ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗೀತಾಶಿವರಾಜ್ಕುಮಾರ್(Geeta Shivaraj kumar) ನಿರ್ಮಾಣ ಮಾಡುತ್ತಿರುವ ’ಪೆಬ್ಬಾರ್’ ಚಿತ್ರದಲ್ಲಿ(Pebbar Film) ಧೀರೇನ್ ರಾಮ್ಕುಮಾರ್ ನಾಯಕ, ಅಮೃತಪ್ರೇಮ್ ನಾಯಕಿ. ’ಶಾಖಹಾರಿ’(Shakhahaari) ನಿರ್ದೇಶಕ ಸಂದೀಪ್ ಸುಂಕದ್ ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೆ ಧೀರೇನ್ ರಾಮ್ಕುಮಾರ್(Deeren Ramkumar) ಭಿನ್ನ ಲುಕ್ಗಳಲ್ಲಿ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
ಸಿನಿಮಾವು ಕ್ರೈಂ, ಅಡ್ವಂಚೆರ್ ಥ್ರಿಲ್ಲರ್ ಕಥೆಯನ್ನು ಹೇಳಲಿದೆ. ಹಿಮಾಚಲ ಪ್ರದೇಶದ ಶಿಮ್ಲಾ ಬಳಿಯ ಪಬ್ಬಾರ್ ನದಿ ಚಿತ್ರಕ್ಕೆ ಕೇಂದ್ರಬಿಂದು. ಹಾಗಾಗಿ ಇದೇ ಟೈಟಲ್ನ್ನು ಇಡಲಾಗಿದೆಯಂತೆ. ತಾರಾಗಣದಲ್ಲಿ ಅಚ್ಯುತಕುಮಾರ್, ಗೋಪಾಲಕೃಷ್ಣದೇಶಪಾಂಡೆ, ಅಯ್ಯಪ್ಪ ಶರ್ಮ, ಹಿರಿಯ ಕಲಾವಿದ ರಾಮಕೃಷ್ಣ, ಸು ಫ್ರಂ ಸೋ ಖ್ಯಾತಿಯ ಭರತ್.ಜೆಬಿ, ಶ್ರೀಹರ್ಷ ಗೋಭಟ್ ಮುಂತಾದವರು ನಟಿಸುತ್ತಿದ್ದಾರೆ. ಮಯೂರ್ ಅಂಬೆಗಲ್ಲು ಸಂಗೀತ, ವಿಶ್ವಜಿತ್ರಾವ್ ಛಾಯಾಗ್ರಹಣ ಚಿತ್ರಕ್ಕಿದೆ. ಸಿನಿಮಾವು ಡಿಸೆಂಬರ್ 11ರಂದು ರಾಜ್ಯದ್ಯಂತ ತೆರೆ ಕಾಣುತ್ತಿದೆ.

