ಪ್ರವಾಸಿ ತಾಣಗಳಲ್ಲಿ ‘ಮಯೂರ ರುಚಿ ಆನ್ ವೀಲ್ಸ್’; ಪ್ರವಾಸಿಗರ ಬಳಿಗೇ ಮಯೂರ ಹೋಟೆಲ್‌ಗಳ ರುಚಿ: ಸಚಿವ ಕೆ.ಜೆ. ಜಾರ್ಜ್

KSTDCಯ ಮೊದಲ ಇಂತಹ ಮೊಬೈಲ್ ಆಹಾರ ಸೇವಾ ಯೋಜನೆ
ಹಂಪಿ, ಮಡಿಕೇರಿ, ಜೋಗ್ ಫಾಲ್ಸ್, ಮೈಸೂರು, ನಂದಿ ಹಿಲ್ಸ್ ಹಾಗೂ ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ನಿಯೋಜನೆ
ಕರ್ನಾಟಕದ ಜನಪ್ರಿಯ ಖಾದ್ಯಗಳ ಪರಿಚಯ; ಸ್ಥಳೀಯ ಉದ್ಯೋಗ ಮತ್ತು KSTDC ಆದಾಯ ಹೆಚ್ಚಳಕ್ಕೂ ಒತ್ತು
ಬೆಂಗಳೂರು: ಪ್ರಮುಖ ಪ್ರವಾಸಿ ತಾಣಗಳಿಗೆ(Touriest Destinations) ಭೇಟಿ ನೀಡುವ ಪ್ರವಾಸಿಗರಿಗೆ(Tourists) ಗುಣಮಟ್ಟದ, ಸ್ವಚ್ಛ ಮತ್ತು ರುಚಿಕರ ಆಹಾರವನ್ನು ಅವರು ಇರುವ ಸ್ಥಳದಲ್ಲೇ ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಮಯೂರ ರುಚಿ ಆನ್ ವೀಲ್ಸ್ –  ಸೇವೆಯನ್ನು ಆರಂಭಿಸಲು ನಿರ್ಧರಿಸಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್(K.J.George) ತಿಳಿಸಿದ್ದಾರೆ.
KSTDCಯ ಮಯೂರ ಹೋಟೆಲ್‌ಗಳಲ್ಲಿ ತಯಾರಾಗುವ ಆಹಾರವನ್ನು ಹೋಟೆಲ್ ಆವರಣಕ್ಕೆ ಮಾತ್ರ ಸೀಮಿತಗೊಳಿಸದೆ, ಹೆಚ್ಚಿನ ಪ್ರವಾಸಿಗರು ಸೇರುವ ಪ್ರವಾಸಿ ತಾಣಗಳಿಗೆ ಕೊಂಡೊಯ್ಯುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಹಂಪಿ, ಮಡಿಕೇರಿ, ಜೋಗ್ ಫಾಲ್ಸ್, ಮೈಸೂರು, ನಂದಿ ಹಿಲ್ಸ್ ಹಾಗೂ ಬೆಂಗಳೂರಿನ ಪ್ರಮುಖ ಪ್ರವಾಸಿ ಪ್ರದೇಶಗಳಲ್ಲಿ ಹಂತ ಹಂತವಾಗಿ ಫುಡ್ ವ್ಯಾನ್‌ಗಳನ್ನು ನಿಯೋಜಿಸಲು ಯೋಜಿಸಲಾಗಿದೆ.
KSTDC ರಾಜ್ಯಾದ್ಯಂತ 24 ಮಯೂರ ಹೋಟೆಲ್‌ಗಳನ್ನು ನಿರ್ವಹಿಸುತ್ತಿದ್ದು, ಕೆಲವು ಪ್ರವಾಸಿ ತಾಣಗಳಲ್ಲಿ ಹೋಟೆಲ್‌ಗಳು ಮುಖ್ಯ ಪ್ರವಾಸಿ ಕೇಂದ್ರಗಳಿಂದ ದೂರವಿವೆ. ಈ ಹಿನ್ನೆಲೆಯಲ್ಲಿ ಮಯೂರ ಹೋಟೆಲ್‌ಗಳ ಗುಣಮಟ್ಟದ ಆಹಾರವನ್ನು ನೇರವಾಗಿ ಪ್ರವಾಸಿಗರ ಬಳಿಗೆ ತಲುಪಿಸುವ ಹೊಸ ಮೊಬೈಲ್ ಸೇವಾ ಮಾದರಿಯನ್ನು ರೂಪಿಸಲಾಗಿದೆ.
