ಧರ್ಮ ಉಳಿದರೆ ಮನುಷ್ಯ ಉಳಿಯುತ್ತಾನೆ, ಬ್ರಾಹ್ಮಣರು ಸಂಘಟಿತರಾಗಬೇಕು-ಶ್ರೀ ಶ್ರೀ ಸುಜಯನಿಧಿ ತೀರ್ಥರು

ಅಕ್ಷಯ ವಿಪ್ರ ಮಹಾಸಭಾ 19ನೇ ವಾರ್ಷಿಕೋತ್ಸವ , ಅಕ್ಷಯರತ್ನ ಪ್ರಶಸ್ತಿ ಪ್ರಧಾನ ಸಮಾರಂಭ

ಆಚಾರ್ಯರಿಗೆ ಅವಹೇಳನ, ಅಪಮಾನ ಮಾಡಬೇಡಿ, ನಮ್ಮಲ್ಲಿ ಕಚ್ಚಾಟಬೇಡ-ಎಸ್.ರಘುನಾಥ್

ಬೆಂಗಳೂರು: ಜಯನಗರ ವಿಜಯ ಕಾಲೇಜು ಸಭಾಂಗಣದಲ್ಲಿ ಅಕ್ಷಯ ವಿಪ್ರ ಮಹಾಸಭಾದಿಂದ 19ನೇ ವಾರ್ಷಿಕೋತ್ಸವ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ವರು ಮಹನೀಯರಿಗೆ `ಅಕ್ಷಯ ರತ್ನ’ ಪುರಸ್ಕಾರ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ.

ದಿವ್ಯ ಸಾನಿಧ್ಯವನ್ನು ಮುಳಬಾಗಿಲು ಶ್ರೀಪಾದರಾಜಮಠದ ಪೀಠಾಧಿಪತಿಗಳಾದ ೧೦೦೮ ಶ್ರೀ ಶ್ರೀ ಸುಜಯನಿಧಿ ತೀರ್ಥರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಎಸ್.ರಘುನಾಥ್ ಅವರು ಅಕ್ಷಯ ವಿಪ್ರ ಮಹಾಸಭಾದ ಅಧ್ಯಕ್ಷರಾದ ಎನ್.ಕೆ.ರಾಮಚಂದ್ರರಾವ್, ಗೌರವಾಧ್ಯಕ್ಷರಾದ ಡಾ.ಎನ್.ಕೀರ್ತಿರಾಜ್ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಎನ್.ಜಿ.ವಾಸುದೇವಮೂರ್ತಿ, ಡಾ.ಕೆ.ರಘುನಾಥರಾವ್‌, ದಿ.ಎಸ್.ರಾಮಕೃಷ್ಣ ಎನ್.ಕೆ.ಪಣೆರಾಜ್ ರವರಿಗೆ ಅಕ್ಷಯ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಶ್ರೀ ಶ್ರೀ ಸುಜಯನಿಧಿ ತೀರ್ಥರು ಮಾತನಾಡಿ ಎಲ್ಲರನ್ನು ಒಟ್ಟುಗೂಡಿಸಿ ವಿಪ್ರರು ಹೋಗಬೇಕು. ಪ್ರತಿಯೊಬ್ಬರು ಸಮಾಜದ ಏಳಿಗೆಗಾಗಿ ಶ್ರಮಿಸಬೇಕು. ಬ್ರಾಹ್ಮಣ ಸಂಖ್ಯೆ ಬಹಳ ವಿರಳ.

ಆರ್ಥಿಕವಾಗಿ ಅನುಕೂಲವಿರುವವರು ನಮ್ಮ ಸಮಾಜದ ಅಭಿವೃದ್ಧಿ ಸಹಕಾರ ಕೊಡಬೇಕು. ಅವಶ್ಯಕತೆ ಇರುವವರಿಗೆ ಸಹಾಯ ಮಾಡಬೇಕು. ಧರ್ಮ ಮತ್ತು ಸಂಸ್ಕೃತಿ ಉಳಿಸಬೇಕು. ಮಕ್ಕಳಿಗೆ ನಮ್ಮ ಸಂಪ್ರಾದಯ ಕಲಿಸಬೇಕು. ಬ್ರಾಹ್ಮಣ ಸಮಾಜ ದೊಡ್ಡ ಸಮಾಜ. ಧರ್ಮ ರಕ್ಷಣೆ ಮಾಡಿದರೆ, ನಾವು ಉಳಿಯುತ್ತೇವೆ. ನದಿಗಳು ಸೇರಿ ಸಮುದ್ರವಾಗುತ್ತದೆ ಅದರಂತೆ ಬ್ರಾಹ್ಮಣರು ಎಲ್ಲರು ಸೇರಿ ಸಂಘಟಿರಾಗಬೇಕು.

ಅಧ್ಯಕ್ಷರಾದ ಎಸ್.ರಘುನಾಥ್ ರವರು ಮಾತನಾಡಿ ಅಕ್ಷಯ ವಿಪ್ರ ಮಹಾಸಭಾ ಬ್ರಾಹ್ಮಣ ಸಂಘಟನೆಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ.

ನಮ್ಮ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬದಲಾವಣೆ ಮತ್ತು ಅಭಿವೃದ್ಧಿಯತ್ತ ಸಾಗುತ್ತಿದೆ. ಸಂಸ್ಕಾರ, ಸಂಘಟನೆ ಎಂಬ ಉದ್ದೇಶ ಇಟ್ಟುಕೊಂಡು ಸದಸ್ಯತ್ವ ಅಂದೋಲನ ಯಶ್ವಸಿಯಾಗಿ ಸಾಗುತ್ತಿದೆ.

