ಹಿರಿಯ ನಾಗರಿಕರು, ವಿಕಲಚೇತನರು, ಅನಿವಾಸಿ ಮತದಾರರ ನೋಟೀಸ್ ವಿಲೇವಾರಿಗೆ ಅವಕಾಶ: ಚುನಾವಣಾ ಆಯೋಗ

ಬೆಂಗಳೂರು: ಹಿರಿಯ ನಾಗರಿಕರು, ವಿಕಲಚೇತನರು (PWD), ಅನಾರೋಗ್ಯ ಪೀಡಿತರು ಹಾಗೂ ಅನಿವಾಸಿ (Overseas) ಮತದಾರರಿಗೆ ನೀಡಿರುವ ನೋಟೀಸ್‌ಗಳ ವಿಲೇವಾರಿ ಪ್ರಕ್ರಿಯೆಯನ್ನು ಇನ್ನಷ್ಟು ಸರಳೀಕರಣಗೊಳಿಸಿ ಕರ್ನಾಟಕ ರಾಜ್ಯ(Karnataka State) ಮುಖ್ಯ ಚುನಾವಣಾಧಿಕಾರಿಗಳ ಕಾರ್ಯಾಲಯವು ಆದೇಶ ಹೊರಡಿಸಿದೆ.

ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SIR-2026) ಕಾರ್ಯಕ್ರಮದಡಿಯಲ್ಲಿ ನೀಡಿರುವ ನೋಟೀಸ್‌ಗಳಿಗೆ ಸಂಬಂಧಿಸಿದಂತೆ, ಸದರಿ ಮತದಾರರ ಪರವಾಗಿ ಅವರ ಕುಟುಂಬದ ಯಾವುದೇ ಪ್ರಾಪ್ತವಯಸ್ಕ (Adult) ಸದಸ್ಯರು ಚುನಾವಣಾ ನೋಂದಣಾಧಿಕಾರಿಗಳು (ERO) ಅಥವಾ ಸಹಾಯಕ ಚುನಾವಣಾ ನೋಂದಣಾಧಿಕಾರಿಗಳ (AERO) ಮುಂದೆ ಖುದ್ದಾಗಿ ಹಾಜರಾಗಲು ಆಯೋಗವು ಸಮ್ಮತಿ ನೀಡಿದೆ.

ಪ್ರಮುಖ ಮುಖ್ಯಾಂಶಗಳು:
ಕುಟುಂಬದ ಸದಸ್ಯರ ಹಾಜರಾತಿಗೆ ಅವಕಾಶ:

ಹಿರಿಯ ನಾಗರಿಕರು, ವಿಕಲಚೇತನರು, ರೋಗಿಗಳು ಹಾಗೂ ವಿದೇಶದಲ್ಲಿರುವ ಮತದಾರರು ತಮಗೆ ಬಂದ ನೋಟೀಸ್‌ಗಳಿಗೆ ಉತ್ತರಿಸಲು ಖುದ್ದಾಗಿ ಬರಬೇಕಾದ ಅಗತ್ಯವಿಲ್ಲ. ಅವರ ಪರವಾಗಿ ಕುಟುಂಬದ ಪ್ರಾಪ್ತವಯಸ್ಕ ಸದಸ್ಯರು ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ERO/AERO ಅವರಿಗೆ ಸಲ್ಲಿಸಬಹುದು.

ಪರಿಶೀಲನೆ ಮತ್ತು ವಿಲೇವಾರಿ:
ಸಲ್ಲಿಸಲಾದ ದಾಖಲೆಗಳನ್ನು ಪರಿಶೀಲಿಸಿ ನೋಟೀಸ್‌ಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ವಾರದ ಸಭೆಗಳಲ್ಲಿ ಸ್ಪಷ್ಟನೆ:
ನೋಟೀಸ್ ಜಾರಿಗೊಳಿಸುವ ಮತ್ತು ವಿಲೇವಾರಿ ಮಾಡುವ ಪ್ರಕ್ರಿಯೆಯ ಕುರಿತು ಪ್ರತಿ ವಾರ ನಡೆಯುವ ರಾಜಕೀಯ ಪಕ್ಷಗಳ ಸಭೆಯಲ್ಲಿ ಸ್ಪಷ್ಟ ವಿವರಣೆ ನೀಡುವಂತೆ ERO ಮತ್ತು AERO ಗಳಿಗೆ ನಿರ್ದೇಶಿಸಲಾಗಿದೆ.

