ಬೆಂಗಳೂರು: ರಾಜ್ಯದಲ್ಲಿರುವ ಎಲ್ಲಾ ನಗರಗಳಲ್ಲೂ ವಾಹನ ದಟ್ಟಣೆ ಹೆಚ್ಚಾಗಿದೆ. ಈ ಕಾರಣಕ್ಕೆ ನಮ್ಮ ಸರ್ಕಾರ ಹೊಸ ನಗರ ಯೋಜನೆ ರೂಪಿಸಿದೆ. ಇದರಲ್ಲಿ ಶಿಸ್ತು ಬದ್ಧ ರಸ್ತೆ ನಿರ್ಮಾಣಕ್ಕೆ ‘ನೂತನ ರಸ್ತೆ ಗ್ರಿಡ್ ವ್ಯವಸ್ಥೆ'(New Road Grid System) ಜಾರಿ ಮಾಡುವ ಚಿಂತನೆಯಿದೆ” ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್(CM D.K.Shivakumar) ಅವರು ಹೇಳಿದರು.
ಇಂದು ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯ ಸಭಾಂಗಣದಲ್ಲಿ ನಡೆದ ರಾಜ್ಯದ ವಿವಿಧೆಡೆ ನಿರ್ಮಿಸಿರುವ 16 ಇಂದಿರಾ ಕ್ಯಾಂಟೀನ್ ಗಳು, ಸ್ವಚ್ಛಭಾರತ್ ಮಿಷನ್ (ನಗರ) ಯೋಜನೆಯಡಿ ಕಾಮಗಾರಿಗಳು ಹಾಗೂ ಯಂತ್ರೋಪಕರಣಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು, ಬೆಳಗಾವಿಯಲ್ಲಿ ರಸ್ತೆಗಳು ವಿಶಾಲವಾಗಿವೆ. ಆದರೆ, ಬೆಂಗಳೂರಿನಲ್ಲಿ ಈ ರೀತಿ ಇಲ್ಲ. ಇವೆಲ್ಲ ಯೋಜಿತವಾಗಿ ನಗರವನ್ನು ಅಭಿವೃದ್ಧಿ ಪಡಿಸುವುದರಿಂದ ಮಾತ್ರ ಸಾಧ್ಯ. ಅಗತ್ಯವಿರುವ ಪ್ರಮಾಣ ಪತ್ರಗಳನ್ನು ನಗರಯೋಜನೆ ಇಲಾಖೆಯಲ್ಲಿ ಪಡೆದುಕೊಳ್ಳಿ. ಇಂಧನ ಇಲಾಖೆಯವರು ಇಲ್ಲಿಗೆ ಬಂದು ಪ್ರಮಾಣ ಪತ್ರ ಪಡೆದುಕೊಳ್ಳುವುದು ನಡೆಯುತ್ತಿದೆ. ಎಲ್ಲವೂ ಇನ್ನು ಮುಂದೆ ಕೊನೆಗೊಳ್ಳಲಿದೆ. ಯೋಜಿತವಾಗಿ ನಗರ ನಿರ್ಮಾಣಕ್ಕಾಗಿಯೇ ನಾಡಪ್ರಭು ಕೆಂಪೇಗೌಡರ ಹೆಸರಲ್ಲಿ ನಗರಯೋಜನಾ ಕಾಲೇಜು ಆರಂಭಿಸಿದ್ದೇವೆ. ವಿದ್ಯಾರ್ಥಿಗಳ ದಾಖಲಾತಿ ಆರಂಭಗೊಂಡಿದೆ ಎಂದರು.
‘ನಮ್ಮ ಸರ್ಕಾರ ನಗರಸಭೆಗಳು ಹಾಗೂ ಕಾರ್ಪೋರೇಷನ್ ಗಳಿಗೆ ಹೆಚ್ಚಿನ ಅನುದಾನ ನೀಡುವ ಬಗ್ಗೆ ತೀರ್ಮಾನ ಕೈಗೊಂಡಿದೆ. ಕಳೆದ 3 ವರ್ಷಗಳಿಂದ ಅನುದಾನದಲ್ಲಿ ವ್ಯತ್ಯಾಸವಾಗಿತ್ತು. ಆದರೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ದೊರೆಯಲಿದೆ ಎಂದು ತಿಳಿಸಿದರು.