ಸ್ವಾವಲಂಭಿಯಾಗಿ, ಸದೃಡವಾಗಿ ಬ್ರಾಹ್ಮಣರು ಬೆಳಯಬೇಕು ಎಂದು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಈ ನಿಟ್ಟಿನಲ್ಲಿ 100ಕೋಟಿ ದತ್ತನಿಧಿ ಆರಂಭಿಸಲಾಗಿದೆ. ಶ್ರೀಮಂತ ವಿಪ್ರರು ಆರ್ಥಿಕ ಸಹಾಯ ನೀಡಿ ದತ್ತನಿಧಿಗೆ ಸಹಾಯ ನೀಡಬೇಕು.

ವೇದಪಾಠ ಕಲಿಕಾ ಕೇಂದ್ರ, ಶಾಸ್ತ್ರೀಯ ಸಂಗೀತ, ಯೋಗ ತರಭೇತಿ ಕೇಂದ್ರ ಮಹಾಸಭಾದಲ್ಲಿ ಆರಂಭಿಸಲಾಗಿದೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಪರೀಕ್ಷಾ ತರಭೇತಿ ಸಹ ಮಹಾಸಭಾದಿಂದ ಏರ್ಪಡಿಸಲಾಗಿದೆ.

ಆಚಾರ್ಯರಿಗೆ ಅಪಮಾನ ಮಾಡಬೇಡಿ, ಬ್ರಾಹ್ಮಣರ ಸಂಖ್ಯೆ ಕಡಿಮೆಯಿದೆ ನಮ್ಮಲ್ಲಿ ಕಚ್ಚಾಟ ಬೇಡ, ಸಂಘಟಿತರಾಗಿ ಸಹೋದರರಂತೆ ಬಾಳೋಣ ಎಂದು ಹೇಳಿದರು.

ಪದಾಧಿಕಾರಿಗಳಾದ ಕೆ.ಆನಂದರಾವ್, ಡಾ.ಕಿರಣ್ ಎಸ್.ಮೂರ್ತಿ, ಡಾ.ಕೆ.ರಘುನಾಥರಾವ್, ಲಕ್ಷ್ಮೀಶ ವಿ.ಶ್ರೀಪ್ರಕಾಶ್,ಕೆ.ರಾಘವೇಂದ್ರರಾವ್, ಎನ್.ಎಸ್.ಸುಧೀಂದ್ರ ರಾವ್ ಮತ್ತು ಮಹೇಶ್ ಕುಮಾರ್ ಆರ್., ಟಿ.ಎನ್.ಶಾಂತ ಕುಮಾರ್.,ಎನ್.ಪಿ.ಮಂಜುನಾಥ್, ಎಲ್.ಜಗನ್ನಾಥ್, ಆರ್.ಶ್ರೀನಿವಾಸ್,ಎನ್.ರಾಘವೇಂದ್ರರಾವ್,ಎನ್.ಜೆ.ಮಣಿಕುಮಾರ್, ಎ.ವಿಜಯಕುಮಾರ್ ಭಟ್, ಎನ್.ರಾಘವೇಂದ್ರರಾವ್ ಮತ್ತು ಕಾರ್ಯಕಾರಿ ಸದಸ್ಯರು ಭಾಗವಹಿಸಿದ್ದರು.

Hot this week

ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ: ದಕ್ಷಿಣಾಯಣ. AYANA:...

ಸ್ವಾನಂದಾಶ್ರಮ: ಭಕ್ತಿ, ಸಂಸ್ಕೃತಿ, ಸೇವೆ ಮತ್ತು ಹೊಯ್ಸಳ ವೈಭವದ ಸಂಗಮ

ಆಗಸ್ಟ್ 16ರಿಂದ ವರದ ಗಣಪತಿ ವ್ರತಾಚರಣೆ ಬೆಂಗಳೂರು: ಕನಕಪುರ ರಸ್ತೆಯ ಅಗರ–ತಾತಗುಣಿಯಲ್ಲಿ(Thathaguni) ನೆಲೆಗೊಂಡಿರುವ...

ಮೇಕೆದಾಟು ಯೋಜನೆಗೆ ವೇಗ ನೀಡಲು ಅಧಿಕಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

ಬೆಂಗಳೂರು: ನೂತನವಾಗಿ ಜಲಸಂಪನ್ಮೂಲ ಸಚಿವರಾಗಿ(New Minister of Water Resources) ಅಧಿಕಾರ...

ತೇಜಸ್ವಿ ಜನ್ಮದಿನೋತ್ಸವ ಅಂಗವಾಗಿ ‘ಕರ್ವಾಲೊ’ ಕೃತಿ ಆಧಾರಿತ ಡಿಜಿಟಲ್ ಚಿತ್ರಕಲಾ ಸ್ಪರ್ಧೆಗೆ ಅರ್ಜಿ ಆಹ್ವಾನ

ಬೆಂಗಳೂರು : ಕನ್ನಡದ ಖ್ಯಾತ ಸಾಹಿತಿ ಹಾಗೂ ಚಿಂತಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ(K.P.Purnachandra...

ಗಣ್ಯರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ

ಬೆಂಗಳೂರು : ಇಂದು ವಿಧಾನಸಭೆಯ ಅಧಿವೇಶನದಲ್ಲಿ(Legislative Assembly Session) ಇತ್ತೀಚೆಗೆ ನಿಧನರಾದ...

Topics

ಸಚಿವಾಲಯ ಗ್ರಂಥಾಲಯದಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ: ಮಾಸಿಕ ರೂ. 10,900 ಸ್ಟೈಫಂಡ್

ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವಾಲಯ ಗ್ರಂಥಾಲಯದಲ್ಲಿ(Karnataka Government Secretariat Library) 'ಅಪ್ರೆಂಟಿಸ್...

Related Articles