ಬೆಂಗಳೂರು: ಸಂವಿಧಾನದ ಆಶಯದಂತೆ ಸರ್ಕಾರ ಆಡಳಿತ ನಡೆಸಬೇಕು ಹಾಗೂ ಇಡೀ ಸಮಾಜ ಸಂವಿಧಾನದ ಪರಿಪೂರ್ಣ ಆಶಯದಂತೆ(As desired) ನಡೆದುಕೊಳ್ಳಬೇಕು ಎಂದು ಕರ್ನಾಟಕ ಉಚ್ಚನ್ಯಾಯಲಯದ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್(H.N.Nagamohan Das) ತಿಳಿಸಿದರು.

ಇಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗವು ಇಂದು ಗಾಂಧಿ ಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ “ವಿಕೇಂದ್ರೀಕರಣ ಹಾಗೂ ಯೋಜನಾಬದ್ಧ ಅಭಿವೃದ್ಧಿ” ವಿಚಾರಣ ಸಂಕಿರಣ ಕಾಂiÀರ್iಕ್ರಮದಲ್ಲಿ ರಾಮಕೃಷ್ಣ ಹೆಗಡೆ ಹಾಗೂ ಹಿರಿಯ ಚಿಂತಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ರಾಮಕೃಷ್ಣ ಹೆಗಡೆ ಅವರು ಈ ರಾಜ್ಯ, ರಾಷ್ಟ್ರ ಕಂಡ ಮುತ್ಸದಿ ರಾಜಕಾರಣಿ. ಅಂತಹವರ ನೆನಪಿನಲ್ಲಿ ಹಮ್ಮಿಕೊಂಡಿರುವ ಈ ವಿಚಾರ ಸಂಕಿರಣ ಅಭಿನಂದನಾರ್ಹ ಎಂದರು.

ಮಾರ್ಕೆಟ್ ಎಕಾನಮಿ ಎನ್ನುವುದು ಬಂಡವಾಳ ಶಾಹಿ ವ್ಯವಸ್ಥೆಯ ಒಂದು ನೀತಿ. ಪ್ರತಿಯೊಂದನ್ನು ಮಾರ್ಕೆಟ್ಟಿಗೆ ಬಿಟ್ಟು ಬಿಡೋಣ. ಮಾರ್ಕೆಟ್ ತೀರ್ಮಾನ ಮಾಡುತ್ತದೆ ಜನರಿಗೆ ಏನು ಬೇಕು, ಬೇಡ.  ಸಮಾಜಕ್ಕೆ ಏನು ಬೇಕು, ಬೇಡ ಎಂಬ ಬಗ್ಗೆ ಪ್ರಯೋಗ ಅಮೇರಿಕಾದಲ್ಲಿ ನಡೆಯಿತು. ಇದರ ಪರಿಣಾಮ ಏನಾಯಿತು ಎಂಬ ಗಂಭೀರ ಸ್ವರೂಪವನ್ನು ನಾವು ನೋಡಿದ್ದೇವೆ.  ಎಲ್ಲವನ್ನು ಮಾರ್ಕೆಟ್ಟಿಗೆ ಬಿಟ್ಟು, ಕಡೆಗೆ 2008 ರಲ್ಲಿ ಅಮೆರಿಕಾ ಡಿಪ್ರೆóಷನ್ ಆಯಿತು. ಇದನ್ನು ಅರಿತ ಸರ್ಕಾರ  ಯೋಜನೆ ಇಲ್ಲದೆ ಪ್ರತಿಯೊಂದನ್ನು ಮಾರುಕಟ್ಟೆಗೆ ಬಿಟ್ಟರೆ ಸಮಾಜದಲ್ಲಿ  ಅನಾಹುತವಾಗುತ್ತದೆ ಎಂದು ಸರ್ಕಾರವೇ ಪ್ರವೇಶ ಮಾಡಬೇಕಾಯಿತು.

