ಗಮನ ಸೆಳೆದ ‘ಮೋದಿ ಕಹಿ ನಹೀ ಜಾಯೇಗಾ’ ಫಲಕಗಳು

ಬೆಂಗಳೂರು: ರಾಜ್ಯಕ್ಕೆ ಇಂದು ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರನ್ನು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅತ್ಯಂತ ಗೌರವಪೂರ್ವಕವಾಗಿ ಸ್ವಾಗತಿಸಿದರು. ಗೌರವಾನ್ವಿತ ರಾಜ್ಯಪಾಲರಾದ ಶ್ರೀಮತಿ ಡಾ.ಸುಧಾ ಯಾದವ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಸೋಮಣ್ಣ, ಕು.ಶೋಭಾ ಕರಂದ್ಲಾಜೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪ್ರಮುಖರು ಉಪಸ್ಥಿತರಿದ್ದರು.

ಬೆಂಗಳೂರು: ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ (PM Modi) ಯವರ ಇಂದಿನ (Bengaluru) ಬೆಂಗಳೂರು ಭೇಟಿಯ ಸಂದರ್ಭದಲ್ಲಿ ಎಲ್ಲೆಡೆ ರಸ್ತೆಯುದ್ದಕ್ಕೂ ಅವರಿಗೆ ಮೋದಿ, ಮೋದಿ (Modi, Modi) ಎಂದು ಘೋಷಣೆ ಕೂಗುವ ಮೂಲಕ ಅಭಿಮಾನಿಗಳು ಮತ್ತು ಕಾರ್ಯಕರ್ತರು ಆತ್ಮೀಯ ಸ್ವಾಗತ ಕೋರಿದರು.
ರಸ್ತೆಯ ಎರಡೂ ಭಾಗದಲ್ಲಿ ‘ಮೋದಿ ಕಹಿ ನಹೀ ಜಾಯೇಗಾ’ ‘ಕರ್ನಾಟಕ ವೆಲ್‍ಕಮ್ಸ್ ಪಿಎಂ ಮೋದಿ’ ಫಲಕಗಳನ್ನು ಹಿಡಿದು ನಿಂತಿದ್ದ ಜನರು ಅತ್ಯಂತ ಸಂಭ್ರಮದಿಂದ ಸ್ವಾಗತಿಸಿದರು. ಅಭಿಮಾನಿಗಳು ಪುಷ್ಪವೃಷ್ಟಿ ಮಾಡಿ ಮೋದಿ ಮೋದಿ ಕೂಗುವ ಮೂಲಕ ಸ್ವಾಗತಿಸಿದ್ದು ಕಾಣಿಸಿತು.


ಇನ್ನೂ ಕೆಲವೆಡೆ ‘ಮೋದಿ ಹೈ ತೋ ಮುಮ್ಕಿನ್ ಹೈ’ ‘ಮೋದಿ ಇದ್ದರೆ ಎಲ್ಲವೂ ಸಾಧ್ಯ’ ಎಂಬ ಫಲಕಗಳ ಜೊತೆ ಜನರು ಅಭಿಮಾನಪೂರ್ವಕವಾಗಿ ಭಾಗವಹಿಸಿದ್ದರು. ರಸ್ತೆಯ ಎರಡೂ ಬದಿಗಳಲ್ಲಿ ಕಾದು ನಿಂತಿದ್ದ ಸಾವಿರಾರು ಜನರು ಅತ್ಯಂತ ಪ್ರೀತಿಯಿಂದ ಪ್ರಧಾನಿಯವರಿಗೆ ಜೈಕಾರ ಕೂಗಿದರು.


ಬೆಳಿಗ್ಗೆ ಪ್ರಶಾಂತಿ ಕುಟೀರದಲ್ಲಿ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿದ್ದ ಮೋದಿಜೀ ಅವರು, ಕರ್ನಾಟಕವು ಯೋಗಕ್ಕೆ ಸಂಬಂಧಿಸಿದ ಅನೇಕ ಗುರುಗಳು ಮತ್ತು ಶ್ರೇಷ್ಠ ವಿದ್ವಾಂಸರು ಜನಿಸಿದ ನೆಲವಾಗಿದೆ ಎಂದು ಬಣ್ಣಿಸಿದರು. ಮೇರುನಟ ಡಾ. ರಾಜ್‍ಕುಮಾರ್ ಅವರು ಯೋಗಾಭ್ಯಾಸ ಮಾಡುತ್ತಿದ್ದುದನ್ನು ಸ್ಮರಿಸಿದರು. ಭಾರತದ ಪ್ರಯತ್ನದ ಫಲವಾಗಿ ಇಂದು ಯೋಗವು ವಿಶ್ವದಾದ್ಯಂತ ಜನಪ್ರಿಯವಾಗಿದೆ ಎಂದು ತಿಳಿಸಿದರು.
ಇದೇವೇಳೆ ಪ್ರಧಾನಿಯವರು ಎಚ್.ವಿ.ಶೇಷಾದ್ರಿ ಅವರ ಜನ್ಮ ಶತಮಾನೋತ್ಸವ ಸಂಭ್ರಮದಲ್ಲಿ ಗೌರವ ನಮನಗಳನ್ನು ಸಲ್ಲಿಸಿದರು. ಆರೆಸ್ಸೆಸ್‍ನಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಮಾನ್ಯ ಶೇಷಾದ್ರಿಯವರು ಅನುಸರಿಸಿದ ಧ್ಯೇಯೋದ್ದೇಶಗಳು ಇಂದಿಗೂ ಕೋಟ್ಯಂತರ ಸ್ವಯಂಸೇವಕರಿಗೆ ಪ್ರೇರಣೆ ಕೊಡುತ್ತಿವೆ ಎಂದು ತಿಳಿಸಿದರು.
ಪ್ರಶಾಂತಿ ಕುಟೀರದ ಸಮಾರಂಭದಲ್ಲಿ ಪ್ರಧಾನಿಯವರನ್ನು ಮೈಸೂರು ಪೇಟ ತೊಡಿಸಿ, ರೇಷ್ಮೆ ಶಾಲು ಹೊದಿಸಿ ಗೌರವಿಸಲಾಯಿತು. ವಿವೇಕಾನಂದರ ಪ್ರತಿಮೆಯನ್ನು ಸ್ಮರಣಿಕೆಯಾಗಿ ಕೊಡಲಾಯಿತು.
ಬಳಿಕ ನಮ್ಮ ಮೆಟ್ರೊದ ಗುಲಾಬಿ ಮಾರ್ಗವನ್ನು ಮೋದಿಜೀ ಅವರು ಉದ್ಘಾಟಿಸಿದರು. ನಂತರ ರಾಜ್ಯಪಾಲರಾದ ಸುಧಾ ಯಾದವ್, ಮುಖ್ಯಮಂತ್ರಿ ಶಿವಕುಮಾರ್, ಸಚಿವ ಕೃಷ್ಣಬೈರೇಗೌಡ, ಸಂಸದ ತೇಜಸ್ವಿ ಸೂರ್ಯ ಅವರೊಂದಿಗೆ ಮೆಟ್ರೊದಲ್ಲಿ ಪ್ರಯಾಣ ಮಾಡಿದರು.