ಕರ್ನಾಟಕದ ವಿವಿಧ ಭಾಗಗಳ ಜನಪ್ರಿಯ ಉಪಾಹಾರ, ತಿಂಡಿ, ಊಟ ಹಾಗೂ ಆಯ್ದ ಪ್ರಾದೇಶಿಕ ಖಾದ್ಯಗಳನ್ನು ಮಯೂರ ರುಚಿ ಆನ್ ವೀಲ್ಸ್ ಮೂಲಕ ಒದಗಿಸುವ ಉದ್ದೇಶವಿದ್ದು, ಪ್ರವಾಸಿಗರಿಗೆ ರಾಜ್ಯದ ಆಹಾರ ವೈವಿಧ್ಯವನ್ನೂ ಪರಿಚಯಿಸಲಾಗುವುದು.
“ಪ್ರವಾಸಿಗರು ಉತ್ತಮ ತಾಣವನ್ನು ನೋಡುವುದರ ಜೊತೆಗೆ ಉತ್ತಮ ಆಹಾರದ ಅನುಭವವನ್ನೂ ಪಡೆಯಬೇಕು. ಮಯೂರ ಹೋಟೆಲ್‌ಗಳ ರುಚಿ ಮತ್ತು ಗುಣಮಟ್ಟವನ್ನು ಪ್ರವಾಸಿಗರ ಬಳಿಗೇ ಕೊಂಡೊಯ್ಯುವ ಈ ಹೊಸ ಯೋಜನೆಯಿಂದ ಪ್ರವಾಸಿ ಅನುಭವ ಇನ್ನಷ್ಟು ಉತ್ತಮವಾಗಲಿದೆ. ಸ್ಥಳೀಯ ಆಹಾರಕ್ಕೂ ಉತ್ತೇಜನ ದೊರೆಯಲಿದ್ದು, ಉದ್ಯೋಗಾವಕಾಶಗಳು ಸೃಷ್ಟಿಯಾಗುವುದರ ಜೊತೆಗೆ KSTDCಯ ಆದಾಯವನ್ನೂ ಹೆಚ್ಚಿಸಲು ಇದು ಸಹಕಾರಿಯಾಗಲಿದೆ,” ಎಂದು  ಹೇಳಿದರು.
KSTDC ಅಧ್ಯಕ್ಷರಾದ ಎಂ. ಶ್ರೀನಿವಾಸ್ ಮಾತನಾಡಿ, “ಸಚಿವ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದಲ್ಲಿ KSTDC ಮೊದಲ ಬಾರಿಗೆ ಇಂತಹ ಮೊಬೈಲ್ ಆಹಾರ ಸೇವಾ ಉಪಕ್ರಮವನ್ನು ಕೈಗೆತ್ತಿಕೊಳ್ಳುತ್ತಿದೆ. ಪ್ರವಾಸಿಗರು ಹೆಚ್ಚು ಸೇರುವ ಸ್ಥಳಗಳಲ್ಲಿ ಮಯೂರದ ಗುಣಮಟ್ಟದ ಆಹಾರ ಲಭ್ಯವಾಗುವಂತೆ ಮಾಡುವುದು ನಮ್ಮ ಗುರಿ. ಸ್ಥಳೀಯ ಖಾದ್ಯಗಳಿಗೆ ಆದ್ಯತೆ ನೀಡುವುದರಿಂದ ಸ್ಥಳೀಯರಿಗೆ ಉದ್ಯೋಗ ಮತ್ತು ವ್ಯಾಪಾರ ಅವಕಾಶಗಳೂ ಸೃಷ್ಟಿಯಾಗಲಿವೆ,” ಎಂದರು.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, “ಆಹಾರವು ಪ್ರವಾಸಿ ಅನುಭವದ ಪ್ರಮುಖ ಭಾಗವಾಗಿದೆ. ‘ಮಯೂರ ರುಚಿ ಆನ್ ವೀಲ್ಸ್’  ಮೂಲಕ KSTDCಯ ಆತಿಥ್ಯ ಸೇವೆಯನ್ನು ಹೋಟೆಲ್‌ಗಳ ಹೊರಗೂ ವಿಸ್ತರಿಸಲಾಗುತ್ತಿದೆ. ಸ್ಥಳೀಯ ಆಹಾರ ಸಂಸ್ಕೃತಿ, ಗುಣಮಟ್ಟದ ಸೇವೆ ಮತ್ತು ಪ್ರವಾಸಿಗರ ಅನುಕೂಲ — ಈ ಮೂರನ್ನೂ ಒಂದೇ ವೇದಿಕೆಯಲ್ಲಿ ಜೋಡಿಸುವುದು ಈ ಯೋಜನೆಯ ಉದ್ದೇಶವಾಗಿದೆ,” ಎಂದರು.

