ಬೆಂಗಳೂರಿನ ವಿವಿಧ ಉಪವಿಭಾಗಗಳಲ್ಲಿ ನಾಳೆ ಜಲಮಂಡಳಿಯಿಂದ ‘ನೀರಿನ ಅದಾಲತ್’ ಆಯೋಜನೆ  

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ ಸಂಸ್ಥೆಯು(The Bangalore Water Supply and Sewerage Board) ಸಾರ್ವಜನಿಕರ ಕುಂದುಕೊರತೆಗಳನ್ನು ಶೀಘ್ರವಾಗಿ ಪರಿಹರಿಸುವ ಉದ್ದೇಶದಿಂದ ನಗರದ ವಿವಿಧ ಉಪವಿಭಾಗಗಳಲ್ಲಿ ಸೆಪ್ಟೆಂಬರ್ 17, 2026ರ ಗುರುವಾರದಂದು ಬೆಳಿಗ್ಗೆ 9.30 ಗಂಟೆಯಿಂದ 11.00 ಗಂಟೆಯವರೆಗೆ ‘ನೀರಿನ ಅದಾಲತ್’ನ್ನು(Water Adalat) ಹಮ್ಮಿಕೊಂಡಿದೆ.
ಈ ಅದಾಲತ್‌ನಲ್ಲಿ ಸಾರ್ವಜನಿಕರ ನೀರಿನ ಬಿಲ್ಲು ವ್ಯತ್ಯಾಸಗಳು, ಹೊಸ ನೀರು ಹಾಗೂ ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿ ಆಗುತ್ತಿರುವ ವಿಳಂಬ, ಗೃಹ ಬಳಕೆಯ ಸಂಪರ್ಕವನ್ನು ಗೃಹೇತರ (ವ್ಯಾಪಾರಿ) ಬಳಕೆಗೆ ಪರಿವರ್ತಿಸುವಲ್ಲಿನ ಸಮಸ್ಯೆಗಳು ಸೇರಿದಂತೆ ನೀರು ಸರಬರಾಜು ಮತ್ತು ಒಳಚರಂಡಿಗೆ ಸಂಬಂಧಿಸಿದ ವಿವಿಧ ಕುಂದುಕೊರತೆಗಳ ಕುರಿತು ದೂರುಗಳನ್ನು ಸ್ವೀಕರಿಸಿ, ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಅವಕಾಶ ನೀಡಲಾಗಿದೆ.
ಅದಾಲತ್ ನಡೆಯುವ ಉಪವಿಭಾಗಗಳು ಹಾಗೂ ಸ್ಥಳಗಳು: 
ಪಶ್ಚಿಮ-1-2 ಉಪವಿಭಾಗ: 1ನೇ ‘ಎನ್’ ಬ್ಲಾಕ್, 4ನೇ ಅಡ್ಡ ರಸ್ತೆ, ವಿದ್ಯಾವರ್ಧಕ ಶಾಲೆ ಹಿಂಭಾಗ (ಕೇತಮಾರನಹಳ್ಳಿ ವಾಟರ್ ಟ್ಯಾಂಕ್), ರಾಜಾಜಿನಗರ. – ಸೇವಾಠಾಣೆಗಳು: ಕೇತಮಾರನಹಳ್ಳಿ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ-1 & 2, ನಂದಿನಿ ಲೇಔಟ್-1. ಸಂಪರ್ಕ ಸಂಖ್ಯೆ: 9980214906.
ಪಶ್ಚಿಮ-2-2 ಉಪವಿಭಾಗ: ಪೈಪ್ ಲೈನ್ ರಸ್ತೆ, ಸುಂಕದಕಟ್ಟೆ. – ಸೇವಾಠಾಣೆಗಳು: ಹೆಗ್ಗನಹಳ್ಳಿ, ಹೇರೋಹಳ್ಳಿ. ಸಂಪರ್ಕ ಸಂಖ್ಯೆ 7259756643.
