ಬೆಂಗಳೂರು: ದೇಶದಲ್ಲಿ ಬಿಜೆಪಿ(BJP) ಅಧಿಕಾರಕ್ಕೆ ಬಂದ ಮೇಲೆ ಜಾತಿ, ಕೋಮುವಾದ ಹೆಚ್ಚಾಗಿದ್ದು, ಸಂವಿಧಾನವನ್ನು(The Constitution) ಬುಡಮೇಲು ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್(B.K.Hariprasad) ಹೇಳಿದ್ದಾರೆ.
ಕೆಪಿಸಿಸಿ ಕಛೇರಿಯಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಹಿರಿಯ ಮುಖಂಡರಾದ ಸುರೇಶ್ ಗೌಡ, ಸಮಾಜ ಸೇವಕರಾದ ಎನ್.ಶ್ರೀನಿವಾಸ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಪ್ರತಿಯೊಬ್ಬರು ಕಾಂಗ್ರೆಸ್ ಪಕ್ಷದ ಇತಿಹಾಸ ಅರಿತುಕೊಳ್ಳಬೇಕು. ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದು, ಸಾಮಾನತೆ, ಸರ್ವರಿಗೂ ಸಮಬಾಳು, ಸರ್ವರಿಗೂ ಪಾಲು ಎಂಬ ಸಿದ್ದಾಂತ ನೀಡಿದೆ. ಹೀಗಾಗಿ ಎಲ್ಲರು ಕಾಂಗ್ರೆಸ್ ಪಕ್ಷವನ್ನು ರಚನಾತ್ಮಕವಾಗಿ ಕಟ್ಟಬೇಕು ಎಂದು ಹೇಳಿದರು.
ನೂರಾರು ಕಾರ್ಯಕರ್ತರು ಮತ್ತೆ ಮಾತೃ ಪಕ್ಷಕ್ಕೆ ಬರುತ್ತಿರುವುದು ಸಂತೋಷದ ಸಂಗತಿ. ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರವನ್ನು ಯಾರು ಅಭಿವೃದ್ಧಿ ಮಾಡಿದ್ದಾರೆ ಎಂಬ ಚಿಂತನೆ ಮಾಡಬೇಕು. ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಆಡಳಿತದ ಅವಧಿಯಲ್ಲಿ ಸ್ಯಾಂಕಿ ಕೆರೆ ಅಭವೃದ್ಧಿಪಡಿಸಲಾಯಿತು. ಬಿಜೆಪಿ ಪಕ್ಷದವರು ಏನು ಸಾಧನೆ ಮಾಡಿಲ್ಲ. ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ವೈಟ್ ಕಾಲರ್ ಇರುವ ಜನರು ಕಾಂಗ್ರೆಸ್ ಗೆ ಬರುವುದಿಲ್ಲ ಎಂದು ತಿಳಿದಿಕೊಂಡಿದ್ದೇ. ಅದರೆ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರಿರುವುದು ನೋಡಿದರೆ ಜನ ಮಲ್ಲೇಶ್ವರಂನಲ್ಲಿ ಬದಲಾವಣೆ ಬಯಸಿರುವುದು ಸ್ಪಷ್ಟವಾಗಿದೆ ಎಂದರು.
ಮಲ್ಲೇಶ್ವರಂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅನೂಪ್ ಅಯ್ಯಂಗಾರ್ ಮಾತನಾಡಿ, ಕಾಂಗ್ರೆಸ್ ಬಡವರ ಪರ, ಎಲ್ಲ ಧರ್ಮ, ಜಾತಿ, ಜನಾಂಗವನ್ನು ಸರಿಸಮಾನವಾಗಿ ಕಾಣುವ ಪಕ್ಷ. ಗ್ಯಾರಂಟಿ ಯೋಜನೆ ಮತ್ತು ಅಭಿವೃದ್ಧಿ ಯೋಜನೆಗಳಿಂದ ಜನರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ಪ್ರಜ್ಞಾವಂತ ಮತ್ತು ಬುದ್ದಿವಂತರ ತಾಣ. ಸಹಸ್ರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿರುವುದನ್ನು ನೋಡಿದರೆ ಜನ ಬದಲಾವಣೆ ಬಯಸಿದ್ದಾರೆ. ಮುಂಬರುವ ಪಾಲಿಕೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಹೇಳಿದರು.
ಮಾಜಿ ಸಂಸದ ರಾಜೀವ್ ಗೌಡ, ಕಾಂಗ್ರೆಸ್ ಮುಖಂಡರಾದ ಬಿ.ಕೆ.ಶಿವರಾಂ, ಮಾಜಿ ಸಚಿವ ನೆ.ಲ.ನರೇಂದ್ರಬಾಬು, ಮಲ್ಲೇಶ್ವರಂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅನೂಪ್ ಅಯ್ಯಂಗಾರ್ ಮಾಜಿ ಮಹಾಪೌರರುಗಳಾದ ಜೆ.ಹುಚ್ಚಪ್ಪ, ರಾಮಚಂದ್ರಪ್ಪ, ಎಂ.ಇ.ಐ.ಅಧ್ಯಕ್ಷ ಎಸ್.ಮನೋಹರ್, ಕಾಂಗ್ರೆಸ್ ಪಕ್ಷದ ಮುಖಂಡ ಗಿರೀಶ್ ಲಕ್ಕಣ್ಣ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತ್ರಿಭುವನ್, ಲಯನ್ ಆರ್.ವೆಂಕಟೇಶ್, ಲಯನ್ ಚೌಧರಿ ಮತ್ತಿರರು ಭಾಗವಹಿಸಿದ್ದರು.
ಭಾರತದಲ್ಲಿ ಮೊದಲ ಬಾರಿಗೆ ವಿಶ್ವ ಸೈಕ್ಲಿಂಗ್ ಚಾಂಪಿಯನ್ಶಿಪ್; 2032ರ UCI ಚಾಂಪಿಯನ್ಶಿಪ್ಗೆ ಪುಣೆ ಆತಿಥೇಯ!