ಶಿಕ್ಷಣ, ಆರೋಗ್ಯ, ಮೂಲಭೂತ ಜನರ ಅವಶ್ಯಕತೆಗಳನ್ನು ಪೂರೈಸುವ ವಿಚಾರದಲ್ಲಿ ಸರ್ಕಾರಕ್ಕೊಂದು ಜವಾಬ್ದಾರಿ ಇದೆ.  ಇದರಿಂದ ನಾವು ಕಲಿಯುವ ಪಾಠ ಏನೆಂದರೆ. ಒಂದು ಯೋಜನೆಯ ಎಕಾನಮಿ ಹಾಗೂ ಯೋಜನಾ ಬಂಡವಾಳವು ಬಹಳ ಮುಖ್ಯ. ಅದರ ಮುಖಾಂತರ ಯೋಜನೆ ಅಭಿವೃದ್ಧಿ ಆದರೆ, ಸಮಾಜ ಎದುರಿಸುವಂತ ಅನೇಕ ಸಮಸ್ಯೆಗಳನ್ನು ಶಾಶ್ವತವಾಗಿ ನಾವು ಪರಿಹಾರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ಅವರು ಮಾತನಾಡಿ, ಯೋಜನಾ ಅಭಿವೃದ್ಧಿ, ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ ಈ ಎರಡು ಪರಿಕಲ್ಪನೆಗಳನ್ನು ಹತ್ತಿg ತರುವ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ  ತಾಂತ್ರಿಕ ವಿಚಾರ ಮಾತ್ರ ಆಗಬಾರದು. ತಾತ್ವಿಕ ವಿಚಾರದ ಆಶಯಗಳು ಬರಬೇಕು ಎನ್ನುವ ಹಿನ್ನೆಲೆಯಲ್ಲಿ ಚರ್ಚೆ ಆಗಬೇಕು. ಮಹಾತ್ಮ ಗಾಂಧೀಜಿ, ಜವಹರಲಾಲ್ ನೆಹರು, ಅಶೋಕ ಮೆಹ್ತಾ, ರಾಮಮನೋಹರ ಲೋಹಿಯಾ ಅವರು ಯೋಜಿತ ಅಭಿವೃದ್ಧಿಯ ಬಗ್ಗೆ ಆಳವಾದ ಚಿಂತನೆ ಹೊಂದಿದ್ದರು.  ದೇವರಾಜ ಅರಸು ಅವರು ಮೀಸಲಾತಿ ಮತ್ತು ಭೂಸುಧಾರಣೆ ಮಾಡಿದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ವಹಿಸಿದ್ದರು. ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಡಾ.ಎಸ್.ಎಸ್.ಮೀನಾಕ್ಷಿ ಸುಂದರಂ ವಿಷಯ ಮಂಡಿಸಿದರು.

ಕಾರ್ಯಕ್ರಮದಲ್ಲಿ ಯೋಜನಾ ಆಯೋಗದ ಹಿರಿಯ ನಿರ್ದೇಶಕ ಬಸವರಾಜು, ಶ್ರೀಮತಿ ಮಮತ ನಿಚ್ಚಾನಿ ರಾಮಕೃಷ್ಣ ಹೆಗಡೆ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

 

Hot this week

ಬೆಂಗಳೂರು: ಚಿತ್ರರಂಗಾಸಕ್ತ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ...

ಕಂಟೋನ್ಮೆಂಟ್ ಪಶು ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಚಿವರಾದ ಪುಟ್ಟರಂಗಶೆಟ್ಟಿ ಭೇಟಿ, ಪರಿಶೀಲನೆ

ಬೆಂಗಳೂರು: ಬೆಂಗಳೂರಿನ(Bangalore) ಕಂಟೋನ್ಮೆಂಟ್‌ನಲ್ಲಿರುವ ಪಶು ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ  ಪಶುಸಂಗೋಪನೆ...

ಬೆಂಗಳೂರು: ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯು(Finance Department, Government of Karnataka)...

ಮೆಟ್ರೋ ಯೋಜನೆಗಳ ವೆಚ್ಚದಲ್ಲಿ ಕೇಂದ್ರ-ರಾಜ್ಯಗಳ ನಡುವೆ ಸಮಾನ ಹೊಣೆಗಾರಿಕೆ ಅಗತ್ಯ: ಪ್ರಧಾನಿ ಮೋದಿಗೆ ಸಿಎಂ ಡಿ.ಕೆ. ಶಿವಕುಮಾರ್ ಮನವಿ

ಬೆಂಗಳೂರು: ಮೆಟ್ರೋ ರೈಲು ಯೋಜನೆಗಳ ಅನುಷ್ಠಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ...

Topics

ಬೆಂಗಳೂರು: ಚಿತ್ರರಂಗಾಸಕ್ತ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ...

ಕಂಟೋನ್ಮೆಂಟ್ ಪಶು ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಚಿವರಾದ ಪುಟ್ಟರಂಗಶೆಟ್ಟಿ ಭೇಟಿ, ಪರಿಶೀಲನೆ

ಬೆಂಗಳೂರು: ಬೆಂಗಳೂರಿನ(Bangalore) ಕಂಟೋನ್ಮೆಂಟ್‌ನಲ್ಲಿರುವ ಪಶು ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ  ಪಶುಸಂಗೋಪನೆ...

ಬೆಂಗಳೂರು: ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯು(Finance Department, Government of Karnataka)...

ಬೆಂಗಳೂರಿಗೆ ಆಗಮಿಸಿದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ

ಬೆಂಗಳೂರು: ಬೆಂಗಳೂರು(Bangalore) ಮತ್ತು ಮೈಸೂರಿನ(Mysore) ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಗಿ ಭಾರತದ ಗೌರವಾನ್ವಿತ...

ಗಮನ ಸೆಳೆದ ‘ಮೋದಿ ಕಹಿ ನಹೀ ಜಾಯೇಗಾ’ ಫಲಕಗಳು

ಬೆಂಗಳೂರು: ರಾಜ್ಯಕ್ಕೆ ಇಂದು ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರನ್ನು...

ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ, ಸಿಎಂ ಡಿ.ಕೆ. ಶಿ. ಜೊತೆ ಮೆಟ್ರೋ ಪ್ರಯಾಣ

ಬೆಂಗಳೂರು: ಸಿಲಿಕಾನ್ ಸಿಟಿ (Silicon City Benglauru)_ ಬೆಂಗಳೂರಿನ ಸಾರ್ವಜನಿಕ ಸಾರಿಗೆ...

Related Articles