ಪಶ್ಚಿಮ-3-2 ಉಪವಿಭಾಗ: ನೆಲಮಹಡಿ, ಅರ್ಕಾವತಿ ಭವನ, 5ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಆ‌ರ್.ಪಿ.ಸಿ ಲೇಔಟ್, ವಿಜಯನಗರ 2ನೇ ಹಂತ. – ಸೇವಾಠಾಣೆಗಳು: ಮಾಗಡಿ ರಸ್ತೆ-2, ಹೊಸಹಳ್ಳಿ ಪಂಪ್ ಹೌಸ್, ಮೈಸೂರು ರಸ್ತೆ. ಸಂಪರ್ಕ ಸಂಖ್ಯೆ: 9845444069.
ಪಶ್ಚಿಮ-4-2 ಉಪವಿಭಾಗ: 5ನೇ ಬ್ಲಾಕ್, ಹೊರವರ್ತುಲ ರಸ್ತೆ, ನಾಗರಬಾವಿ. – ಸೇವಾಠಾಣೆಗಳು: ನಾಗರಬಾವಿ, ಅನ್ನಪೂರ್ಣೇಶ್ವರಿನಗರ, ಸರ್.ಎಂ.ವಿ ಲೇಔಟ್-1 & 2. ಸಂಪರ್ಕ ಸಂಖ್ಯೆ: 7259031533.
ಉತ್ತರ-1-2 ಉಪವಿಭಾಗ: ನಂ.3, ಪಿ&ಟಿ ಕಾಲೋನಿ, ಆ‌ರ್.ಟಿ.ನಗರ. – ಸೇವಾಠಾಣೆಗಳು: ಆರ್.ಟಿ.ನಗರ, ಸಂಜಯನಗರ, ಆನಂದನಗರ, ಮನೋರಾಯನಪಾಳ್ಯ. ಸಂಪರ್ಕ ಸಂಖ್ಯೆ: 9845444060.
ಉತ್ತರ-2-2 ಉಪವಿಭಾಗ: 1ನೇ ಬ್ಲಾಕ್, 9ನೇ ‘ಡಿ’ ಮುಖ್ಯ ರಸ್ತೆ, ಸರ್ವಿಸ್‌ ರಸ್ತೆ, ಹೆಚ್.ಆರ್.ಬಿ.ಆರ್ ಲೇಔಟ್, ಕಲ್ಯಾಣ ನಗರ. – ಸೇವಾಠಾಣೆಗಳು: ಹೆಚ್.ಬಿ.ಆರ್, ನಾಗವಾರ. ಸಂಪರ್ಕ ಸಂಖ್ಯೆ: 8217467686.
ಉತ್ತರ-3-2 ಉಪವಿಭಾಗ: 1ನೇ ಮಹಡಿ, ಪಿನಾಕಿನಿ ಭವನ, ದೊಡ್ಡಬಳ್ಳಾಪುರ ರಸ್ತೆ, ಮೇಜರ್ ಉನ್ನಿಕೃಷ್ಣನ್ ರಸ್ತೆ, ಯಲಹಂಕ. – ಸೇವಾಠಾಣೆಗಳು: ರಾಚೇನಹಳ್ಳಿ, ಕೋಗಿಲು. ಸಂಪರ್ಕ ಸಂಖ್ಯೆ: 9590595245.
ಉತ್ತರ-4-2 ಉಪವಿಭಾಗ: 1ನೇ ಮಹಡಿ, 7ನೇ ಮುಖ್ಯ ರಸ್ತೆ, ಎಂ.ಇ.ಐ ಲೇಔಟ್, ಹೆಸರಘಟ್ಟ ರಸ್ತೆ. – ಸೇವಾಠಾಣೆಗಳು: ಅಬ್ಬಿಗೆರೆ, ಬಾಹುಬಲಿನಗರ. ಸಂಪರ್ಕ ಸಂಖ್ಯೆ: 9845967847.
ದಕ್ಷಿಣ-1-2 ಉಪವಿಭಾಗ: 21ನೇ ಮುಖ್ಯ ರಸ್ತೆ, 11ನೇ ಬ್ಲಾಕ್, ಅಂಜನಾಪುರ. – ಸೇವಾಠಾಣೆಗಳು: ಅಂಜನಾಪುರ, ಬ್ಯಾಂಕ್, ತಲಘಟ್ಟಪುರ, ಗೊಟ್ಟಿಗೆರೆ. ಸಂಪರ್ಕ ಸಂಖ್ಯೆ: 9886152469.
ದಕ್ಷಿಣ-2-2 ಉಪವಿಭಾಗ: ಎಇಸಿಎಸ್‌ ಲೇಔಟ್, ‘ಎ’ ಬ್ಲಾಕ್, ಕೂಡ್ಲು. – ಸೇವಾಠಾಣೆಗಳು: ಹೆಚ್.ಎಸ್.ಆರ್ ਲೇಔಟ್, ಮಂಗಮ್ಮನಪಾಳ್ಯ, ಕೂಡ್ಲು, ಹರಳೂರು. ಸಂಪರ್ಕ ಸಂಖ್ಯೆ: 9845444090.