Hot this week

ಅರಾಧನಾ ಮಿಶ್ರಾ ‘ಮೋನಾ’ಗೆ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನ; ಅಜಯ್ ರೈ ಬದಲಾವಣೆ

ಲಖನೌ: ಕಾಂಗ್ರೆಸ್ ಪಕ್ಷವು ಉತ್ತರ ಪ್ರದೇಶ ಘಟಕದಲ್ಲಿ ಮಹತ್ವದ ಸಂಘಟನಾ ಬದಲಾವಣೆ...

ಉಕ್ರೇನ್‌ಗೆ ನಾಲ್ಕು ಕದನ ವಿರಾಮ ಪ್ರಸ್ತಾವನೆಗಳು: ಭಾರತದ ಪ್ರಸ್ತಾವನೆ ಅತ್ಯಂತ ವ್ಯಾಪಕ

ಕೀವ್: ರಷ್ಯಾ–ಉಕ್ರೇನ್(Rassia Ukrane) ಯುದ್ಧಕ್ಕೆ ಕದನ ವಿರಾಮದ ಸಾಧ್ಯತೆ ಕುರಿತು ಉಕ್ರೇನ್‌ಗೆ...

ಡೈವ್‌ಆಗರ್ ಕಡಲತೀರದಲ್ಲಿ 8 ವಿದ್ಯಾರ್ಥಿಗಳು ಮುಳುಗಿ ಸಾವು; ಪುಣೆಯ ಕೋಚಿಂಗ್ ಅಕಾಡೆಮಿ ಸೀಲ್

ಪುಣೆ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಡೈವ್‌ಆಗರ್ ಕಡಲತೀರದಲ್ಲಿ(Daivagar Beach) ಪ್ರವಾಸಕ್ಕೆ ತೆರಳಿದ್ದ...

ಬಾಕ್ಸ್ ಆಫೀಸ್‌ನಲ್ಲಿ ‘ದೃಶ್ಯಂ 3’ ಅಬ್ಬರ: ₹95 ಕೋಟಿ ಗಡಿ ದಾಟಿದ ಅಜಯ್ ದೇವಗನ್ ಚಿತ್ರ

ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್(Actor Ajay Devagan) ಅಭಿನಯದ ಬಹುನಿರೀಕ್ಷಿತ...

ದೆಹಲಿ ಹೋಟೆಲ್‌ನಲ್ಲಿ ನೆಸ್ಲೆ ಇಂಡಿಯಾದ ಡೈರಿ ವೈಟನರ್ ಮಾರಾಟಕ್ಕೆ FSSAI ನಿಷೇಧ

ನವದೆಹಲಿ: ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ,...

Topics

ಖಾರಿಫ್ ಬರ ಪರಿಸ್ಥಿತಿ ಅಧ್ಯಯನ: ರಾಜ್ಯಕ್ಕೆ ಕೇಂದ್ರದ ಅಧಿಕಾರಿಗಳ ತಂಡ ಭೇಟಿ

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಖಾರಿಫ್(Kaarif) ಬರದ ಪರಿಸ್ಥಿತಿಯನ್ನು ಪ್ರತ್ಯಕ್ಷವಾಗಿ ಪರಿಶೀಲಿಸಲು ಮತ್ತು...

ಶಾಸಕರ ಭವನದ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಬಳಿ ತಪೋವನ ಅಭಿವೃದ್ಧಿಗೆ ನಿರ್ಧಾರ

ಬೆಂಗಳೂರು: ವಿಧಾನಸೌಧದ(Vidhanasoudha) ಬಳಿ ಶಾಸಕರ ಭವನದ ಮುಂಭಾಗದಲ್ಲಿ ವಾಲ್ಮೀಕಿ ಪ್ರತಿಮೆ(Valmeeki Statue) ಇರುವ...

ನಯಾರಾ ಎನರ್ಜಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಸ್ಥಳೀಯ ಆರ್ಥಿಕತೆಗೆ ಆತಂಕ

ನಯಾರಾ ಎನರ್ಜಿ(Nayara Energy) ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ ₹5 ಹಾಗೂ...

Related Articles