ಬೆಂಗಳೂರು: ಅಂಚೆ ಸೇವೆಗಳಿಗೆ(Postal Service) ಸಂಬಂಧಿಸಿದ ಕುಂದುಕೊರತೆಗಳು ಅಥವಾ ದೂರುಗಳ ಕುರಿತಂತೆ ಸೆಪ್ಟೆಂಬರ್ 21 ರಂದು ಅಂಚೆ ಅದಾಲತ್(Postal Adalat) ಹಮ್ಮಿಕೊಳ್ಳಲಾಗಿದೆ ಎಂದು ಅಂಚೆ ಕಛೇರಿಯ ಹಿರಿಯ ಅಧೀಕ್ಷಕರು ತಿಳಿಸಿದ್ದಾರೆ.
ವಿಭಾಗ ಮಟ್ಟದ ಅಂಚೆ ಅದಾಲತ್ ಅನ್ನು ಸೆಪ್ಟೆಂಬರ್ 21 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ಪಶ್ಚಿಮ ವಿಭಾಗ, ವಿದ್ಯಾ ಭಾರತಿ ಶಾಲೆಯ ಎದುರು, ವೆಸ್ಟ್ ಆಫ್ ಕಾರ್ಡ್ ರಸ್ತೆ, ಎರಡನೇ ಹಂತ, ಅಂಚೆ ಕಚೇರಿ ಕಟ್ಟಡ, ಬೆಂಗಳೂರು- 560086 ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂಚೆ ಸೇವೆಗಳಿಗೆ ಸಂಬಂಧಿಸಿದ ಕುಂದು-ಕೊರತೆಗಳು ಅಥವಾ ದೂರುಗಳಾದ ಮೇಲ್ಗಳ ವಿತರಣೆ, ಸ್ಪೀಡ್ ಪೋಸ್ಟ್, ಪಾರ್ಸೆಲ್ಗಳು, ಮನಿ ಆರ್ಡರ್ಗಳು, ಉಳಿತಾಯ ಬ್ಯಾಂಕ್, ನಗದು ಪ್ರಮಾಣ ಪತ್ರಗಳು ಮತ್ತು ಕೌಂಟರ್ ಸೇವೆಗಳು ಬೆಂಗಳೂರು ಪಶ್ಚಿಮ ವಿಭಾಗಕ್ಕೆ ಸಂಬಂಧಿಸಿದ ದೂರುಗÀಳೇನಾದರೂ ಇದ್ದಲ್ಲಿ ಸೆಪ್ಟೆಂಬರ್ 18 ರಂದು ಸಂಜೆ 4.00 ಗಂಟೆಯೊಳಗಾಗಿ ಹಿರಿಯ ಅಧೀಕ್ಷಕರು ಹಿರಿಯ ಅಂಚೆ ಕಛೇರಿ, ಬೆಂಗಳೂರು ಪಶ್ಚಿಮ ವಿಭಾಗ, ವಿದ್ಯಾ ಭಾರತಿ ಶಾಲೆಯ ಎದುರು, ಕಾರ್ಡ್ ರಸ್ತೆಯ ಪಶ್ಚಿಮ, ಎರಡನೇ ಹಂತ, ಅಂಚೆ ಕಚೇರಿ ಕಟ್ಟಡ, ಬೆಂಗಳೂರು ಇಲ್ಲಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-23493264, 080-23493267 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಎಸಿ ರೂಂನಲ್ಲಿ ಕೂರಬೇಡಿ, ಫೀಲ್ಡಿಗಿಳಿಯಿರಿ: ಅಧಿಕಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ
