ಬೆಂಗಳೂರು: ಬೆಂಗಳೂರು(Bangalore) ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು(Sewage Board) ನಗರದ ನಿವಾಸಿಗಳ ನೀರು ಮತ್ತು ಒಳಚರಂಡಿ ಸಂಬಂಧಿತ ಕುಂದುಕೊರತೆಗಳನ್ನು(Grievance) ಶೀಘ್ರವಾಗಿ ಪರಿಹರಿಸುವ ಉದ್ದೇಶದಿಂದ ಆಗಸ್ಟ್ 13ರ ಗುರುವಾರದಂದು ವಿವಿಧ ಉಪವಿಭಾಗಗಳಲ್ಲಿ ‘ನೀರಿನ ಅದಾಲತ್'(Water Adalat) ಆಯೋಜಿಸಿದೆ. ಸಂಬಂಧಿಸಿದ ಉಪ ವಿಭಾಗಗಳಲ್ಲಿ ಬೆಳಗ್ಗೆ 9.30 ರಿಂದ 11.00 ಗಂಟೆಯವರೆಗೆ ನೀರಿನ ಅದಾಲತ್ ನಡೆಯಲಿದ್ದು, ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಬಹುದು.
ಅದಾಲತ್‌ನಲ್ಲಿ ಪರಿಹರಿಸಲಾಗುವ ಮುಖ್ಯ ಸಮಸ್ಯೆಗಳು:
ನೀರಿನ ಬಿಲ್ಲು ವ್ಯತ್ಯಾಸಗಳು ಹಾಗೂ ಗೊಂದಲಗಳು.ಹೊಸ ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿ ಆಗುತ್ತಿರುವ ವಿಳಂಬ.
ಗೃಹ ಬಳಕೆಯ ಸಂಪರ್ಕವನ್ನು ಗೃಹೇತರ (ವಾಣಿಜ್ಯ) ಬಳಕೆಗೆ ಪರಿವರ್ತಿಸುವಲ್ಲಿನ ವಿಳಂಬ.
ಇತರ ಸೇವಾ ಕುಂದುಕೊರತೆಗಳು ಹಾಗೂ ಸ್ಥಳೀಯ ಜಲಮಂಡಳಿ ಸಂಬಂಧಿತ ದೂರುಗಳು.
ಅದಾಲತ್ ನಡೆಯುವ ಸ್ಥಳಗಳು ಮತ್ತು ಸಂಪರ್ಕ ಮಾಹಿತಿ:
ದಕ್ಷಿಣ ವಿಭಾಗ:
ದಕ್ಷಿಣ – 1 – 1: ಜೆ.ಪಿ.ನಗರ 8ನೇ ಘಟ್ಟ, ಜಂಬೂಸವಾರಿ ದಿಣ್ಣೆ ಮುಖ್ಯರಸ್ತೆಯ ಕಚೇರಿ
ಸೇವಾ ಠಾಣೆಗಳು: ಜೆ.ಪಿ.ನಗರ-2, ಕೊತ್ತನೂರು ದಿಣ್ಣೆ, ಜಂಬೂಸವಾರಿ ದಿಣ್ಣೆ, ವಿಜಯಬ್ಯಾಂಕ್ ಕಾಲೋನಿ, ಅರಕೆರೆ, ಮೈಕೋ ಲೇಔಟ್ – ಮೊ: 9900983569.
ದಕ್ಷಿಣ – 2 – 1: ಕೋಡಿಚಿಕ್ಕನಹಳ್ಳಿ ಜಿ.ಎಲ್.ಆರ್ ಆವರಣ
ಸೇವಾ ಠಾಣೆಗಳು: ಬೇಗೂರು, ಕೋಡಿಚಿಕ್ಕನಹಳ್ಳಿ, ಬೊಮ್ಮನಹಳ್ಳಿ – ಮೊ: 9845444037.
ದಕ್ಷಿಣ – 3 – 1: ಕೋರಮಂಗಲ 3ನೇ ಬ್ಲಾಕ್, 17ನೇ ಮುಖ್ಯರಸ್ತೆ
ಸೇವಾ ಠಾಣೆಗಳು: ಕೋರಮಂಗಲ 1, 2 ಮತ್ತು 3 – ಮೊ: 9972001265.
ದಕ್ಷಿಣ – 4 – 1: ಬನಶಂಕರಿ 3ನೇ ಹಂತ, ಬನಗಿರಿನಗರ ವಾಟರ್ ಟ್ಯಾಂಕ್ ಪಕ್ಕ
ಸೇವಾ ಠಾಣೆಗಳು: ಬನಶಂಕರಿ, ಪದ್ಮನಾಭನಗರ, ಕೆ.ಎಸ್. ಲೇಔಟ್, ಯಲಚೇನಹಳ್ಳಿ – ಮೊ: 9845444036.