ಬಡವನ ತಟ್ಟೆಯಲ್ಲಿ ಅನ್ನ ಇದ್ದಾಗ ಮಾತ್ರ ಅಭಿವೃದ್ಧಿಗೆ ಬೆಲೆ ಬರುತ್ತದೆ. ದುಡಿಯುವವರ ಮುಖದಲ್ಲಿ ನಗು ಇದ್ದರೆ ನಮ್ಮ ಕೆಲಸ ಸಾರ್ಥಕವಾಗುತ್ತದೆ. ಹಸಿವಿಗೆ ಜಾತಿ, ಧರ್ಮ ಅನ್ನೋದು ಇಲ್ಲ. ಎμÉ್ಟೀ ದೊಡ್ಡ ಶ್ರೀಮಂತರಾಗಿದ್ದರೂ ಹಸಿವಾದಾಗ ಜಾತಿ ಧರ್ಮ ನೋಡಲ್ಲ. ಎಲ್ಲಿ, ಏನು ಸಿಗುತ್ತದೆಯೋ ಅದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ಕೆಲವರು ಹಸಿವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಾರೆ. ನಾವು ಆ ರೀತಿ ಮಾಡುವುದಿಲ್ಲ ಎಂದು ಹೇಳಿದರು.
ಇಂದಿರಾ ಕ್ಯಾಂಟೀನ್ ನಲ್ಲಿ ಸಿಸಿ ಟಿವಿ ಕ್ಯಾಮೆರ ಹಾಕಿ ಕೇಂದ್ರೀಕೃತ ವ್ಯವಸ್ಥೆ ಮಾಡಬೇಕು. ಇದರಿಂದ ಪ್ರತಿದಿನ ಎಷ್ಟು ಜನ ಬಂದು ಹೋಗುತ್ತಾರೆ ಎನ್ನುವ ಮಾಹಿತಿ ದೊರೆಯುತ್ತದೆ. ದಿನಕ್ಕೆ ಒಬ್ಬರಂತೆ ಸರತಿಯಲ್ಲಿ ಅಧಿಕಾರಿಗಳು ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಮಾಡಿ, ಊಟ ಚೆನ್ನಾಗಿದೆಯೋ ಇಲ್ಲವೋ ಅಂತ ಗುಣಮಟ್ಟ ಪರೀಕ್ಷೆ ಮಾಡಿ ಸಹಿ ಹಾಕಿ ಬರಬೇಕು. ಹೀಗೆ ಮಾಡುವುದರಿಂದ ಅಲ್ಲಿ ಕೆಲಸ ಮಾಡುವವರಿಗೆ ಭಯ, ಭಕ್ತಿ ಇರುತ್ತದೆ. ಇದು ಬಡವರಿಗಾಗಿ ಮಾಡುತ್ತಿರುವ ಕೆಲಸವಾದ್ದರಿಂದ ಪಾರದರ್ಶಕವಾಗಿರಿ ಎಂದು ಕಿವಿಮಾತು ಹೇಳಿದರು.
ನಾನು ನಗರಾಭಿವೃದ್ಧಿ ಸಚಿವನಾಗಿದ್ದೆ. ಸ್ವಚ್ಛತೆ ಸವಾಲಿನ ಕೆಲಸ ಅನ್ನೋ ಅನುಭವ ಆಗಿದೆ. ಪೌರಕಾರ್ಮಿಕರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ತಂತ್ರಜ್ಞಾನ ಬಳಸಿಕೊಂಡು ವೇಗವಾಗಿ ಕೆಲಸ ಮಾಡಿ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ನಿಮ್ಮ ನೆರವಿಗೆ ನಿಲ್ಲಲಿವೆ ಎಂದರು.
