ಬೆಂಗಳೂರು: ಸರ್ಕಾರವು ಮಹಿಳೆಯರ ಭದ್ರತೆ ಹಾಗೂ ಸುರಕ್ಷತೆಗಾಗಿ(Women’s Safety and Security) ಬಲವಾದ ಕಾನೂನು ಚೌಕಟ್ಟನ್ನು ರೂಪಿಸಿದ್ದು, ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬ ಮಹಿಳೆಯ ರಕ್ಷಣೆಯ ಜವಾಬ್ದಾರಿ ನಮ್ಮ ಮೇಲಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರಾದ ಸೀಮಂತ್‍ಕುಮಾರ್ ಸಿಂಗ್(Seemanth Kumar Singh) ಅವರು ತಿಳಿಸಿದರು.
ಹಿರಿಯ ಪೊಲೀಸ್ ಅಧಿಕಾರಿಗಳ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಸ್ಲೋರ್ಟಿ)ಯಲ್ಲಿ ಆಯೋಜಿಸಿದ್ದ 3ನೇ ರಷ್ಟ್ರೀಯ ಮಹಿಳಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಈಗ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಪುರಷರಿಗೆ ಸಮನಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳೆಯರಿಗೆ ಸೂಕ್ಷ್ಮ ಸಮಾಜ ಪರಿಸರದ ವ್ಯವಸ್ಥೆಯನ್ನು ರೂಪಿಸುವುದು ನಮ್ಮ ಜವಬ್ಧಾರಿಯಾಗಿದೆ ಎಂದರು.
ಮಹಿಳೆಯರು ಒಂಟಿಯಾಗಿ ಓಡಾಡುವುದು ಅಥವಾ ಸಾರ್ವಜನಿಕ ಸಾರಿಗೆಯಲ್ಲಿ ಸ್ವತಂತ್ರವಾಗಿ ಪ್ರಯಾಣಿಸಲು ಭಯ ಪಡುವ ಅಗತ್ಯವಿಲ್ಲ, ಅವರಿಗಾಗಿ ಸೇಫ್ ಕನೆಕ್ಟ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಲಾಗಿದ್ದು, ಸಮಸ್ಯೆಯಾದಲ್ಲಿ ಅವರು ಎಸ್ ಓ ಎಸ್. ಬಟನ್ ಒತ್ತಿದರೆ ಸಾಕು ಆಡಿಯೋ ಮತ್ತು ವಿಷುವಲ್‍ಗೆ ಸಂಪರ್ಕಕ್ಕೆ ಬರುತ್ತಾರೆ. ಓಲಾ ಉಬರ್ ರಾಪಿಡೋ ಹಾಗೂ ನಮ್ಮ ಯಾತ್ರಿ ಇವುಗಳೊಂದಿಗೆ ಸಂಯೋಜಿಸಲಾಗಿದೆ. ನಮ್ಮಲ್ಲಿ 10 ಭಾಷೆಗಳಿದ್ದು, ಭಾರತೀಯ ಭಾಷೆಗಳನ್ನು ವಿದೇಶಿ ಭಾಷೆಗೆ ಪರಿವರ್ತಿಸಬಹುದಾಗಿದೆ. ಬೆಂಗಳೂರು ನಗರ ಪೊಲೀಸ್ ಮಹಿಳಾ ಸುರಕ್ಷತೆಗೆ ಕಟ್ಟಿಬದ್ಧರಾಗಿದ್ದೇವೆ ಎಂದರು.
ನಿವೃತ್ತ ಡಿಜಿಪಿ ಶ್ರೀ ರಾಘವೇಂದ್ರ ಔರಾದ್‍ಕರ್ ಅವರು ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪೊಲೀಸ್ ಕಾನ್ಸಟೇಬಲ್ ಅವರು ಬಹು ಮುಖ್ಯವಾಗಿದ್ದು, ಅವರ ಸುರಕ್ಷತೆ ಬಗ್ಗೆಯೂ ಹೆಚ್ಚಿನ ಗಮನ ಹರಿಸಬೇಕಿದೆ. ಮಹಿಳಾ ಸಿಬ್ಬಂದಿ ಕಾರ್ಯನಿರತ ಸ್ಥಳದಲ್ಲಿ ಅವರಿಗೆ ಶೌಚಾಲಯಗಳು ಹಾಗೂ ಹಾಸ್ಟೆಲ್‍ಗಳ ವ್ಯವಸ್ತೆಯಾಗಬೇಕು ಎಂದು ಹೇಳಿದರು.
