’ಶಂಕರ್ ಗುರು’ ಚಿತ್ರದಲ್ಲಿ(Shankar Guru Film) ಡಾ,ರಾಜ್‌ಕುಮಾರ್(Actor Dr.Rajkumar) ಹಾಡಿದ ’ಲವ್‌ಮಿ ಆರ್ ಹೇಟ್ ಮಿ, ಕಿಸ್‌ಮಿ ಆರ್ ಕಿಲ್‌ಮಿ’ ಸಾಲಿನಲ್ಲಿ ’ಕಿಸ್ ಮಿ’ ಪದವನ್ನು ಸಿನಿಮಾದ ಶೀರ್ಷಿಕೆಯಾಗಿ ಬಳಸಲಾಗಿದೆ. ಅನಂತಪದ್ಮನಾಭ ದಿನದಂದು ಉಡುಪಿಯಲ್ಲಿ 1400 ವರ್ಷದ ಸನಾತನ ಇತಿಹಾಸ ಇರುವ ಶ್ರೀ ಶಂಭು ಶೈಲೇಶ್ವರ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು. ’ರಾಧನಾ ನನ್ನ ಬಿಟ್ಟು ನಿನಗೆ ಜೀವನದಲ್ಲಿ ಯಾರು ಇರಬಾರದು. ನೀನು ನನಗೆ ಸ್ವಂತ’ ಎಂಬ ಡೈಲಾಗ್‌ನ್ನು ಆತ ಆಕೆಗೆ ಹೇಳುವ ಮೊದಲ ದೃಶ್ಯಕ್ಕೆ ಎಸಿಪಿ ಲೋಕೇಶ್ ಕ್ಲಾಪ್ ಮಾಡಿದರೆ, ನಿವೃತ ಡಿಸಿಪಿ ಹಾಗೂ ಅಂತರರಾಷ್ಟ್ರೀಯ ಬಾಡಿ ಬಿಲ್ಡರ್ ವಾಲೆಂಟೈನ್ ಡಿಸೋಜ ಕ್ಯಾಮಾರ ಆನ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ನಂದಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮೋಹಿಗಳಾದ ಎಂ.ಶಂಕರ್‌ಪ್ರಭು, ಎಂ.ಸಿ.ಎಂ.ಆರಾಧ್ಯ, ರಾಮು ಮತ್ತು ಹಿರಿಯ ವಿತರಕ ರಾಮಚಂದ್ರ ಕುಲಕರ್ಣಿ ಜಂಟಿಯಾಗಿ ಬಂಡವಾಳ ಹೂಡುತ್ತಿರುವುದು ಹೊಸ ಅನುಭವ. ರವಿಬಾಸರ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ’ಪ್ರೀತಿಯಿಂದ ಮಾಡಿದ ಹಾರೈಕೆ’ ಎಂಬ ಅಡಿಬರಹ ಇಂಗ್ಲೀಷ್‌ದಲ್ಲಿದೆ.
ನಂತರ ಮಾತನಾಡಿದ ನಿರ್ದೇಶಕರು, ಕಿಸ್‌ಮಿ ಅಂದರೆ ಎಲ್ಲರಿಗೂ ಲವ್ ಅಂದುಕೊಳ್ಳುವುದುಂಟು. ಆದರೆ ಕಿಸ್‌ಮಿದಲ್ಲಿ ಹಲವು ಭಾವನೆಗಳು ಬರುತ್ತದೆ. ತಾಯಿ ಮಗನಿಗೆ ಕೊಡೋ ಮುದ್ದಿನ ಕಿಸ್, ಹುಡುಗ ಹುಡುಗಿಯನ್ನು ಅಪ್ಪಿಕೊಂಡು ಕೊಡುವ ಖುಷಿಯ ಕಿಸ್, ಅಜ್ಜಿ ಮೊಮ್ಮಗನಿಗೆ ಹರಸುತ್ತಾ ಕೊಡುವ ಅಭಿಮಾನದ ಕಿಸ್. ಬದುಕಲ್ಲಿ ಯಾವ ಕಿಸ್ ಮಹತ್ವ ಅನ್ನೋದು ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಮಿಕ್ಕಂತೆ ಚಿತ್ರದ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದೆಂದು ರವಿ ಬಾಸರ ಕುತೂಹಲ ಕಾಯ್ದಿರಿಸಿದರು.
’ಡೆಡ್ಲಿ ಕಿಲ್ಲರ್’ ಖ್ಯಾತಿ ಅಭಯ್‌ವೀರ್ ನಾಯಕ. ಪ್ರತಿಷ್ಠಿತ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವಸಲ್ಲಿಸುತ್ತಿರುವ ಡಾ.ರಾಧನ ಆನಂದ್ ನಾಯಕಿಯಾಗಿ ಬಣ್ಣದಲೋಕಕ್ಕೆ ಪರಿಚಯವಾಗುತ್ತಿದ್ದಾರೆ. ಇವರೊಂದಿಗೆ ಸಂದೀಪ್ ಶೆಟ್ಟಿಗಾರ್, ಯು.ಕೆ.ಭಾಸ್ಕರ್ ಮುಂತಾದವರು ನಟಿಸುತ್ತಿದ್ದಾರೆ.
ನಾಲ್ಕು ಹಾಡುಗಳಿಗೆ ಕೌಶಿಕ್ ಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಬಾಲಗಣೇಶನ್, ಸಂಕಲನ ಲಕ್ಕಿ, ಪ್ರಸಾದನ ರಮೇಶ್ ಬಾಬು ಅವರದಾಗಿದೆ. ಉಡುಪಿ, ಮಡಕೇರಿ ಸುಂದರ ತಾಣಗಳಲ್ಲಿ ಹದಿನೈದು ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