ನಮ್ಮ ಸರ್ಕಾರ ಪೌರಕಾರ್ಮಿಕರಿಗಾಗಿ ಮನೆಗಳ ನಿರ್ಮಾಣಕ್ಕೆ ಚಿಂತನೆ ನಡೆಸಿದೆ. ಪ್ರತಿ ಕ್ಷೇತ್ರದಲ್ಲೂ ಬಡವರಿಗೆ ನಿವೇಶನಗಳನ್ನು ಹಂಚಿಕೆ ಮಾಡುವ ದಿಟ್ಟ ತೀರ್ಮಾನ ಮಾಡಿದೆ. ನಿಮಗೂ ಎಲ್ಲಾ ಸೌಕರ್ಯಗಳು ನೀಡುತ್ತಿದ್ದೇವೆ. ನೀವು ನಿμÉ್ಠಯಿಂದ ಕೆಲಸ ಮಾಡಬೇಕು. ಜನರಿಗಾಗಿ ಕೆಲಸ ಮಾಡಲು ಇದು ಒಳ್ಳೆ ಅವಕಾಶ. ನಮಗೆ 5 ವರ್ಷಕ್ಕೊಂದು ಬಾರಿ ಜನರ ಮುಂದೆ ಹೋಗಿ ಅಧಿಕಾರ ನವೀಕರಣ ಮಾಡಿಕೊಳ್ಳಬೇಕು. ನಿಮಗೆ ಆ ರೀತಿ ಇಲ್ಲ. ಬದ್ದತೆಯಿಂದ, ಆತ್ಮತೃಪ್ತಿಯಿಂದ ಕೆಲಸ ಮಾಡಿ. ನಮ್ಮ ಸರ್ಕಾರ ನಿಮ್ಮನ್ನು ನಂಬಿದೆ, ನೀವು ಸರ್ಕಾರವನ್ನು ನಂಬಿ ಎಂದರು.
ಇಂದಿರಾ ಅಂದರೆ ಹಸಿವು ದೂರ. ಇಂದಿರಾ ಅಂದರೆ ಬಡತನ ದೂರ. ಈ ದೇಶದ ಹಸಿದ ಹೊಟ್ಟೆಗಳಿಗೆ, ದುಡಿಯುವ ಕೈಗಳಿಗೆ ಶಕ್ತಿ ತುಂಬಿದ್ದು ಇಂದಿರಾಗಾಂಧಿ. ಈ ದೇಶದ ಆರ್ಥಿಕತೆಗೆ, ಅಭಿವೃದ್ಧಿಗೆ, ಸಾಮಾನ್ಯ ಜನರ ಬಡವರ ಬದುಕಿಗೆ ಬಲ ತುಂಬಿದ ಧೀಮಂತ ಮಹಿಳೆ ಇಂದಿರಾಗಾಂಧಿ. ಅವರ ಹೆಸರು ಉಳಿಸಿಕೊಂಡು ಹೋಗುವುದು ನಮ್ಮ, ನಿಮ್ಮ ಕರ್ತವ್ಯ. ಈ ಜವಾಬ್ದಾರಿಯನ್ನು ನೀವು ತೆಗೆದುಕೊಳ್ಳಬೇಕು. ಹಸಿವು ಮುಕ್ತ ಕರ್ನಾಟಕವನ್ನು ನಿರ್ಮಾಣ ಮಾಡುವುದು ನಮ್ಮ ಗುರಿ. ಎಷ್ಟೇ ಕಷ್ಟ ಇರಲಿ. 5 ಗ್ಯಾರಂಟಿ ಕೊಟ್ಟಿದ್ದೇವೆ. ಬೆಲೆ ಗಗನಕ್ಕೆ ಏರುತ್ತಿದೆ. ಆದಾಯ ಪಾತಾಳಕ್ಕೆ ಹೋಗುತ್ತಿದೆ. ಆದರೂ ನಾವು ಅನ್ನಭಾಗ್ಯವನ್ನು ನೀಡುತ್ತಿದ್ದೇವೆ. ಇಂದಿರಾ ಕ್ಯಾಂಟೀನ್ ಅನ್ನು ಮುಂದುವರಿಸುತ್ತಿದ್ದೇವೆ ಎಂದರು.