ಈ ಕುರಿತು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ಜಿಲ್ಲಾ ಚುನಾವಣಾಧಿಕಾರಿಗಳು, ಉಪ ಆಯುಕ್ತರು ಹಾಗೂ ಇಆರ್‌ಒ/ಎಇಆರ್‌ಒಗಳಿಗೆ ಅಗತ್ಯ ನಿರ್ದೇಶನ ನೀಡಲಾಗಿದೆ ಎಂದು ಜಂಟಿ ಮುಖ್ಯ ಚುನಾವಣಾಧಿಕಾರಿ ಎಸ್. ಯೋಗೇಶ್ವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾವೇರಿ ವಿಚಾರದಲ್ಲಿ ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧ – ಸೋಮವಾರ ಸುಪ್ರೀಂನಲ್ಲಿ ನಿರ್ಣಾಯಕ ಹೋರಾಟ: ಸಚಿವ ಚಲುವರಾಯಸ್ವಾಮಿ

Hot this week

ಪರವಾನಗಿ ಇಲ್ಲದ ಬಂದೂಕು ಶಸ್ತ್ರಾಸ್ತ್ರಗಳನ್ನು ನ. 01 ರೊಳಗೆ ಸರ್ಕಾರಕ್ಕೆ ಒಪ್ಪಿಸಿ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು: ರಾಜ್ಯದ ಜನತೆ ಪರವಾನಗಿ ಇಲ್ಲದೆ ತಮ್ಮಲ್ಲಿ ಅಕ್ರಮವಾಗಿಟ್ಟುಕೊಂಡಿರುವ ಬಂದೂಕು ಶಸ್ತ್ರಾಸ್ತ್ರಗಳನ್ನು(Firearms...

ಯಕ್ಷಗಾನ ಪರಂಪರೆಯ ಸಂರಕ್ಷಣೆಗೆ ಡಿಜಿಟಲ್‌ ಆರ್ಕೈವ್ಸ್‌ ಸ್ಥಾಪಿಸಿ: ಬಿಳಿಮಲೆ ಒತ್ತಾಯ

ಕರಾವಳಿ (Karavali) ಕರ್ನಾಟಕದ ಸಾಂಸ್ಕೃತಿಕ (Cultural) ಅಸ್ಮಿತೆಯ ಪತ್ರೀಕವಾಗಿರುವ ಯಕ್ಷಗಾನ (Yakshagana)...

ಸೆ.15 ರಂದು ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’

ಬೆಂಗಳೂರು: ಕರ್ನಾಟಕ ಸರ್ಕಾರದ(Karnataka Government) ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಬೆಂಗಳೂರಿನ...

Topics

15 ವಾರಗಳ ಜೂ ಕ್ಲಬ್ ಆಯೋಜನೆ

ಬೆಂಗಳೂರು: ಬನ್ನೇರುಘಟ್ಟ(Bannerghatta) ಜೈವಿಕ ಉದ್ಯಾನವನದಲ್ಲಿ ಪ್ರಕೃತಿ, ವನ್ಯಜೀವಿಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು...

ಗಣೇಶ ಚತುರ್ಥಿಯ ಲಾಭ ಹೀಗೆ ಪಡೆಯಿರಿ ! – ಸನಾತನ ಸಂಸ್ಥೆ

ಗಣೇಶೋತ್ಸವದ(Ganesha Festival) ನಿಮಿತ್ತ ನಾವೆಲ್ಲರೂ ಒಂದಾಗುತ್ತೇವೆ. ನಮ್ಮ ಮನೆಗೆ ಗಣಪತಿ ಬರುವವನಿದ್ದಾನೆ...

Related Articles