಾಯದ ಧ್ವನಿ

 ಅಂಬಿಗರ ಚೌಡಯ್ಯನವರ ವಚನಗಳಲ್ಲಿ ವೈಚಾರಿಕತೆ, ವ್ಯಂಗ್ಯ, ವಿಡಂಬನೆ ಹಾಗೂ ಬಂಡಾಯದ ಮನೋಧರ್ಮ...

ಪದಕ ವಿಜೇತೆ ಶ್ರೀಮತಿ ಪೂವಮ್ಮ ಅವರಿಗೆ ಎಚ್ ಡಿ ಕುಮಾರಸ್ವಾಮಿ ಅವರಿಂದ ಗೌರವ

ಬೆಂಗಳೂರು: ಏಷ್ಯನ್ ಗೇಮ್ಸ್ ನಲ್ಲಿ ಪದಕ ವಿಜೇತೆಯಾದ ಶ್ರೀಮತಿ ಪೂವಮ್ಮ ಅವರನ್ನು...

ತರ್ಪಣ ವಿಧಿ ಆಚರಣೆಗೆ ಶಾಸ್ತ್ರೀಯ ಅರಿವು ಅಗತ್ಯ: ವೀರೇಶಾನಂದ ಸರಸ್ವತಿ ಸ್ವಾಮೀಜಿ

ಬೆಂಗಳೂರು: ಪಿತೃಕಾರ್ಯಗಳ ಪ್ರಮುಖ ಅಂಗವಾಗಿರುವ ತರ್ಪಣ ವಿಧಿಯನ್ನು ಕೇವಲ ಸಂಪ್ರದಾಯದ ಆಚರಣೆಯಾಗಿ...

ಉತ್ತರ ಪ್ರದೇಶ ರಾಜ್ಯಸಭಾ ಚುನಾವಣೆ: ಬಿಜೆಪಿಯಿಂದ 8 ಅಭ್ಯರ್ಥಿಗಳ ಘೋಷಣೆ

ಮುಂಬರುವ ರಾಜ್ಯಸಭಾ ದ್ವೈವಾರ್ಷಿಕ ಚುನಾವಣೆಗೆ ಉತ್ತರ ಪ್ರದೇಶದಿಂದ ಬಿಜೆಪಿ (BJP) ಎಂಟು...

ಇಂಧನ ಬೆಲೆ ಏರಿಕೆ: ಇಂಡಿಗೋ ವಿಮಾನ ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕ

ಜಾಗತಿಕ ಮಾರುಕಟ್ಟೆಯಲ್ಲಿ ಏವಿಯೇಷನ್ ಟರ್ಬೈನ್ ಫ್ಯುಯೆಲ್ (ATF) ಬೆಲೆಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ,...

Topics

ಮತದಾರರ ಪಟ್ಟಿ ಬದಲಾವಣೆ ವಿರೋಧಿಸಿ ದೆಹಲಿ, ಮುಂಬೈನಲ್ಲಿ ಪ್ರತಿಭಟನೆ

ದೆಹಲಿ(Delhi) ಮತ್ತು ಮುಂಬೈನಲ್ಲಿ(Mumbai) ಸಾವಿರಾರು ಯುವಕರು ಹಾಗೂ ವಿರೋಧ ಪಕ್ಷಗಳ ಬೆಂಬಲಿಗರು...

ಮಾರುಕಟ್ಟೆ ಮತ್ತು ವ್ಯವಹಾರ ನವೀಕರಣಗಳು

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ (PSU Banks) ಷೇರುಗಳು...

ಮಹರ್ಷಿ ವಾಲ್ಮೀಕಿ ಜಯಂತಿ: ಅಕ್ಟೋಬರ್ 26ಕ್ಕೆ ಸಾರ್ವತ್ರಿಕ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಮಹರ್ಷಿ ವಾಲ್ಮೀಕಿ...

Related Articles