ನಾವು ಭಾವನೆ ಮೇಲೆ ರಾಜಕಾರಣ ಮಾಡೋದಿಲ್ಲ. ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. 1 ಕೋಟಿ 22 ಲಕ್ಷ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ಕೊಡುತ್ತಿದ್ದೇವೆ. ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕೊಟ್ಟಿರುವುದರಿಂದ ಅವರ ಆರ್ಥಿಕ ಸಾಮಥ್ರ್ಯ ಹೆಚ್ಚಾಗಿದೆ. ಇಂಥ ಜನಪರ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವುದು, ಇ-ಖಾತೆ, ಭೂಮಿ ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ” ಎಂದು ಹೇಳಿದರು.
ಯುವ ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದೆವು. ರೈಲು ದೊಡ್ಡಬಳ್ಳಾಪುರದ ತನಕ ಹೋಗಿ ಸ್ಥಗಿತಗೊಂಡಿತು. ಆಗ ತಿಳಿಯಿತು ಇಂದಿರಾಗಾಂಧಿ ಅವರ ಹತ್ಯೆಯಾಗಿದೆ ಎಂದು. ನಂತರ ಗಲಾಟೆ ಶುರುವಾಯಿತು. ಒಂದಷ್ಟು ದಿನಗಳ ಹಿಂದೆಯμÉ್ಟೀ ನನ್ನ ಚಿತ್ರಮಂದಿರ ಲೈಸೆನ್ಸಿಗೆ ಅರ್ಜಿ ಸಲ್ಲಿಸಿದ್ದೆ. ಅಂದಿನ ಜಿಲ್ಲಾಧಿಕಾರಿ ಪುಟ್ಟರಂಗಪ್ಪ ಅವರ ಬಳಿ ಲೈಸೆನ್ಸ್ ಗೆ ಮನವಿ ಮಾಡಿದ್ದೆ. ಅವರು ಇಂದಿರಾಗಾಂಧಿ ಎಂದು ಹೆಸರಿಡಿ ಎಂದು ಸಲಹೆ ನೀಡಿದರು. ನಾನು ಇಂದಿರಾ ಚಿತ್ರಮಂದಿರ ಅಂತ ನಾಮಕರಣ ಮಾಡಿದ್ದೇ. ಹೀಗೆ ನನ್ನ ಕಾಂಗ್ರೆಸ್ ನಂಟು ಆಗಲೇ ಇತ್ತು. ಆವತ್ತು ಇಂದಿರಾಗಾಂಧಿ ಅವರು ಬ್ಯಾಂಕುಗಳ ರಾಷ್ಟೀಕರಣ ಮಾಡಿದ್ದರಿಂದ ಇಂದು ಮನೆ ಬಾಗಿಲಿಗೆ ಬಂದು ಬ್ಯಾಂಕ್ ನವರು ಸಾಲ ನೀಡುತ್ತಿದ್ದಾರೆ. ಅಂದು ರಾಜೀವ್ ಗಾಂಧಿ ಅವರು ತಂತ್ರಜ್ಞಾನ ಕ್ರಾಂತಿ ಮಾಡಿದ್ದರಿಂದ ಇಂದು ನಾವು ಮೊಬೈಲ್, ಲ್ಯಾಪ್ ಟಾಪ್ ಗಳನ್ನು ಬಳಸುತ್ತಿದ್ದೇವೆ ಎಂದು ನೆನಪಿಸಿಕೊಂಡರು.