Hot this week

ಕಂಟೋನ್ಮೆಂಟ್ ಪಶು ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಚಿವರಾದ ಪುಟ್ಟರಂಗಶೆಟ್ಟಿ ಭೇಟಿ, ಪರಿಶೀಲನೆ

ಬೆಂಗಳೂರು: ಬೆಂಗಳೂರಿನ(Bangalore) ಕಂಟೋನ್ಮೆಂಟ್‌ನಲ್ಲಿರುವ ಪಶು ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ  ಪಶುಸಂಗೋಪನೆ...

ಬೆಂಗಳೂರು: ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯು(Finance Department, Government of Karnataka)...

ಮೆಟ್ರೋ ಯೋಜನೆಗಳ ವೆಚ್ಚದಲ್ಲಿ ಕೇಂದ್ರ-ರಾಜ್ಯಗಳ ನಡುವೆ ಸಮಾನ ಹೊಣೆಗಾರಿಕೆ ಅಗತ್ಯ: ಪ್ರಧಾನಿ ಮೋದಿಗೆ ಸಿಎಂ ಡಿ.ಕೆ. ಶಿವಕುಮಾರ್ ಮನವಿ

ಬೆಂಗಳೂರು: ಮೆಟ್ರೋ ರೈಲು ಯೋಜನೆಗಳ ಅನುಷ್ಠಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ...

ಬೆಂಗಳೂರಿಗೆ ಆಗಮಿಸಿದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ

ಬೆಂಗಳೂರು: ಬೆಂಗಳೂರು(Bangalore) ಮತ್ತು ಮೈಸೂರಿನ(Mysore) ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಗಿ ಭಾರತದ ಗೌರವಾನ್ವಿತ...

Topics

ಕಂಟೋನ್ಮೆಂಟ್ ಪಶು ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಚಿವರಾದ ಪುಟ್ಟರಂಗಶೆಟ್ಟಿ ಭೇಟಿ, ಪರಿಶೀಲನೆ

ಬೆಂಗಳೂರು: ಬೆಂಗಳೂರಿನ(Bangalore) ಕಂಟೋನ್ಮೆಂಟ್‌ನಲ್ಲಿರುವ ಪಶು ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ  ಪಶುಸಂಗೋಪನೆ...

ಬೆಂಗಳೂರು: ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯು(Finance Department, Government of Karnataka)...

ಬೆಂಗಳೂರಿಗೆ ಆಗಮಿಸಿದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ

ಬೆಂಗಳೂರು: ಬೆಂಗಳೂರು(Bangalore) ಮತ್ತು ಮೈಸೂರಿನ(Mysore) ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಗಿ ಭಾರತದ ಗೌರವಾನ್ವಿತ...

ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ, ಸಿಎಂ ಡಿ.ಕೆ. ಶಿ. ಜೊತೆ ಮೆಟ್ರೋ ಪ್ರಯಾಣ

ಬೆಂಗಳೂರು: ಸಿಲಿಕಾನ್ ಸಿಟಿ (Silicon City Benglauru)_ ಬೆಂಗಳೂರಿನ ಸಾರ್ವಜನಿಕ ಸಾರಿಗೆ...

ಗುರು ವಿದುಷಿ ಶಿಲ್ಪಾ ಅರುಣ್‌ಕುಮಾರ್ ಅವರ ಕಲಾತ್ಮಕ ದೃಷ್ಟಿಕೋನದಲ್ಲಿ ಅರಳಿದ ಭರತನಾಟ್ಯ

ಶಾಸ್ತ್ರೀಯ ಪರಂಪರೆ, ನವೀನ ನೃತ್ಯ ಸಂಯೋಜನೆ ಮತ್ತು ಭಾವಪೂರ್ಣ ಕಥನದ ಸುಂದರ...

Related Articles