ಕೆ.ವಿ.ಎಸ್. ಬೆಂಗಳೂರು ವಿಭಾಗದಿಂದ ಬೃಹತ್ ಇ-ತ್ಯಾಜ್ಯ ಸಂಗ್ರಹಣೆ ಹಾಗೂ ಜವಾಬ್ದಾರಿಯುತ ವಿಲೇವಾರಿ ಅಭಿಯಾನ

ಬೆಂಗಳೂರು: ಪರಿಸರ ಸುಸ್ಥಿರತೆ ಹಾಗೂ ಕಾಳಜಿಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ಎಂ.ಇ.ಜಿ ಮತ್ತು ಸೆಂಟರ್ (PM SHRI KV MEG & Centre) ನೇತೃತ್ವದಲ್ಲಿ ಅಕ್ಟೋಬರ್ 28, 2026 ರಂದು ‘ಬೃಹತ್ ಇ-ತ್ಯಾಜ್ಯ ಸಂಗ್ರಹಣೆ ಹಾಗೂ ಜವಾಬ್ದಾರಿಯುತ ವಿಲೇವಾರಿ ಅಭಿಯಾನ’ವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಈ ಬೃಹತ್ ಅಭಿಯಾನದಲ್ಲಿ ಬೆಂಗಳೂರಿನ ಪ್ರಮುಖ ಒಂಬತ್ತು ಕೇಂದ್ರೀಯ ವಿದ್ಯಾಲಯಗಳಾದ ಕೆ.ವಿ. ಆರ್‌ಡಬ್ಲ್ಯೂಎಫ್ ಯಲಹಂಕ, ಕೆ.ವಿ. ಸಿಆರ್‌ಪಿಎಫ್ ಯಲಹಂಕ, ಕೆ.ವಿ. ಡಿಆರ್‌ಡಿಒ, ಕೆ.ವಿ. ಮಲ್ಲೇಶ್ವರಂ, ಕೆ.ವಿ. ಎನ್‌ಎಎಲ್, ಪಿಎಂ ಶ್ರೀ ಕೆ.ವಿ. ಹೆಬ್ಬಾಳ, ಕೆ.ವಿ. ನಂ. 1 ಜಾಲಹಳ್ಳಿ ಮತ್ತು ಪಿಎಂ ಶ್ರೀ ಕೆ.ವಿ. ನಂ. 2 ಎಎಫ್‌ಎಸ್ ಜಾಲಹಳ್ಳಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸಿದ್ದರು.

ಅರಿವು ಮೂಡಿಸಿದ ವಿದ್ಯಾರ್ಥಿ ರಾಯಭಾರಿಗಳು:

ಅಭಿಯಾನದ ಅಂಗವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿದ್ಯಾರ್ಥಿ ಪರಿಸರ ರಾಯಭಾರಿಗಳು ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಬೀದಿ ನಾಟಕ (ನುಕ್ಕಡ್ ನಾಟಕ್), ಕಿರುನಾಟಕ, ಜಾಗೃತಿ ವೀಡಿಯೊಗಳು, ಇ-ಪೋಸ್ಟರ್‌ಗಳು ಹಾಗೂ ಬ್ಯಾನರ್‌ಗಳ ಮೂಲಕ ಇ-ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಯ ಅಗತ್ಯತೆ ಮತ್ತು ಅನುಚಿತ ವಿಲೇವಾರಿಯಿಂದ ಉಂಟಾಗುವ ಆಪತ್ತುಗಳ ಬಗ್ಗೆ ಕುಟುಂಬಸ್ಥರು, ಶಾಲಾ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಿದರು.

ಈ ಜಾಗೃತಿ ಅಭಿಯಾನವನ್ನು ಕೆ.ವಿ.ಎಸ್. ಬೆಂಗಳೂರು ಪ್ರಾದೇಶಿಕ ಕಚೇರಿಯ ಸಹಾಯಕ ಆಯುಕ್ತರಾದ ಶ್ರೀ ಗಣೇಶ್ ಎಸ್. ಇಂದ್ರಾಳೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ಅಧಿಕಾರಿ ಶ್ರೀಮತಿ ವಿಜಯಲಕ್ಷ್ಮಿ ಅವರು ಜಂಟಿಯಾಗಿ ಉದ್ಘಾಟಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶ್ರೀ ಗಣೇಶ್ ಇಂದ್ರಾಳೆ ಅವರು, “ವಿದ್ಯಾರ್ಥಿ ದೆಸೆಯಲ್ಲೇ ಇ-ತ್ಯಾಜ್ಯ ನಿರ್ವಹಣೆಯ ಉತ್ತಮ ಅಭ್ಯಾಸಗಳನ್ನು ಬೆಳೆಸುವುದು ಅತ್ಯಗತ್ಯ” ಎಂದು ಹೇಳಿದರು. ನಂತರ ಶ್ರೀಮತಿ ವಿಜಯಲಕ್ಷ್ಮಿ ಅವರು, “ನಮಗೆ ಇರುವುದು ಒಂದೇ ಭೂಮಿ, ವಿಷಕಾರಿ ಸೀಸ ಮತ್ತು ಭಾರಲೋಹಗಳಿಂದ ನಮ್ಮ ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ಯುವಜನತೆಯ ಕರ್ತವ್ಯ” ಎಂದು ಕರೆ ನೀಡಿದರು.

Hot this week

’ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ‘ಪಾಂಚಜನ್ಯ ಗುರುಶ್ರೇಷ್ಠ ಪುರಸ್ಕಾರ–2026′

ಎರಡು ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ; ನಾಮನಿರ್ದೇಶನ ಸಲ್ಲಿಸಲು ನವೆಂಬರ್ 20 ಕೊನೆಯ...

ಬೆಂಗಳೂರಿನಲ್ಲಿ ೧೫ ರಂದು `ಜೋಳರಾಜನ ಕಥೆ’ ಕೃತಿ ಜನಾರ್ಪಣೆ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ (Kannada Sahitya Academy) ಮಾಜಿ ಸದಸ್ಯ...

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನವನ್ನು ಅಧಿಕೃತವಾಗಿ ಅಂತ್ಯಗೊಳಿಸದೆ ದಾಖಲೆಯ 88 ದಿನಗಳ...

ಬೆಂಗಳೂರು: ಕರ್ನಾಟಕ ಸರ್ಕಾರವು(Karnataka Government) ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ  ನವೆಂಬರ್...

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಕೃಷಿ ನಾವಿನ್ಯತೆಗಳು ಹಾಗೂ ಬರ...

Topics

ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಭಾರತದ ಪ್ರಥಮ ಶಿಕ್ಷಣ ಸಚಿವರಾದ...

ಇ-20 ಎಥನಾಲ್ ಪ್ರಮಾಣ ಪರೀಕ್ಷೆ – ಕರ್ನಾಟಕ ಸರ್ಕಾರವು ಗ್ರಾಹಕರ ಹಿತರಕ್ಷಣೆಗೆ ಬದ್ಧ : ಸಚಿವ ರಿಜ್ವಾನ್ ಅರ್ಷದ್ 

ಬೆಂಗಳೂರು: ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣಕ್ಕೆ (E20) ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಪರೀಕ್ಷಾ...

ಬೆಂಗಳೂರು: ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಕಾಮನ್ವೆಲ್ತ್ ಮಹಿಳಾ ಸಂಸದೀಯರ ಭಾರತ...

Related Articles