ಮಹಿಳಾ ಪೊಲೀಸರ ದೂರುಗಳನ್ನು ಸ್ವೀಕರಿಸುವುದು ಹಾಗೂ ಪರಿಹರಿಸುವುದು. ಮಹಿಳಾ ಪೊಲೀಸರು ರಾತ್ರಿ ಕೆಲಸದ ಸ್ಥಳದದಿಂದ ಮನೆಗೆ ತಲುಪುವುದುಕ್ಕೆ ಸೂಕ್ತ ವ್ಯವಸ್ಥೆ ಒದಗಿಸುವುದು. ಜನಸಂದಣಿಯ ನಿರ್ವಹಣೆಯ ಸಮಯದಲ್ಲಿ ಮಹಿಳಾ ಪೊಲೀಸ್ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು. ಮಹಿಳಾ ಸಿಬ್ಬಂದಿಗಳಿಗೆ ಒಂದೇ ಕಡೆ ಮಾನಸಿಕ ದೈರ್ಯ ತುಂಬುವ ಸೇವೆಗಳು, ಸಂತ್ರಸ್ಥರಿಗೆ ಕಾನೂನು ಸೇವೆ ಮತ್ತು ವೈದ್ಯಕೀಯ ಸೇವೆಗಳು ಸಕಾಲದಲ್ಲಿ ದೊರೆಯುವಂತೆ ಮಾಡಬೇಕೆಂದರು.
ನಿವೃತ್ತ ಪೊಲೀಸ್ ಅಧಿಕಾರಿ ಡಾ: ಜಿಜಾ ಹರಿಸಿಂಗ್ ಅವರು ಎಲ್ಲರನ್ನೂ ಸ್ವಾಗತಿಸಿ ಮಾತನಾಡುತ್ತಾ, ಪ್ರತಿಯೊಬ್ಬ ಮಹಿಳೆಯ ಸುರಕ್ಷತೆ ಹಾಗೂ ಸ್ವಾತಂತ್ರ್ಯದಿಂದ ಬಾಳುವಂತಹ ಅವಕಾಶ ನೀಡುವ ಬದ್ಧತೆ ನಮ್ಮದಾಗಿದೆ. ಸ್ವತಂತ್ರವಾಗಿ ಒಬ್ಬ ಮಹಿಳೆ ಮಧ್ಯರಾತ್ರಿ ಒಂಟಿಯಾಗಿ ಹೊರಬಂದು ಸುರಕ್ಷಿತವಾಗಿ ಮರಳಿ ತನ್ನ ಸ್ಥಳಕ್ಕೆ ತಲುಪಬೇಕು ಎನ್ನುವುದು ಗಾಂಧೀಜಿ ಕಂಡಂತಹ ಕನಸಾಗಿತ್ತು. ಈ ಕನಸು ನನಸು ಮಾಡಲು ಸಮಾಜದ ಪ್ರತಿಯೊಬ್ಬ ನಾಗರೀಕನೂ ಶ್ರಮಿಸಬೇಕೆಂದರು.
ಈ ಸಂದರ್ಭದಲ್ಲಿ ಮಹಿಳೆಯರ ಸುರಕ್ಷತೆ ಹಾಗೂ ಭದ್ರತೆ ಕುರಿತsÀ ವಿಷಯಗಳ ಕುರಿತು ಸಂವಾದವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿ ವಿವೇಕ್ ಮಾನಸಿಂಗ್ ಹಾಗೂ ಪೊಲೀಸ್ ಮಹಿಳಾ ಅಧಿಕಾರಿಗಳು ಉಪಸ್ಥಿರಿದ್ದರು.
ತಮಿಳುನಾಡಿಗೆ ಕಾವೇರಿ ನೀರು; ನ್ಯಾಯಾಲಯದಲ್ಲಿ ಮೇಲ್ಮನವಿ: ಸಿಎಂ ಡಿ ಕೆ ಶಿವಕುಮಾರ್