ದಕ್ಷಿಣ-3-2 ಉಪವಿಭಾಗ: 9ನೇ ಮುಖ್ಯರಸ್ತೆ, ಬಿ.ಟಿ.ಎಮ್ 2ನೇ ಹಂತ. – ಸೇವಾಠಾಣೆಗಳು: ಬಿ.ಟಿ.ಎಮ್ 1, 2 ಹಾಗೂ 3ನೇ ಹಂತ. ಸಂಪರ್ಕ ಸಂಖ್ಯೆ: 9845444042.
ದಕ್ಷಿಣ-4-2 ಉಪವಿಭಾಗ: 4ನೇ ಬ್ಲಾಕ್, ಬನಶಂಕರಿ 6ನೇ ಹಂತ, ರಾಘವೇಂದ್ರಸ್ವಾಮಿ ಮಠದ ಎದುರು, ಲಿಂಗಧೀರನಹಳ್ಳಿ. – ಸೇವಾಠಾಣೆಗಳು: ಬನಶಂಕರಿ 6ನೇ ಹಂತ, ಗುಬ್ಬಲಾಳ, ವಸಂತವಲ್ಲಭನಗರ. ಸಂಪರ್ಕ ಸಂಖ್ಯೆ: 9591988970.
ಸಾಮಾನ್ಯ ದಿನಗಳಲ್ಲಿಯೂ ಸಹ ಸಾರ್ವಜನಿಕರು ನೀರು ಸರಬರಾಜು ಮತ್ತು ಒಳಚರಂಡಿ ಕುಂದುಕೊರತೆಗಳ ದೂರು ದಾಖಲಿಸಲು ಜಲಮಂಡಳಿಯ 24×7 ತಾಸು ಕಾರ್ಯನಿರ್ವಹಿಸುವ ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ ಸಂಖ್ಯೆ 1916 ಗೆ ಕರೆ ಮಾಡಬಹುದು. ಅಲ್ಲದೆ, 8762228888 ಸಂಖ್ಯೆಗೆ ವಾಟ್ಸ್‌ಆಪ್‌ ಸಂದೇಶ ಕಳುಹಿಸುವ ಮೂಲಕವೂ ದೂರು ನೋಂದಾಯಿಸಬಹುದಾಗಿದೆ.
ಅದಾಲತ್ ನಡೆಯುವ ವ್ಯಾಪ್ತಿಯ ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳಳುವಂತೆ ಜಲಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Hot this week

BIG NEWS :MUMBAI TOLL : ಮುಂಬೈ ಟೋಲ್ ದರಗಳಲ್ಲಿ ಶೇ.20ರಷ್ಟು ಏರಿಕೆ

ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1,...

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

Topics

BIG NEWS :MUMBAI TOLL : ಮುಂಬೈ ಟೋಲ್ ದರಗಳಲ್ಲಿ ಶೇ.20ರಷ್ಟು ಏರಿಕೆ

ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1,...

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

ರಾಮರಸದಲ್ಲಿ ಆದಾಶರ್ಮಾ ದುರ್ಗಿ ರೋಲ್

ಗುರುದೇಶಪಾಂಡೆ ಒಡೆತನದ ’ಜಿ ಅಕಾಡೆಮಿ’ಯಲ್ಲಿ(Zee Academy) ನಟನೆ ಕಲಿತಿರುವ ಪ್ರತಿಭೆಗಳಿಗೆ ಅವಕಾಶ...

Related Articles