ಪುರಸಭೆ ಸಿಬ್ಬಂದಿಗಳು ಇಂದಿರಾ ಕ್ಯಾಂಟೀನ್ ಉಪಹಾರ ಸೇವಿಸಬೇಕು : ಸಚಿವ ಹೆಚ್.ಸಿ. ಬಾಲಕೃಷ್ಣ
ಪೌರಾಡಳಿತ ಸಚಿವ ಹೆಚ್.ಸಿ. ಬಾಲಕೃಷ್ಣ ಅವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಬಡತನವನ್ನು ನಿರ್ಮೂಲನೆ ಮಾಡಲು ‘ಗರೀಬಿ ಹಠಾವೋ’ ಎನ್ನುವ ಘೋಷವಾಕ್ಯ ಘೋಷಿಸಿದ್ದನ್ನು ನಾವು ನೆನಪಿಸಿಕೊಳ್ಳಬೇಕು. ಪ್ರತಿಯೊಬ್ಬರಿಗೂ ನೆಮ್ಮದಿ ಜೀವನ ನೀಡಬೇಕೆಂದು ಅವರು ಶ್ರಮಿಸಿದ್ದರು.
ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಶಾಲಾ ಮಕ್ಕಳಿಗಾಗಿ ‘ಬಿಸಿಯೂಟ ಯೋಜನೆ’ ಜಾರಿಗೆ ತರಲಾಗಿತ್ತು. 2013 ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ‘ಆಹಾರ ಭದ್ರತಾ ಕಾಯ್ದೆಯನ್ನು’ ಜಾರಿಗೆ ತರಲಾಯಿತು.
ಸಿದ್ದರಾಮಯ್ಯ ಅವರು ಬಡವರ್ಗದವರಿಗೆ ಉಚಿತವಾಗಿ ಅಕ್ಕಿ ವಿತರಿಸುವ ಅನ್ನ ಭಾಗ್ಯ ಯೋಜನೆ ಮತ್ತು ಸರ್ಕಾರಿ ಶಾಲೆಗಳ ಮಕ್ಕಳಿಗೆ ಕ್ಷೀರ ಭಾಗ್ಯ ಹಾಗೂ ಮೊಟ್ಟೆ, ಚಿಕ್ಕಿಯನ್ನು ನೀಡುವ ಯೋಜನೆಗಳನ್ನು ಜಾರಿಗೆ ತಂದರು. ಅದರಂತೆ ಇಂದಿರಾ ಕ್ಯಾಂಟೀನ್ನ್ನು ಬಡ ವರ್ಗದವರಿಗೆ ತೆರೆಯಲಾಗಿದೆ. ಬಡವರ್ಗದವರು ಕ್ಯಾಂಟೀನ್ ನಲ್ಲಿ ಉಪಹಾರ ಸೇವಿಸುವುದರ ಜೊತೆಗೆ ಪುರಸಭೆಯ ಸಿಬ್ಬಂದಿಗಳು ಸಹ ದಿನಕ್ಕೆ ಒಂದು ಸಲವಾದರು ಉಪಹಾರ ಸೇವಿಸಬೇಕು. ಅಧಿಕಾರಿಗಳು ಕ್ಯಾಂಟೀನ್ ಜವಾಬ್ದಾರಿ ತೆಗೆದುಕೊಳ್ಳಬೇಕು ಆಗ ಕ್ಯಾಂಟೀನ್ ಶುಚಿ-ರುಚಿ ಮತ್ತು ಸಚ್ಚತೆಯಿಂದ ಕೂಡಿರುತ್ತದೆ ಎಂದರು.
ಮಾಜಿ ಪ್ರಧಾನ ಮಂತ್ರಿ ದಿವಂಗತ ಇಂದಿರಾಗಾಂಧಿಯವರ 109ನೇ ಜನ್ಮ ದಿನಾಚರಣೆ ಅಂಗವಾಗಿ 16 ಇಂದಿರಾ ಕ್ಯಾಂಟೀನ್ಗಳ ಲೋಕಾರ್ಪಣೆ ಮಾಡಿದ್ದು, ಗುಣಮಟ್ಟ ಕಾಯ್ದುಕೊಂಡಿರುವ ಇಂದಿರಾ ಕ್ಯಾಂಟೀನ್ಗಳಿಗೆ ರಾಜ್ಯ ಮಟ್ಟದ “ಅತ್ಯುತ್ತಮ ಇಂದಿರಾ ಕ್ಯಾಂಟೀನ್” ಪ್ರಶಸ್ತಿಯನ್ನು ಇಂದು ವಿತರಿಸಲಾಗಿದೆ ಎಂದರು.
