ದಾಳಿಂಬೆ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ರೋಗ ಮುಕ್ತ ಸಸಿಗಳ (Roga mukta sasigalu) ಆಯ್ಕೆ ಹಾಗೂ ವೈಜ್ಞಾನಿಕ ಬೇಸಾಯ ಪದ್ಧತಿಗಳು ಅತ್ಯಂತ ಅವಶ್ಯಕ ಎಂದು ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ. ವೆಂಕಟೇಶಲು(Dr. Venkateshalu.) ಅವರು ತಿಳಿಸಿದ್ದಾರೆ.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (Bagalkot), ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ (ತಿಡಗುಂದಿ, ವಿಜಯಪುರ) ಹಾಗೂ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಕೇಂದ್ರದ (ತಿಡಗುಂದಿ) ಜಂಟಿ ಆಶ್ರಯದಲ್ಲಿ ಜುಲೈ 14 ರಂದು ಅಥಣಿ ತಾಲೂಕಿನ ಕಕಮರಿ ಗ್ರಾಮದ ಪ್ರಗತಿಪರ ರೈತ ಗಿರಿಮಲ್ಲ ಬಸಪ್ಪ ಬಾಳಿಕಾಯಿ ಅವರ ತೋಟದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ದಾಳಿಂಬೆ ಕ್ಷೇತ್ರೋತ್ಸವ ಹಾಗೂ ತರಬೇತಿ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಜಯಪುರ ಮತ್ತು ಸುತ್ತಮುತ್ತಲಿನ ಭಾಗವು ಉತ್ತಮ ಭೂಮಿ ಹಾಗೂ ನೀರಿನ ಸೌಲಭ್ಯ ಹೊಂದಿದ್ದು, ಗುಣಮಟ್ಟದ ದಾಳಿಂಬೆ ಬೆಳೆಯಲು ಅತ್ಯಂತ ಸೂಕ್ತವಾಗಿದೆ. ದಾಳಿಂಬೆ ಕೃಷಿಯಲ್ಲಿ ಯಶಸ್ಸು ಕಾಣಲು ಪೂರ್ವ ಸಿದ್ಧತೆ, ಸೂಕ್ತ ಭೂಮಿ ತಯಾರಿ, ಸಮಗ್ರ ಪೋಷಕಾಂಶ ಹಾಗೂ ಕೀಟ-ರೋಗಗಳ ನಿರ್ವಹಣೆ, ಜೈವಿಕ ಪೀಡೆನಾಶಕಗಳ ಬಳಕೆ ಮತ್ತು ನಿಯಮಿತವಾಗಿ ಮಣ್ಣು ಹಾಗೂ ನೀರು ಪರೀಕ್ಷೆ ಮಾಡಿಸುವುದು ಬಹು ಮುಖ್ಯವಾಗಿದೆ. ಇದರೊಂದಿಗೆ ರೈತರು ನಿರಂತರವಾಗಿ ವಿಜ್ಞಾನಿಗಳೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಗತಿಪರ ರೈತ ಗಿರಿಮಲ್ಲ ಬಸಪ್ಪ ಬಾಳಿಕಾಯಿ ಅವರು, ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ನೀಡಿದ ತರಬೇತಿಯ ಫಲವಾಗಿ ಈ ಭಾಗದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಳ ವಿಸ್ತರಣೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಅಲ್ಲದೆ, ಉತ್ತಮ ಗುಣಮಟ್ಟದ ಜೈವಿಕ ಪೀಡೆನಾಶಕಗಳು ತಿಡಗುಂದಿಯ ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಲಭ್ಯವಿವೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಊರಿನ ಹಿರಿಯರಾದ ಅಪ್ಪುಗೌಡ ಪಾಟೀಲ ಅವರು ಮಾತನಾಡಿ, ಇಂತಹ ಸರಳ ಹಾಗೂ ಉಪಯುಕ್ತ ರೈತ ತರಬೇತಿ ಕಾರ್ಯಕ್ರಮಗಳು ಇತರ ಬೆಳೆಗಳಿಗೂ ವಿಸ್ತರಣೆಯಾಗಬೇಕಾದ ಅಗತ್ಯವಿದೆ ಎಂದರು.
ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ತಜ್ಞರು ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು.
ಸಸ್ಯ ಶರೀರ ಕ್ರಿಯಾಶಾಸ್ತ್ರ ತಜ್ಞರು ಹಾಗೂ ಕೇಂದ್ರದ ಮುಖ್ಯಸ್ಥರಾದ ಡಾ. ಮಲ್ಲಿಕಾರ್ಜುನ ಗು. ಅವಟಿ ಅವರು, ದಾಳಿಂಬೆಯಲ್ಲಿ ಸಸ್ಯ ಪ್ರಚೋದಕಗಳ ಸಮರ್ಪಕ ಬಳಕೆಯ ಬಗ್ಗೆ ವಿವರಿಸಿದರು.
ಹಣ್ಣು ವಿಜ್ಞಾನದ ಸಹಾಯಕ ಪ್ರಾಧ್ಯಾಪಕರಾದ ಡಾ. ಸಿದ್ದಣ್ಣ ತೋಕೆ ಅವರು, ದಾಳಿಂಬೆಯ ನೂತನ ಉತ್ಪಾದನಾ ತಾಂತ್ರಿಕತೆಗಳ ಕುರಿತು ಮಾಹಿತಿ ನೀಡಿದರು.

ಡಾ. ರಮೇಶ್ ಅವರು ದಾಳಿಂಬೆ ಬೆಳೆಯನ್ನು ಕಾಡುವ ವಿವಿಧ ರೋಗಗಳು ಹಾಗೂ ಅವುಗಳ ಸಮಗ್ರ ನಿರ್ವಹಣಾ ಕ್ರಮಗಳ ಬಗ್ಗೆ ರೈತರಿಗೆ ತಿಳಿಸಿಕೊಟ್ಟರು.
ಈ ಯಶಸ್ವಿ ಕ್ಷೇತ್ರೋತ್ಸವದಲ್ಲಿ ಕಕಮರಿ ಗ್ರಾಮ ಹಾಗೂ ಸುತ್ತಮುತ್ತಲಿನ ಪರಿಸರದ ಸುಮಾರು 40ಕ್ಕೂ ಹೆಚ್ಚು ದಾಳಿಂಬೆ ಬೆಳೆಗಾರರು ಸಕ್ರಿಯವಾಗಿ ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಂಡರು.