ದಾಳಿಂಬೆಯ ವೈಜ್ಞಾನಿಕ ಬೇಸಾಯ ಹಾಗೂ ಮಾರುಕಟ್ಟೆ ಅವಕಾಶ : ಜಿಕೆವಿಕೆಯಲ್ಲಿ ಸೆಪ್ಟೆಂಬರ್ 19 ರಂದು ತರಬೇತಿ ಕಾರ್ಯಕ್ರಮ

ಬೆಂಗಳೂರು: ಭಾರತದಲ್ಲಿ(Bharath) ವಾಣಿಜ್ಯವಾಗಿ ಬೆಳೆಯುವ ಪ್ರಮುಖ ಹಣ್ಣಿನ ಬೆಳೆಗಳಲ್ಲಿ ದಾಳಿಂಬೆ(Pomegranate) ಒಂದಾಗಿದೆ. ಇದು ತಂಪಾದ, ಪುನಶ್ವೇತನಗೊಳಿಸುವ ಹಣ್ಣಿನ ರಸಕ್ಕಾಗಿ(Fruit Juice) ಜನ ಇಷ್ಟಪಡುತ್ತಾರೆ. ಅದನ್ನು ಹೆಚ್ಚಾಗಿ ಕೈ ತೋಟದಲ್ಲಿ ಬೆಳೆಯಲಾಗುತ್ತಿದ್ದರೂ ಚೆನ್ನಾಗಿ ಬೆಳೆಸಿದಲ್ಲಿ ಅತ್ಯುತ್ತಮ ಆದಾಯ ಕೊಡಬಲ್ಲದು. ಬಾಗಲಕೋಟೆ, ಬಿಜಾಪುರ, ರಾಯಚೂರು, ಕಲ್ಬುರ್ಗಿ, ಕೊಪ್ಪಳ, ಚಿತ್ರದುರ್ಗ, ಬಳ್ಳಾರಿ ಮುಂತಾದ ಪ್ರದೇಶಗಳು ದಾಳಿಂಬೆ ಬೆಳೆಯಲು ಅತೀ ಸೂಕ್ತವಾಗಿದೆ, ಹೆಚ್ಚು ಮಳೆ ಬೀಳುವ ಪ್ರದೇಶಗಳು ಈ ಬೆಳೆಗೆ ಯೋಗ್ಯವಲ್ಲ. ಪೌಷ್ಟಿಕಾಂಶ, ರುಚಿ, ಸಂಸ್ಕರಣಾ ಸಾಧ್ಯತೆ ಹಾಗೂ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯ ಬೇಡಿಕೆಯಿಂದಾಗಿ ದಾಳಿಂಬೆ ಬೆಳೆ ರೈತರಿಗೆ ಉತ್ತಮ ಆದಾಯದ ಅವಕಾಶವನ್ನು ಒದಗಿಸುತ್ತದೆ. ಭಾರತವು ವಿಶ್ವದ ಪ್ರಮುಖ ದಾಳಿಂಬೆ ಉತ್ಪಾದಕ ರಾಷ್ಟ್ರವಾಗಿದ್ದು, ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಪ್ರಮುಖ ಉತ್ಪಾದಕ ರಾಜ್ಯಗಳಾಗಿವೆ.
ಈ ಹಿನ್ನೆಲೆಯಲ್ಲಿ ದಾಳಿಂಬೆ ಬೆಳೆಗಾರರಿಗೆ ವೈಜ್ಞಾನಿಕ ಉತ್ಪಾದನಾ ತಾಂತ್ರಿಕತೆಗಳು, ಮಾರುಕಟ್ಟೆ ಮಾಹಿತಿ, ರಫ್ತು ಸಾಧ್ಯತೆಗಳು, ಮತ್ತು ಪ್ರಗತಿಪರ ರೈತರ ತೋಟಗಳಿಗೆ ಶೈಕ್ಷಣಿಕ ಪ್ರವಾಸ (exposure visit) ಒದಗಿಸುವ ಉದ್ದೇಶದಿಂದ ಒಣಭೂಮಿ ಕೃಷಿಗಾಗಿ ಅಖಿಲ ಭಾರತ ಸಂಘಟಿತ ಸಂಶೋಧನಾ ಯೋಜನೆ (ಒಣ ಭೂಮಿ ಕೃಷಿ) (AICRP), ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು ವತಿಯಿಂದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ತರಬೇತಿಗೆ ಬಹು ಬೇಡಿಕೆ ಇರುವುದರಿಂದ ಶುಲ್ಕ ಸಹಿತ ತರಬೇತಿಯನ್ನು ಆಸಕ್ತವುಳ್ಳ 30 ಜನರಿಗೆ 2026ನೇ ಸೆಪ್ಟೆಂಬರ್ 19  ರಂದು ಆಯೋಜಿಸಲಾಗುತ್ತಿದ್ದು ನೋಂದಣಿ ಶುಲ್ಕ ರೂ.2,000/- ಆಗಿರುತ್ತದೆ. ನೋಂದಾಯಿಸಲು 2026 ನೇ ಸೆಪ್ಟೆಂಬರ್ 16 ಕೊನೆಯ ದಿನವಾಗಿರುತ್ತದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಡಾ. ಜಾಧವ್ ಬಾಲಾಜಿ, ಹಿರಿಯ ತಾಂತ್ರಿಕ ಅಧಿಕಾರಿ ಮೊಬೈಲ್ ಸಂಖ್ಯೆ.9448540640  ಅಥವಾ ಶ್ರೀ ಮದನ್ ಕುಮಾರ್ ಮೊಬೈಲ್ ಸಂಖ್ಯೆ 8217800423 ಅಥವಾ ಒಣಭೂಮಿ ಕೃಷಿಗಾಗಿ ಅಖಿಲ ಭಾರತ ಸಂಘಟಿತ ಸಂಶೋಧನಾ ಯೋಜನೆ (ಒಣ ಭೂಮಿ ಕೃಷಿ) (AICRP), ಕೃಷಿ ವಿಶ್ವವಿದ್ಯಾನಿಲಯ (UAS), ಜಿಕೆವಿಕೆ, ಬೆಂಗಳೂರು-560065 ಇಲ್ಲಿ ‌ಸಂಪರ್ಕಿಸಬಹುದು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಿರಿಯ ವಾರ್ತಾತಜ್ಞರು ಮತ್ತು ಮುಖ್ಯಸ್ಥರಾದ ಕೆ.ಪಿ. ರಘುಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Hot this week

BIG NEWS :MUMBAI TOLL : ಮುಂಬೈ ಟೋಲ್ ದರಗಳಲ್ಲಿ ಶೇ.20ರಷ್ಟು ಏರಿಕೆ

ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1,...

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

Topics

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

ರಾಮರಸದಲ್ಲಿ ಆದಾಶರ್ಮಾ ದುರ್ಗಿ ರೋಲ್

ಗುರುದೇಶಪಾಂಡೆ ಒಡೆತನದ ’ಜಿ ಅಕಾಡೆಮಿ’ಯಲ್ಲಿ(Zee Academy) ನಟನೆ ಕಲಿತಿರುವ ಪ್ರತಿಭೆಗಳಿಗೆ ಅವಕಾಶ...

Related Articles