53 ಒಣ ತ್ಯಾಜ್ಯ ಸಂಸ್ಕರಣಾ ಘಟಕ : ಡಾ. ಯತೀಂದ್ರ ಸಿದ್ದರಾಮಯ್ಯ
ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿ ನಗರ ಹಾಗೂ ಪಟ್ಟಣ ಪ್ರದೇಶವನ್ನು ಸ್ವಚ್ಚವಾಗಿಡಲು, ಸುಂದರವಾಗಿಸಲು, ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ 53 ಒಣ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ತೆರಯಲಾಗಿತ್ತಿದೆ ಹಾಗೂ ವಾಹನಗಳನ್ನು ವಿತರಿಸಲಾಗುತ್ತಿದೆ ಎಂದರು.
ಮಾಜಿ ಪ್ರಧಾನ ಮಂತ್ರಿ ದಿವಂಗತ ಇಂದಿರಾಗಾಂಧಿಯವರು ಈ ದೇಶದ ಆರ್ಥಿಕ ಪ್ರಗತಿಗೆ, ಅಭಿವೃದ್ಧಿಗೆ, ಬಡತನ ನಿರ್ಮೂಲನೆಗಾಗಿ ಬಹಳಷ್ಟು ಪ್ರಯತ್ನಪಟ್ಟವರು. ಅದರ ಒಂದು ಭಾಗವಾಗಿ ಇಂದಿರಾ ಕ್ಯಾಂಟೀನ್ ಗಳನ್ನು ತೆರೆದಿದ್ದೇವೆ. ಅವುಗಳು ಸರಿಯಾಗಿ ನಿರ್ವಹಣೆಯಾಗಲು ಅಧಿಕಾರಿಗಳು ನಿಯಮಿತವಾಗಿ ಕ್ಯಾಂಟೀನ್ ಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಸ್ವಚ್ಚತೆ ಇಲ್ಲದ ಕಡೆ ಕ್ರಮ ತೆಗೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ವರ್ಚುಯಲ್ ಮೂಲಕ ರಾಜ್ಯದ ವಿವಿಧ ನಗರಗಳಲ್ಲಿ ನೂತನವಾಗಿ ನಿರ್ಮಿಸಿರುವ 16 ಇಂದಿರಾ ಕ್ಯಾಂಟೀನ್ಗಳ ಹಾಗೂ ಸ್ವಚ್ಚ ಭಾರತ್ ಮಿಷನ್ (ನಗರ)ಯೋಜನೆಯಡಿ ಕಾಮಗಾರಿಗಳು ಹಾಗೂ ಯಂತ್ರೋಪಕರಣಗಳ ಲೋಕಾರ್ಪಣೆ ಮಾಡಿದರು ಹಾಗೂ ರಾಜ್ಯ ಮಟ್ಟದ “ಅತ್ಯುತ್ತಮ ಇಂದಿರಾ ಕ್ಯಾಂಟೀನ್” ಪ್ರಶಸ್ತಿ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಸುಧಾಮ್ ದಾಸ್, ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಶ್ರೀಮತಿ ಬಿ.ಬಿ. ಕಾವೇರಿ, ಸ್ವಚ್ಛ ಭಾರತ್ ಮಿಷನ್ (ನಗರ)ರಾಜ್ಯ ಅಭಿಯಾನ ನಿರ್ದೇಶಕ ಆರ್.ಸೆಲ್ವಮಣಿ, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪಿ.ಎನ್.ರವೀಂದ್ರ, ಪ್ರಶಸ್ತಿ ಪುರಸ್ಕøತರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

