ಪ್ರೇಮದ ಊರಲಿ ರಮಿಕಾ ಶಿವು ಮಾತುಗಳು

ಬಣ್ಣದ ಲೋಕದಲ್ಲಿ ಒಂದು ಚಿತ್ರ ಯಶಸ್ವಿಯಾದರೆ, ಅದೇ ಗುಂಗಿನಲ್ಲಿ ಕನಿಷ್ಠ ಐದು ವರ್ಷವಾದರೂ(Five Years) ಉಸಿರಾಡಬಹುದೆಂದು ಸಿನಿಪಂಡಿತರು ಹೇಳಿದ್ದಾರೆ. 2026 ವರ್ಷದಲ್ಲಿ ಹಿಟ್ ಚಿತ್ರ ಯಾವುದು ಇಲ್ಲವೆಂಬ ಕೊರಗು ಕಾಡುತ್ತಿರುವಾಗಲೇ, ’ಪ್ರೇಮದ ಊರಲಿ’(Premada Urali) ಸಿನಿಮಾವು ಪ್ರೇಕ್ಷಕ ಮಹಾಪ್ರಭುಗಳಿಂದ ಮೆಚ್ಚುಗೆ ಗಳಿಸಿ, ಈ ಸಾಲಿನ ಮೊದಲ ಹಿಟ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಂಗಾಯಣ ರಘು ಹೊರತುಪಡಿಸಿ ಚಿತ್ರದಲ್ಲಿ ನಟಿಸಿದ ಎಲ್ಲಾ ಕಲಾವಿದರು, ತಂತ್ರಜ್ಞರುಗಳಿಗೆ ಬದುಕು ಸಿಕ್ಕಿದೆ. ಈ ನಿಟ್ಟಿನಲ್ಲಿ ವಸಂತಳಾಗಿ ಎಲ್ಲರ ಮನಗೆದ್ದ ರಮಿಕಾ ಶಿವು(Ramika Shivu) ಕೊನೆಯತನಕ ನಿಲ್ಲುತ್ತಾರೆ, ಕಾಡುತ್ತಾರೆ.

’ಪಾರು’ ಧಾರವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದ ಇವರು, ಮೂಲತ: ಮೈಸೂರಿನವರು. ನಟನೆಗೆ ಬರಲು ಅಪ್ಪ-ಅಮ್ಮನ ಪ್ರೋತ್ಸಾಹ ಇರುವುದರಿಂದ ಅಷ್ಟೇನು ಕಷ್ಟ ಅನಿಸಲಿಲ್ಲ. ತಾಯಿ ಗೃಹಿಣಿ. ಅಪ್ಪ ಹೋಟೆಲ್ ಉದ್ಯಮಿ. ನಟನೆಯೊಂದಿಗೆ ಡಿಗ್ರಿ ಮುಗಿಸಿ, ಕಲೆಯ ಬಗ್ಗೆ ಗಮನ ಹರಿಸಿದ್ದಾರೆ. ನಿರ್ದೇಶಕರು ’ಪ್ರೇಮದ ಊರಲಿ’ ಕಥೆ ಹೇಳಿ, ’ವಸಂತ’ ಪಾತ್ರದ ಚಿತ್ರಣ ನೀಡಿದ್ದರು. ನಿಜ ಹೇಳಬೇಕೆಂದರೆ ರಿಯಲ್ ಲೈಫ್‌ನಲ್ಲಿ ಹಾಗೆಯೇ ಇರುವುದರಿಂದ ರೀಲ್‌ದಲ್ಲೂ ನಟಿಸಲು ಸುಲಭವಾಯಿತು. ನಾನೇ ಕಂಠದಾನ ಮಾಡಿದ್ದರಿಂದ ಸಹಜತೆ ಬಂದಿದೆ ಎಂದು ನಿರ್ದೇಶಕರು ಹೇಳಿದ್ದು ಇಂದಿಗೂ ನೆನಪಿದೆ. ಇದು ನನ್ನ ವೃತ್ತಿ ಬದುಕಿಗೆ ತಿರುವು ನೀಡಿದೆ.