ಕೇಂದ್ರ ವಿಭಾಗ:
ಕೇಂದ್ರ – 1 – 1: ಹೈಗ್ರೌಂಡ್ಸ್, ಮಿಲ್ಲರ್ಸ್ ರಸ್ತೆ ಕಚೇರಿ
ಸೇವಾ ಠಾಣೆಗಳು: ಹೈಗ್ರೌಂಡ್ಸ್, ಜಯಮಹಲ್, ಕೋಲ್ಸ್ ಪಾರ್ಕ್ – ಮೊ: 9900944041.
ಕೇಂದ್ರ – 2 – 1: ಹಲಸೂರು, ಲಿಡೋ ಮಾಲ್ ಎದುರು
ಸೇವಾ ಠಾಣೆಗಳು: ಹಲಸೂರು, ದೊಮ್ಮಲೂರು, ಮಾರತ್‌ಹಳ್ಳಿ – ಮೊ: 9686572469.
ಕೇಂದ್ರ – 3 – 1: ಚಿಕ್ಕಲಾಲ್‌ಬಾಗ್, ತುಳಸಿತೋಟ, ಪಾರ್ಕ್ ರೋಡ್
ಸೇವಾ ಠಾಣೆಗಳು: ಎಲ್‌ಎಲ್‌ಆರ್, ಚಿಕ್ಕಲಾಲ್‌ಬಾಗ್, ಬನ್ನಪ್ಪ ಪಾರ್ಕ್, ಸುಧಾಮನಗರ-1 – ಮೊ: 9845444081.
ಕೇಂದ್ರ – 4 – 1: ಜಯನಗರದ ಕಪಿಲ ಭವನ
ಸೇವಾ ಠಾಣೆಗಳು: ಹೊಂಬೇಗೌಡನಗರ, ಬೈರಸಂದ್ರ, ವಿ.ವಿ.ಪುರಂ – ಮೊ: 9008380605.
ಪೂರ್ವ ವಿಭಾಗ:
ಪೂರ್ವ – 1 – 2: ಕಲ್ಕೆರೆ, ಎನ್‌ಆರ್‌ಐ ಲೇಔಟ್ ಮುಖ್ಯರಸ್ತೆ
ಸೇವಾ ಠಾಣೆಗಳು: ಕಲ್ಕೆರೆ, ಚಲ್ಲಕೆರೆ – ಮೊ: 9980410376.
ಪೂರ್ವ – 2 – 2: ಎ.ನಾರಾಯಣಪುರ, ಹನುಮಾನ್ ಜಂಕ್ಷನ್ ಹತ್ತಿರ
ಸೇವಾ ಠಾಣೆಗಳು: ಎ.ನಾರಾಯಣಪುರ, ವಿಜ್ಞಾನನಗರ – ಮೊ: 8197382595.
ಪೂರ್ವ – 3 – 2: ತೂಬರಹಳ್ಳಿ, ಬಿಇಎಂಎಲ್ ಲೇಔಟ್
ಸೇವಾ ಠಾಣೆಗಳು: ಚನ್ನಸಂದ್ರ, ವರ್ತೂರು – ಮೊ: 9535544974.
ಪೂರ್ವ – 4 – 2: ದೊಡ್ಡಕಣ್ಣಹಳ್ಳಿ, ಜನತಾ ಕಾಲೋನಿಯ ವೇಮನ ಮೈದಾನ
ಸೇವಾ ಠಾಣೆಗಳು: ಗುಂಜೂರು, ದೊಡ್ಡಕಣ್ಣಹಳ್ಳಿ – ಮೊ: 9632861112.
ಅದಾಲತ್ ಹೊರತಾಗಿಯೂ ದಿನದ 24 ಗಂಟೆಯೂ ದೂರು ದಾಖಲಿಸಲು ಜಲಮಂಡಳಿಯ ಉಚಿತ ಸಹಾಯವಾಣಿ 1916 ಲಭ್ಯವಿದೆ. ಸಾರ್ವಜನಿಕರು 8762228888 ಸಂಖ್ಯೆಗೆ ವಾಟ್ಸ್‌ಆಪ್ ಸಂದೇಶ ಕಳುಹಿಸುವ ಮೂಲಕವೂ ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ಜಲ ಮಂಡಳಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
