ಕರ್ನಾಟಕದ ಗಾಂಧಿ ಸ್ಮಾರಕ ನಿಧಿ ಸಂಸ್ಥೆಯು ಕೊಡಮಾಡುವ 2026ರ ಸಾಲಿನ ಶ್ರೀಮತಿ ಜಯಲಕ್ಷ್ಮಿ ಡಾ.ಹೊ.ಶ್ರೀನಿವಾಸಯ್ಯ ಸ್ಮಾರಕ ದತ್ತಿ ನಿಧಿ ಪ್ರಶಸ್ತಿಗೆ ಮಂಜುನಾಥ್ ಚಾಂದ್(Manjunath Chand) ಅವರು ಬರೆದಿರುವ ʼಮಹಾತ್ಮನ ಮಗಳುʼ ಮತ್ತು ರಮೇಶ್ ಬಿಳಿಕೆರೆ ಅವರು ಬರೆದಿರುವ ಮರೆಯಲಾಗದ ಮಾಣಿಕ್ಯ ಟಿ.ಎಸ್.ಸುಬ್ಬಣ್ಣ (Mareyalagada Manikya T.S.Subramanya) ಕೃತಿಗಳು ಆಯ್ಕೆಯಾಗಿವೆ.
ಜೊತೆಗೆ ಈ ಸಾಲಿನ ಉತ್ತಮ ಎನ್ಎಸ್ಎಸ್ ಪ್ರಶಸ್ತಿಯನ್ನು ಪ್ರೊ.ಜಿ.ಬಿ.ಶಿವರಾಜು ಅವರಿಗೆ ನೀಡಿ ಗೌರವಿಸಲಾಗುತ್ತಿದೆ. ರಾಜ್ಯಮಟ್ಟದ ಉತ್ತಮ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಪುರಸ್ಕಾರಕ್ಕೆ ಮೈಸೂರಿನ ಎನ್ಎಸ್ಎಸ್ ಅಧಿಕಾರಿ ಡಾ.ರಾಘವೇಂದ್ರ ಆರ್ ಮತ್ತು ಬೆಳಗಾವಿಯ ಎನ್ಎಸ್ಎಸ್ ಅಧಿಕಾರಿ ಡಾ.ಸುರೇಖಾ ಅಶೋಕ ಬೆಳಗಲಿ ಅವರನ್ನು ಆಯ್ಕೆ ಮಾಡಲಾಗಿದೆ.
ರಾಜ್ಯಮಟ್ಟದ ಉತ್ತಮ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕ ಪುರಸ್ಕಾರಕ್ಕೆ ತುಮಕೂರಿನ ಜಿ.ಎ.ಸಿದ್ದೇಶ್, ಮಸ್ಕಿಯ ನಾಗರಾಜ್, ಬೆಳ್ಳೂರಿನ ಕುಮಾರಿ ಚೈತ್ರಾ ಸಿ, ರಾಯಚೂರಿನ ಕು.ಜೆ.ಎಸ್. ಸುಷ್ಮಾ ಅವರು ಆಯ್ಕೆಯಾಗಿರುತ್ತಾರೆ.
ಗಾಂಧಿ ಜಯಂತಿ ಮತ್ತು ವಿಶ್ವ ಅಹಿಂಸಾ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಅರವಿಂದ ಚೊಕ್ಕಾಡಿ ಅವರು ರಚಿಸಿರುವ ʼಆಸುಪಾಸಿನಲ್ಲಿ ಗಾಂಧಿʼ, ಕೆ.ಎಸ್.ನರಸಿಂಹ ಸ್ವಾಮಿ ಅವರು ಅನುವಾದಿಸಿದ ʼನನ್ನ ಕನಸಿನ ಭಾರತʼ ಮತ್ತು ʼಮೋಹನ ಮಾಲೆʼ, ಮತ್ತು ಡಾ.ಮಹಾಬಲೇಶ್ವರ ರಾವ್ ಅವರು ಅನುವಾದಿಸಿರುವ ಬಿಬಿಸಿ ಬಾನುಲಿ ಪ್ರಸಾರದ ಕನ್ನಡ ಅನುವಾದಿತ ಕೃತಿ ʼಗಾಂಧೀ ಸಂಕಥನ ಬಹುಮುಖ ನೋಟʼ ಕೃತಿಗಳನ್ನು ಕೂಡ ಮಾನ್ಯ ಮುಖ್ಯಮಂತ್ರಿಗಳು ಬಿಡುಗಡೆ ಮಾಡಲಿದ್ದಾರೆ.
ನಾಗರೀಕ ಸಮಾಜವನ್ನು ಬೆಚ್ಚಿ ಬೀಳಿಸಿದ ನಕಲಿ ಔಷಧ ಹಾಗು ಲೂಟಿಕೋರ ಮಾಫಿಯಾ ದಂಧೆ