ಹೊಸದಾಗಿ ಚಿತ್ರರಂಗಕ್ಕೆ ಬರುವ ಪ್ರತಿಭೆಗಳಿಗೆ ಇಂತಹ ಸಾರಥಿಯೊಂದಿಗೆ ಕೆಲಸ ಸಿಕ್ಕರೆ ಪುಣ್ಯ ಎನ್ನಬಹುದು. ಭವಿಷ್ಯದಲ್ಲಿ ಮಾಡಬೇಕಾದ ರೋಲ್ ಬಗ್ಗೆ ನನ್ನದೆ ಆದೆ ದೃಷ್ಟಿಕೋನವಿದೆ. ವಿನೂತನ, ಸವಾಲು ಎನಿಸುವಂತಹ ಪಾತ್ರಗಳಿಗೆ ಆದ್ಯತೆ ನೀಡುತ್ತೇನೆ. ಕಥೆಗೆ ಅಗತ್ಯವೆನಿಸಿದರೆ ’ಬಬ್ಲಿಗರ್ಲ್’ ಆಗಲು ಅಭ್ಯಂತರವೇನಿಲ್ಲ. ಈಗಾಗಲೇ ಒಂದಷ್ಟು ಕರೆಗಳು ಬಂದಿವೆ, ಬರುತ್ತಲೂ ಇದೆ. ಸಿನಿಪಯಣದ ಮೆಟ್ಟಿಲುಗಳನ್ನು ಏರಬೇಕು. ಅದಕ್ಕಾಗಿ ಜತನದಿಂದ ಕಥೆಗಳನ್ನು ಆಯ್ದುಕೊಂಡು ಬೆಳ್ಳಿತೆರೆಯಲ್ಲೆ ನೆಲೆಯೂರುವ ಬಗ್ಗೆ ಚಿಂತನೆ ನಡೆಸಿದ್ದೇನೆ ಎನ್ನುತ್ತಾರೆ ರಮಿಕಾಶಿವು.

Hot this week

ಬೆಂಗಳೂರಿನಲ್ಲಿ ೧೫ ರಂದು `ಜೋಳರಾಜನ ಕಥೆ’ ಕೃತಿ ಜನಾರ್ಪಣೆ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ಕನ್ನಡ ಸಾಹಿತ್ಯ...

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನವನ್ನು ಅಧಿಕೃತವಾಗಿ ಅಂತ್ಯಗೊಳಿಸದೆ ದಾಖಲೆಯ 88 ದಿನಗಳ...

ಬೆಂಗಳೂರು: ಕರ್ನಾಟಕ ಸರ್ಕಾರವು(Karnataka Government) ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ  ನವೆಂಬರ್...

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಕೃಷಿ ನಾವಿನ್ಯತೆಗಳು ಹಾಗೂ ಬರ...

ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಭಾರತದ ಪ್ರಥಮ ಶಿಕ್ಷಣ ಸಚಿವರಾದ...

Topics

ಇ-20 ಎಥನಾಲ್ ಪ್ರಮಾಣ ಪರೀಕ್ಷೆ – ಕರ್ನಾಟಕ ಸರ್ಕಾರವು ಗ್ರಾಹಕರ ಹಿತರಕ್ಷಣೆಗೆ ಬದ್ಧ : ಸಚಿವ ರಿಜ್ವಾನ್ ಅರ್ಷದ್ 

ಬೆಂಗಳೂರು: ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣಕ್ಕೆ (E20) ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಪರೀಕ್ಷಾ...

ಬೆಂಗಳೂರು: ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಕಾಮನ್ವೆಲ್ತ್ ಮಹಿಳಾ ಸಂಸದೀಯರ ಭಾರತ...

ನ್ಯೂಜಿಲೆಂಡ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮೇಲೆ ಟೀಂ ಇಂಡಿಯಾ ಕಣ್ಣು: ಹ್ಯಾಮಿಲ್ಟನ್ ಪಂದ್ಯಕ್ಕೆ ಮಳೆ ಭೀತಿ!

ಹ್ಯಾಮಿಲ್ಟನ್: ನ್ಯೂಜಿಲೆಂಡ್(New Zealand) ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ(Cricket Team) ಇದೀಗ...

Related Articles