ನಟಿ ಸ್ವರಾ ಭಾಸ್ಕರ್ ಅಹ್ಮದ್ ಅವರಿಗೆ ಲೀಗಲ್ ನೊಟೀಸ್ !

ಮುಂಬೈ – ರಾಣಿ ಪದ್ಮಾವತಿ(Rani Padmavathi) ಸೇರಿದಂತೆ ಇತರ ಹಿಂದೂ ರಜಪೂತ (Hindu Rajputh) ಮಹಿಳೆಯರು ಶೀಲರಕ್ಷಣೆಗಾಗಿ ಮಾಡಿದ ‘ಜೌಹರ್’ ಅನ್ನು ಹೇಡಿತನ ಎಂದ ನಟಿ ಸ್ವರಾ ಭಾಸ್ಕರ್ ಅಹ್ಮದ್ (Swara Bhaskar Ahmed) ಅವರಿಗೆ ಹಿಂದೂ ವಿಧಿಜ್ಞ ಪರಿಷತ್ (Hindu Vidhijna Parishath) ಕಾನೂನು ನೋಟಿಸ್ ಕಳುಹಿಸಿದೆ. ₹25 ಲಕ್ಷ ಪರಿಹಾರ ಧನ ಹಾಗೂ ಭವಿಷ್ಯದಲ್ಲಿ ಹಿಂದೂಗಳ ಶ್ರದ್ಧಾಕೇಂದ್ರಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದಿಲ್ಲವೆಂಬ ಲಿಖಿತ ಭರವಸೆಯನ್ನು ನೋಟಿಸ್ ಮೂಲಕ ಕೋರಲಾಗಿದೆ. ಹಿಂದೂ ಧರ್ಮಪ್ರೇಮಿ ಶ್ರೀ. ರಮೇಶ್ ಕಡಗಲೆ ಅವರ ಸೂಚನೆಯ ಮೇರೆಗೆ ಹಿಂದೂ ವಿಧಿಜ್ಞ ಪರಿಷತ್‌ನ ವಕೀಲರಾದ ಅನೇಶ್ ಪರಳಕರ್ (Anesh) ಅವರು ಈ ನೋಟಿಸ್ ಜಾರಿ ಮಾಡಿದ್ದಾರೆ.

ಆಗಸ್ಟ್ 31 ರಂದು ‘ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್’ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ಪದ್ಮಾವತ್’ ಹಿಂದಿ ಚಲನಚಿತ್ರದ ‘ಜೌಹರ್’ ಸನ್ನಿವೇಶವನ್ನು ವಿವರಿಸುವಾಗ ನಟಿ ಸ್ವರಾ ಭಾಸ್ಕರ್ ಅಹ್ಮದ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ಕುರಿತು ನೀಡಲಾದ ನೋಟಿಸ್‌ನಲ್ಲಿ, ಸಂವಿಧಾನವು ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವು ಮಿತಿಯಿಲ್ಲದ್ದಲ್ಲ ಮತ್ತು ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿದೆ ಎಂದು ಸ್ಪಷ್ಟಪಡಿಸಲಾಗಿದೆ. ಸ್ವರಾ ಭಾಸ್ಕರ್ ಅಹ್ಮದ್ ಅವರ ಹೇಳಿಕೆಯು ಮಹಾರಾಣಿ ಪದ್ಮಾವತಿ ಮತ್ತು ‘ಜೌಹರ್’ ಆಚರಿಸಿದ ವೀರಾಂಗನೆಯರ ಶೌರ್ಯ, ತ್ಯಾಗ ಮತ್ತು ಆತ್ಮಗೌರವಕ್ಕೆ ಧಕ್ಕೆ ತಂದಿದೆ. ಇದು ನನ್ನನ್ನೂ ಸೇರಿದಂತೆ ಜಗತ್ತಿನಾದ್ಯಂತ ಇರುವ ಹಿಂದೂ ಮತ್ತು ರಜಪೂತ ಸಮುದಾಯದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಭಾವನೆಗಳಿಗೆ ನೋವುಂಟು ಮಾಡಿದೆ. ಆದ್ದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸ್ವರಾ ಭಾಸ್ಕರ್ ಅಹ್ಮದ್ ತಮ್ಮ ಅವಹೇಳನಕಾರಿ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕು ಮತ್ತು ಹಿಂದೂ ಸಮಾಜ ಹಾಗೂ ವಿಶೇಷವಾಗಿ ರಜಪೂತ ಮಹಿಳೆಯರ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಲಾಗಿದೆ.

