ಪ್ರಜಾಸತ್ತಾತ್ಮಕ ವ್ಯವಸ್ಥೆ ದಮನ ಮಾಡುವ ಕೆಲಸ: ಎನ್.ರವಿಕುಮಾರ್

 

ಬೆಂಗಳೂರು: ಗೋರಕ್ಷಣೆ, ಸಂಸ್ಕøತಿ ರಕ್ಷಿಸುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್(N.Ravikumar) ಅವರು ಆಕ್ಷೇಪಿಸಿದರು.
ಪುನೀತ್ ಕೆರೆಹಳ್ಳಿ(Punith Kerehalli) ಅವರ ವಿರುದ್ಧ ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ಇಂದು ಬಿಜೆಪಿ ವತಿಯಿಂದ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಇದೇರೀತಿ ಸಾಮಾಜಿಕ ಮಾಧ್ಯಮದಲ್ಲಿ ಸರ್ಕಾರದ ವಿರುದ್ಧ ಬರೆದವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ದಮನ ಮಾಡುವ ಕೆಲಸ ಎಂದು ಟೀಕಿಸಿದರು. ಇದೇರೀತಿ ಕ್ರಮ ಕೈಗೊಂಡರೆ ನಾವು ದೊಡ್ಡ ಆಂದೋಲನ ಮಾಡಲಿದ್ದೇವೆ ಎಂದು ಎಚ್ಚರಿಸಿದರು.

ಗೋರಕ್ಷಕರಿಗೆ ಜೈಲು ಭಾಗ್ಯ: ಅರವಿಂದ ಬೆಲ್ಲದ

ರಾಜ್ಯದಲ್ಲಿ ಗೋರಕ್ಷಕರಿಗೆ ಜೈಲು ಭಾಗ್ಯ ನೀಡಲಾಗುತ್ತಿದೆ. ಆದರೆ, ಗೋಹತ್ಯೆ ಮಾಡುವವರಿಗೆ ರಕ್ಷಣೆ ಕೊಡುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಅವರು ಟೀಕಿಸಿದರು. ನಮ್ಮ ಸಂಸ್ಕಾರ, ಸಂಸ್ಕøತಿ, ನಮ್ಮ ಪದ್ಧತಿಗಳನ್ನು ರಕ್ಷಿಸುವವರಿಗೆ 10 ಲಕ್ಷ ಬಾಂಡ್ ಪಡೆಯುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಸುಳ್ಳು ಮೊಕದ್ದಮೆ ದಾಖಲಿಸುವುದು ಸರಿಯಲ್ಲ- ಸಿ.ಟಿ.ರವಿ

ಅಕ್ರಮ ಗೋಹತ್ಯೆ ಮಾಡುವವರನ್ನು ಬೆಂಬಲಿಸುತ್ತಾರೆ. ಗೋಹತ್ಯೆ ತಡೆಯುವವರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಖಂಡಿಸಿದರು. ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದವರು ಇಲ್ಲೇ ನೆಲೆಸಲು ಬೆಂಬಲ ನೀಡುವ ವ್ಯವಸ್ಥೆ ಇದೆ ಎಂದು ಟೀಕಿಸಿದರು. ರಾಷ್ಟ್ರಹಿತದ ಕೆಲಸ ಮಾಡುವವರ ಮೇಲೆ ಕೇಸ್ ಹಾಕುತ್ತಾರೆ ಎಂದು ದೂರಿದರು.

 

ಸರಕಾರಕ್ಕೆ ಬಿಸಿ ಮುಟ್ಟಿಸಲು ಕಾರ್ಯತಂತ್ರ: ಬಿ.ವೈ.ವಿಜಯೇಂದ್ರ

Hot this week

ಸರಕಾರಕ್ಕೆ ಬಿಸಿ ಮುಟ್ಟಿಸಲು ಕಾರ್ಯತಂತ್ರ: ಬಿ.ವೈ.ವಿಜಯೇಂದ್ರ

 ಬೆಂಗಳೂರು: ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಹ ಕೆಲಸವನ್ನು(Hot Work)...

