ಲೋಕಾಯುಕ್ತ ಎಸ್.ಪಿ, ಮಹಾಂತೇಶ್ವರ ಎಸ್ ಜಿದ್ದಿ, ಮುಖ್ಯ ಅಭಿಂತರರಾದ ಬಿ.ವಿ. ರಮೇಶ್ ನೇತೃತ್ವದ ಮಾಲೀನ್ಯಕ್ಕೆ ಕಾರಣಗಳು, ಅಧಿಕಾರಿಗಳ ನಿರ್ಲಕ್ಷ್ಯ, ಕೆರೆ ಅಭಿವೃದ್ಧಿ ಪ್ರಾಧಿಕಾರದ ಪಾತ್ರ ಮತ್ತಿತರೆ ವಿಷಯಗಳನ್ನು ಲೋಕಾಯುಕ್ತ ಅಧಿಕಾರಿಗಳು ಕಲೆ ಹಾಕಿದರು.
ಬಳಿಕ ಮಾತನಾಡಿದ ಮುಖ್ಯ ಅಭಿಯಂತರರಾದ ಬಿ.ವಿ. ರಮೇಶ್, ಕೆರೆ ಮಾಲೀನ್ಯ ಸಮಸ್ಯೆ ಕುರಿತು ಖುದ್ದಾಗಿ ಪರಿಶೀಲಿಸಲಾಗಿದೆ. ಈ ಬಗ್ಗೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ವಾಯ್ಸ್ ಆಫ್ ಸದಾಶಿವನಗರ ಸಂಘದ ಸದಸ್ಯರಾದ ಶಿಲ್ಪಾ ಜತ್ತಿ ಮಾತನಾಡಿ, ಕೆರೆ ಒಳಚರಂಡಿ ನೀರು ಹರಿಯುವುದನ್ನು ತಡೆಗಟ್ಟಲು ಬೆಂಗಳೂರು ಜಲಮಂಡಳಿ ಸೂಕ್ತ ರೀತಿಯಲ್ಲಿ ಪ್ರಯತ್ನ ಕೈಗೊಂಡಿದ್ದು, ಇದು ಮತ್ತೆ ಪುನರಾರ್ತನೆಯಾಗಬಾರದು. ಕೆರೆ ಸಂಪೂರ್ಣವಾಗಿ ಕಾಂಕ್ರೀಟೀಕರಣಗೊಳಿಸಿದ್ದು, ಇಲ್ಲಿ ನೀರು ಇಂಗಲು ಸಾಧ್ಯವಾಗದ ಪರಿಸ್ಥಿತಿ ಇದೆ. ಕೆರೆ ಅಭಿವೃದ್ಧಿ ಕುರಿತ ತಜ್ಞರ ತಂಡದ ಅಭಿಪ್ರಾಯ ಪಡೆದು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಕೆರೆ ಪುನಶ್ಚೇತನಕ್ಕೆ ನೂರಾರು ಕೋಟಿ ರೂ ವೆಚ್ಚ ಮಾಡಿದ್ದು, ಕಾಂಕ್ರಿಟೀಕರಣ ಬಿಟ್ಟರೆ ಬೇರೆ ಅಭಿವೃದ್ಧಿಯಾಗಿಲ್ಲ. ಈ ಕಾಮಗಾರಿಯನ್ನು ಯಾರಿಗೆ ವಹಿಸಿದ್ದರೂ ಸಹ ಕಾಮಗಾರಿ ಹಣ ಪಾವತಿ ಮಾಡಬಾರದು. ತನಿಖೆ ನಂತರವೇ ಮುಂದಿನ ಕ್ರಮ ಕೈಗೊಳ್ಳಬೇಕು ಎಂದರು.
ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ ಮಾತನಾಡಿ, ಸ್ಯಾಂಕಿ ಕೆರೆ ಮಲ್ಲೇಶ್ವರಂ, ಯಶವಂತಪುರ, ಹೆಬ್ಬಾಳ ಭಾಗದ ಪ್ರಮುಖ ಜಲ ಮೂಲವಾಗಿದ್ದು, ಕೆರೆ ಉಳಿಸಿದರೆ ಜಲ ಮೂಲ ಉಳಿಸಲು ಸಾಧ್ಯ. ಅವೈಜ್ಞಾನಿಕ ಕಾಮಗಾರಿಯಿಂದ ಮಳೆ ನೀರು ಕೆರೆ ಸೇರುತ್ತಿಲ್ಲ. ಎಲ್ಲಾ ಕಾಲುವೆಗಳು ಮುಚ್ಚಿದ್ದು, ಹೂಳು ತೆಗೆದಿಲ್ಲ. ಹೀಗಾಗಿ ಕೆರೆ ನೀರು ನಿಂತಲ್ಲೇ ಕೊಳೆಯುತ್ತಿದ್ದು, ಈ ಬಗ್ಗೆ ಕೆರೆ ಪ್ರಾಧಿಕಾರದವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಅಭಿಯಾನದ ಸ್ವಯಂ ಸೇವಕ ಡಾ. ಮನು ಮತ್ತಿತರರು ಪಾಲ್ಗೊಂಡಿದ್ದರು.