... ಇಲ್ಲದಿದ್ದರೆ ಕಾನೂನು ಕ್ರಮ ಅನಿವಾರ್ಯ! – ವಕೀಲ ಅನೇಶ್ ಪರಳಕರ್, ಹಿಂದೂ ವಿಧಿಜ್ಞ ಪರಿಷತ್

ಸ್ವರಾ ಭಾಸ್ಕರ್ ಅಹ್ಮದ್ ಅವರು ತಮ್ಮ ಎಲ್ಲಾ ಸಾಮಾಜಿಕ ಜಾಲತಾಣಗಳಿಂದ ವೀಡಿಯೊ, ಸಂದೇಶ, ರೀಲ್ಸ್, ಕ್ಲಿಪ್ಸ್ ಮುಂತಾದ ರೂಪದಲ್ಲಿರುವ ಎಲ್ಲಾ ಸಂಬಂಧಿತ ವಿಷಯಗಳನ್ನು ತಕ್ಷಣವೇ ತೆಗೆದುಹಾಕಬೇಕು. ಭವಿಷ್ಯದಲ್ಲಿ ಹಿಂದೂ ಧರ್ಮ, ಪರಂಪರೆ ಮತ್ತು ಐತಿಹಾಸಿಕ ಮಹಾಪುರುಷರ ಬಗ್ಗೆ ಯಾವುದೇ ಅವಹೇಳನಕಾರಿ ಹೇಳಿಕೆ ನೀಡುವುದಿಲ್ಲವೆಂದು ಲಿಖಿತ ಮುಚ್ಚಳಿಕೆ ನೀಡಬೇಕು. ನೋಟಿಸ್ ತಲುಪಿದ 7 ದಿನಗಳ ಒಳಗೆ ಈ ಎಲ್ಲಾ ಷರತ್ತುಗಳನ್ನು ಪೂರೈಸದಿದ್ದರೆ, ಸ್ವರಾ ಭಾಸ್ಕರ್ ಅಹ್ಮದ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಸಿವಿಲ್ ನ್ಯಾಯಾಲಯದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ವಕೀಲ ಅನೇಶ್ ಪರಳಕರ್ ಎಚ್ಚರಿಕೆ ನೀಡಿದ್ದಾರೆ.

ವಕೀಲ ವೀರೇಂದ್ರ ಇಚಲಕರಂಜೀಕರ್,

ರಾಷ್ಟ್ರೀಯ ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ್. (ಸಂಪರ್ಕ : 9545557249)

Hot this week

‘ಆಸ್ಟ್ರಲ್ ಪೇಜೆಂಟ್ಸ್’ 10ನೇ ಆವೃತ್ತಿ ಯಶಸ್ವಿ: ದಶಕದ ಸಂಭ್ರಮ

ಬೆಂಗಳೂರು : ಕಳೆದ ಒಂಬತ್ತು ವರ್ಷಗಳಿಂದ ವೈಶಿಷ್ಟ್ಯಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಯೋಜನೆಗೊಳ್ಳುತ್ತಾ...

“ಪ್ರೋಷ್ಟಪದಿ ಭಾಗವತ” ಧಾರ್ಮಿಕ ಪ್ರವಚನ

ಸುಧೀಂದ್ರನಗರ : ಶ್ರೀ ರಾಘವೇಂದ್ರ ಸೇವಾ ಸಮಿತಿಯ (Raghavendra Seva Samithi)...

ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಗಣೇಶೋತ್ಸವ

ಬೆಂಗಳೂರು : ನಾಗರಬಾವಿ (Nagarabhavi) ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ (Canara Bank...

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಿಷೇಧಿತ ಮೊಬೈಲ್ ಬಳಕೆ: 9 ಆರೋಪಿಗಳ ಬಂಧನ

ಪರಪ್ಪನ ಅಗ್ರಹಾರ (Parappana Agrahara) ಠಾಣೆಯಲ್ಲಿ (Station) 13/01/2026 ರಂದು ಬೆಂಗಳೂರು...

20 ಮಂದಿಗೆ ಉಚಿತ ಕಾಶಿ–ಪ್ರಯಾಗ್ ಯಾತ್ರೆ : ಉಚಿತ ವಿಮಾನ ಪ್ರಯಾಣದ ಸೌಭಾಗ್ಯ

ಬೆಂಗಳೂರು, ಸೆ. 10: ಮಹಾ ಶಿವರಾತ್ರಿ  (Shivarathri) ಅಂಗವಾಗಿ ವಿಜಯನಗರದಲ್ಲಿ ಆಯೋಜಿಸಲಾಗಿದ್ದ...

Topics

ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 11.09.2026 FRIDAY.ಶುಕ್ರವಾರ ಸಂವತ್ಸರ: ಪರಾಭವ SAMVATSARA : PARABHAVA. ಆಯಣ: ದಕ್ಷಿಣಾಯನ AYANA:...

ರಾಜಕೀಯ ರಂಗದಲ್ಲಿ ಆಧುನಿಕತೆ ಮತ್ತು ಹೋರಾಟಕ್ಕೆ ಇನ್ನೊಂದು ಹೆಸರೇ ಡಿ.ಕೆ.ಶಿವಕುಮಾರ್ : DCM ಜಿ. ಪರಮೇಶ್ವರ

ಬೆಂಗಳೂರು: ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್(CM D.K.Shivakumar) ಅವರ ನೇತೃತ್ವದ ರಾಜ್ಯ...

“ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ಸರಿಯಾದ ಹಾದಿಯಲ್ಲಿ ನಡೆಯುತ್ತಿದೆ” : ಮಾಜಿ ಸಿ ಎಂ ಸಿದ್ದರಾಮಯ್ಯ ಪ್ರಶಂಸೆ.

ಬೆಂಗಳೂರು: ನಮ್ಮ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದರ ಜೊತೆಗೆ,...

Related Articles