ಇಂದು ದೇಶಾದ್ಯಂತ ಸಂವಿಧಾನ ದಿನಾಚರಣೆ: ನವೆಂಬರ್ 30ರಿಂದ ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕೇಂದ್ರ ಸರ್ಕಾರ ಸಿದ್ಧತೆ

ನವದೆಹಲಿ: ಭಾರತದ ಸಂವಿಧಾನ ಅಂಗೀಕಾರಗೊಂಡ ಐತಿಹಾಸಿಕ ದಿನದ ಸ್ಮರಣಾರ್ಥ ಇಂದು (ನವೆಂಬರ್...

ಜಿಕೆವಿಕೆಯಲ್ಲಿ ನವೆಂಬರ್ 28ರಂದು “ರೈತ ಸಂತೆ”: ತಾಜಾ ಕೃಷಿ ಉತ್ಪನ್ನಗಳು, ಸಿರಿಧಾನ್ಯ ಹಾಗೂ ಸಾವಯವ ವಸ್ತುಗಳ ಮಾರಾಟ

ಬೆಂಗಳೂರು: ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ (GKVK) ಆವರಣದಲ್ಲಿನ ಗಣಪತಿ ದೇವಸ್ಥಾನದ ಹತ್ತಿರ...

ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ಬೆಳೆ ರೋಗಗಳ ಆರಂಭಿಕ ಪತ್ತೆ ಮತ್ತು ನಿಯಂತ್ರಣಕ್ಕೆ ಆಧುನಿಕ...

ಬೆಂಗಳೂರು: ಮದ್ಯಪಾನ ಮತ್ತು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ...

Topics

ಸರಕಾರಕ್ಕೆ ಬಿಸಿ ಮುಟ್ಟಿಸಲು ಕಾರ್ಯತಂತ್ರ: ಬಿ.ವೈ.ವಿಜಯೇಂದ್ರ

 ಬೆಂಗಳೂರು: ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಹ ಕೆಲಸವನ್ನು(Hot Work)...

ಜಿಕೆವಿಕೆಯಲ್ಲಿ ನವೆಂಬರ್ 28ರಂದು “ರೈತ ಸಂತೆ”: ತಾಜಾ ಕೃಷಿ ಉತ್ಪನ್ನಗಳು, ಸಿರಿಧಾನ್ಯ ಹಾಗೂ ಸಾವಯವ ವಸ್ತುಗಳ ಮಾರಾಟ

ಬೆಂಗಳೂರು: ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ (GKVK) ಆವರಣದಲ್ಲಿನ ಗಣಪತಿ ದೇವಸ್ಥಾನದ ಹತ್ತಿರ...

ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ಬೆಳೆ ರೋಗಗಳ ಆರಂಭಿಕ ಪತ್ತೆ ಮತ್ತು ನಿಯಂತ್ರಣಕ್ಕೆ ಆಧುನಿಕ...

ಬೆಂಗಳೂರು: ಮದ್ಯಪಾನ ಮತ್ತು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ...

ಬೆಂಗಳೂರು: ಕರ್ನಾಟಕ ವಿಧಾನಸಭೆ ಸಚಿವಾಲಯದಿಂದ ನಾಡಿನ ಜನತೆಗೆ ಅತೀ ಅಮೂಲ್ಯವಾದ ಪುಸ್ತಕಗಳನ್ನು...

ಎಂ.ಎಸ್. ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

  ಬೆಂಗಳೂರು: ಬೆಂಗಳೂರಿನ ಎಂ.ಎಸ್. ಎಂಜಿನಿಯರಿಂಗ್(M.S.Engineering) ಕಾಲೇಜಿನಲ್ಲಿ ಇಂದು ಸಂವಿಧಾನ ದಿನವನ್ನು ಅತ್ಯಂತ...

ನ. 28ರಂದು ಬೆಳಗಾವಿಯಲ್ಲಿ ‘ವಿಶ್ವಕರ್ಮ ವೈಭವ ಉತ್ಸವ’

‘ಸದ್ವಿಚಾರ ದರ್ಶನ’ ಪುಸ್ತಕ ಲೋಕಾರ್ಪಣೆ, ಸಾಧಕರಿಗೆ ‘ಕರುನಾಡ ಶಿರೋಮಣಿ ರತ್ನ’ ಪ್ರಶಸ್ತಿ...

Related Articles