2026ನೇ ಅಕ್ಟೋಬರ್ 29 ರಂದು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಮಂಡಲಿಯ ಅಧಿಕೃತ ಜಾಲತಾಣವಾದ www.kseeb.karnataka.gov.in ನಲ್ಲಿ ಅಂತಿಮ ವೇಳಾಪಟ್ಟಿಯನ್ನು ವೀಕ್ಷಿಸಬಹುದಾಗಿದೆ.ರಾಜ್ಯದ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ಈ ಅಂತಿಮ ವೇಳಾಪಟ್ಟಿಯನ್ನು ತಮ್ಮ ಶಾಲಾ-ಕಾಲೇಜುಗಳ ಪ್ರಕಟಣಾ ಫಲಕದಲ್ಲಿ (Notice Board) ಕಡ್ಡಾಯವಾಗಿ ಪ್ರಕಟಿಸಿ, ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿ ನೀಡಬೇಕೆಂದು ಕೆ.ಎಸ್.ಇ.ಎ.ಬಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆ.ವಿ.ಎಸ್. ಬೆಂಗಳೂರು ವಿಭಾಗದಿಂದ ಬೃಹತ್ ಇ-ತ್ಯಾಜ್ಯ ಸಂಗ್ರಹಣೆ ಹಾಗೂ ಜವಾಬ್ದಾರಿಯುತ ವಿಲೇವಾರಿ ಅಭಿಯಾನ

