ರಾಜ್ಯದಲ್ಲಿ ಸುಮಾರು 39,000 ದೇವಾಲಯಗಳು ಮುಜರಾಯಿ ಇಲಾಖೆಯ (Muzral Deparment) ವ್ಯಾಪ್ತಿಯಲ್ಲಿ ಬರಲಿವೆ. ಈ ಎಲ್ಲಾ ದೇವಾಲಯಗಳನ್ನು(A.B. and C Categories) ಎ. ಬಿ ಮತ್ತು ಸಿ. ವರ್ಗಗಳಾಗಿ ವಿಂಗಡಿಸಲಾಗಿದೆ. ಎ. ವರ್ಗದ ದೇವಾಲಯಗಳ ವ್ಯಾಪ್ತಿಯಡಿ, ಕೊಲ್ಲೂರು ಮೂಕಾಂಬಿಕೆ, ಚಾಮುಂಡಿ ದೇವಸ್ಥಾನ, ಕುಕ್ಕೆ ಸುಬ್ರಮಣ್ಯ ಇಂತಹ ದೇವಾಲಯಗಳು ಬರುತ್ತಿದ್ದು, ಈ ದೇವಾಲಯಗಳಲ್ಲಿನ ಹುಂಡಿ ಹಣವನ್ನು ಆಯಾ ದೇವಾಲಯಗಳ ಅಭಿವೃದ್ಧಿಗಾಗಿ ಬಳಸಲಾಗುತ್ತಿದೆ. ‘ಎ’ ವರ್ಗದ ದೇವಾಲಯಗಳಲ್ಲಿ ಕ್ರೋಢಿಕೃತವಾಗುವ ಹಣದಲ್ಲಿ ಶೇಕಡ 10 ರಷ್ಟು ಹಣವನ್ನು ಮಾತ್ರ ಸಿ ವರ್ಗದ ದೇವಾಲಯಗಳ ಅಭಿವೃದ್ಧಿಗೆ ಬಳಸಲಾಗುವುದು.ಎಷ್ಟೋ ದೇವಾಲಯಗಳಲ್ಲಿ ಹುಂಡಿ ಹಣ ದೋಚಿಕೊಂಡು ಹೋಗಿದ್ದಾರೆ, ಕೆಲವು ದೇವಾಲಯಗಳಲ್ಲಿ ಶೇಖರಣೆಯಾಗುವ ಹುಂಡಿಯ ಹಣದ ಬಗ್ಗೆ ನಿಖರ ಮಾಹಿತಿಯನ್ನು ನೀಡುತ್ತಿಲ್ಲ. ಇಂತಹ ಕ್ರಮಗಳಿಗೆ ಬ್ರೇಕ್ ಹಾಕಲು ಮುಜರಾಯಿ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದ್ದು, ಎಲ್ಲಾ ದೇವಾಲಯಗಳಲ್ಲೂ ಸಿ.ಸಿ. ಕ್ಯಾಮೆರಾ ಅಳವಡಿಸಲು ತೀಮಾನ ಮಾಡಿದೆ. ಅಲ್ಲದೇ ಕೇಂದ್ರಿಕೃತ ಮಾಡಲು ಅನುಕೂಲವಾಗುವಂತೆ ಸರ್ವರ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದರಿಂದಾಗಿ ಮುಜರಾಯಿ ಇಲಾಖೆಯ ಆಯುಕ್ತರು ಕೇಂದ್ರಸ್ಥಾನದಲ್ಲೇ ಕುಳಿತು ಎಲ್ಲಾ ದೇವಾಲಯಗಳ ಚಟುವಟಿಕೆಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಮತ್ತು ಹಣ ದುರುಪಯೋಗ ಆಗುವುದನ್ನು ತಪ್ಪಿಸಬಹುದಾಗಿದೆ ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.
ಹೊರ ರಾಜ್ಯಗಳಲ್ಲಿ ಪ್ರಮುಖ ದೇವಾಲಯಗಳಿರುವ ಜಾಗಗಳಲ್ಲಿ ನಮ್ಮ ರಾಜ್ಯದ ಆಸ್ತಿ ಇದೆ. ತಿರುಪತಿಯಲ್ಲಿ ಯಾವುದೇ ರಾಜ್ಯದ ಆಸ್ತಿ ಇರುವುದಿಲ್ಲ. ಆದರೆ ನಮ್ಮ ಕರ್ನಾಟಕ ರಾಜ್ಯಕ್ಕೆ ಮಾತ್ರ 7 ಎಕರೆ ಆಸ್ತಿ ಇದ್ದು, ಇಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಕರ್ನಾಟಕ ಭವನವನ್ನು ನಿರ್ಮಾಣ ಮಾಡಲಾಗಿದೆ. ಈಗ ಅತಿಗಣ್ಯರು ಭೇಟಿ ನೀಡುವ ಸಮಯದಲ್ಲಿ ಅವರು ತಂಗಲು ಅನುಕೂಲವಾಗುವಂತೆ ವಸತಿ ಸಮುಚ್ಛಯವನ್ನು ನಿರ್ಮಾಣ ಮಾಡಲು ಕ್ರಮ ವಹಿಸಲಾಗಿದೆ. ಅದೇ ರೀತಿ ತುಳಜಾಪುರ, ಶ್ರೀಶೈಲ, ವಾರಣಾಸಿ ಇಂತಹ ಪ್ರಮುಖ ಸ್ಥಳಗಳಲ್ಲೂ ಸಹ ನಮ್ಮ ರಾಜ್ಯದ ಆಸ್ತಿ ಇದ್ದು, ಅದನ್ನು ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರರಿಂದ ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಎಲ್ಲಾ ದೇವಸ್ಥಾನಗಳಲ್ಲೂ ನಿರೀಕ್ಷೆಗೂ ಮೀರಿ ಹಣ ಇದೆ ಇದನ್ನು ರಕ್ಷಿಸಲು ಮಾಸ್ಟರ್ ಪ್ಲಾನ್ ಸಿದ್ದಪಡಿಸಲು ಕ್ರಮ ವಹಿಸಲಾಗಿದೆ. ಕೊಲ್ಲೂರು ಮೂಕಾಂಬಿಕ ದೇವಸ್ಥಾನದಲ್ಲಿ ಸುಮಾರು 300 ಕೋಟಿ ಇದೆ. ಬೆಂಗಳೂರು ಬನಶಂಕರಿ ದೇವಸ್ಥಾನದಲ್ಲಿ ವಾರ್ಷಿಕ 13 ಕೋಟಿ ಬರುತ್ತದೆ ಎಂದು ತಿಳಿಸಿದ್ದರು. ಆದರೆ ಅಲ್ಲಿ ಭೇಟಿ ನೀಡಿದ ವೇಳೆ ಗಮನಿಸಿದಾಗ ಸುಮಾರು 100 ಕೋಟಿ ಆದಾಯ ಬರುತ್ತದೆ ಎಂದು ಅಂದಾಜಿಸಿಲಾಗಿದೆ. ಇವೆಲ್ಲವನ್ನು ರಕ್ಷಣೆ ಮಾಡುವ ಸಲುವಾಗಿ ಒಂದು ಮಾಸ್ಟರ್ ಪ್ಲಾನ್ ಸಿದ್ದಪಡಿಸಲು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿರುವುದಾಗಿ ತಿಳಿಸಿದರು.