’ಸಂಪತ್ತಿಗೆ ಸವಾಲ್’ (Sampathige Saval) ನಾಟಕ ಮುಂದೆ ಅದೇ ಹೆಸರಿನಲ್ಲಿ ಡಾ.ರಾಜ್‌ಕುಮಾರ್, (Dr. Rajkumar) ಮಂಜುಳಾ, (Manjula) ವಜ್ರಮುನಿ (Vajramuni) ಅಭಿನಯದಲ್ಲಿ ಸಿನಿಮಾ ಆಗಿ ಗಳಿಕೆಯಲ್ಲಿ ದಾಖಲೆ ಮಾಡಿತ್ತು. ಅದೇ ಮಾದರಿಯಲ್ಲಿ ’ಇರು ದಾಸಯ್ಯ ಬರ‍್ಲಿ’ ಎಂಬ ಯಶಸ್ವಿ ನಾಟಕ ಈಗ ಚಿತ್ರರೂಪದಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಧ್ರುವಿತಾ ಕ್ರಿಯೇಶನ್ಸ್ ಬ್ಯಾನರ್ (Dhruvitha Creations banner)ಅಡಿಯಲ್ಲಿ ಧ್ರುವಿತಾ ಮಧುಚಂದ್ರ ನಿರ್ಮಾಣ ಮಾಡಿರುವುದು ಹೊಸ ಅನುಭವ. ನಂದಕುಮಾರ್.ಸಿ ಛಾಯಾಗ್ರಹಣ ಮತ್ತು ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದರೆ. ದಾಸಯ್ಯನ ಪಾತ್ರಧಾರಿ ವಿಜಯ್ ಚೆಂಡೂರು, ಸಂಗೀತ ಸಂಯೋಜಕ ಬಿ.ಆರ್.ಹೇಮಂತ್ ಕುಮಾರ್ ಮತ್ತು ಸಂಕಲನ ದೀಪು.ಸಿ.ಎಸ್ ಹೊರತುಪಡಿಸಿ ಕಲಾವಿದರು ಹಾಗೂ ತಂತ್ರಜ್ಘರು ಎಲ್ಲರೂ ಹೆಚ್‌ಎಎಲ್ ನೌಕರರು ಎಂಬುದು ವಿಶೇಷ. ಪ್ರಚಾರದ ಮೊದಲ ಹಂತವಾಗಿ ಟ್ರೇಲರ್ ಬಿಡುಗಡೆ ಸಮಾರಂಭ ಮೊನ್ನೆಯಷ್ಟೇ ನಡೆಯಿತು.
ಬೇರೆ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರಿಂದ ವಿಜಯ್ ಚೆಂಡೂರ್ ಗೈರು ಹಾಜರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ನೂರಕ್ಕೂ ಹೆಚ್ಚು ಪ್ರದರ್ಶನ ಕಂಡ ’ಇರು ದಾಸಯ್ಯ ಬರ‍್ಲಿ’ ನಾಟಕವನ್ನು ಸಿನಿಮಾಟಿಕ್ ಆಗಿ ತೋರಿಸಲಾಗಿದೆ. ಮೈಸೂರು ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಇಂದು ಚಾಲ್ತಿಯಲ್ಲಿರುವ ಪಿಂಡ ಪ್ರಧಾನ ಸಮಯದಲಿ, ದಾಸಯ್ಯ ಮನೆಗೆ ಬಂದು ಪೂಜೆ ಮಾಡಿದರೆ ಮಾತ್ರ ಎಲ್ಲರೂ ಊಟ ಮಾಡುವ ಪದ್ದತಿ ರೂಢಿಯಲ್ಲಿದೆ. ಆದರೆ ಊರಿನಲ್ಲಿ ಇರುವುದು ಒಬ್ಬರೆ ದಾಸಯ್ಯ. ಇವರು ಅಂದು ಎಲ್ಲಾ ಮನೆಗೆ ಭೇಟಿ ನೀಡಿ ಬರುವುದು ತಡವಾಗುತ್ತದೆ. ಇಂತಹ ಸಮಯದಲ್ಲಿ ಅಲ್ಲಿ ನಡೆಯುವಂತ ಸ್ವಾರಸ್ಯಕರ ಹಾಸ್ಯ ಘಟನೆಗಳು, ಅಲ್ಲಿನ ಸಂಪ್ರದಾಯ, ಆಚರಣೆ, ಸೊಗಡು, ಹೇಗೆ ಪೂಜೆ ಮಾಡ್ತಾರೆ ಎಲ್ಲವನ್ನು ತಿಳಿಸುವಂತ ಪ್ರಯತ್ನ ಮಾಡಲಾಗಿದೆ. ಸದ್ಯದಲ್ಲೆ ಸೆನ್ಸಾರ್‌ಗೆ ಹೋಗಲಿದೆ ಎಂದು ನಂದಕುಮಾರ್.ಸಿ ಮಾಹಿತಿ ತೆರೆದಿಟ್ಟರು.
ಕಥೆ ಪುಟ್ಟಸೀಗನಾಯಕ.ಪಿ.ಎಸ್, ಚಿತ್ರಕಥೆ-ಸಾಹಿತ್ಯ ರಂಗೋಲಿ ವಿಜಿ, ಸಂಭಾಷಣೆ ಗಂಗಾಚಾರಿ ಅವರದಾಗಿದೆ. ರಾಮನಗರ, ಕನಕಪುರ, ಕೂಲೂರು ಸ್ಥಳಗಳಲ್ಲಿ ೧೦ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

