ಮಾರ್ಚ್ ಅಂತ್ಯದೊಳಗೆ 6,000 ಜಲಮಂಡಳಿ ಕೊಳವೆಬಾವಿಗಳಿಗೆ ಐಒಟಿ ಸಾಧನ ಅಳವಡಿಕೆ

ನೀರಿನ ಆಳ, ನೀರೆತ್ತುವಿಕೆ ಮತ್ತು ಪಂಪ್ ಕಾರ್ಯಾವಧಿಯ ರಿಯಲ್‌ಟೈಮ್ ಮಾಹಿತಿ
ಎರಡು ಡ್ಯಾಶ್‌ಬೋರ್ಡ್‌ಗಳ ಮೂಲಕ ನಿಗಾ; SCADA ವ್ಯವಸ್ಥೆಯೊಂದಿಗೂ ಸಂಯೋಜನೆ
ಮೋಟಾರ್ ಹಾನಿ, ಅನಗತ್ಯ ವಿದ್ಯುತ್ ಬಳಕೆ ಮತ್ತು ನಿರ್ವಹಣಾ ವೆಚ್ಚ ಕಡಿತದ ಗುರಿ
ಬೆಂಗಳೂರು: ಬೆಂಗಳೂರು ಜಲಮಂಡಳಿಯ ಕೊಳವೆಬಾವಿಗಳ ನಿರ್ವಹಣೆಯನ್ನು ಹೆಚ್ಚು ವೈಜ್ಞಾನಿಕ ಮತ್ತು ದತ್ತಾಂಶ ಆಧಾರಿತವಾಗಿಸುವ ನಿಟ್ಟಿನಲ್ಲಿ, ಮುಂದಿನ ಮಾರ್ಚ್ ಅಂತ್ಯದೊಳಗೆ 6,000 ಕೊಳವೆಬಾವಿಗಳಿಗೆ ಐಒಟಿ (Internet of Things) ಸಾಧನಗಳನ್ನು ಅಳವಡಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷೆ ಡಾ. ಎನ್. ಮಂಜುಳ, ಐಎಎಸ್(Dr.N.Manjula – IPS) ತಿಳಿಸಿದ್ದಾರೆ.
ಜಲಮಂಡಳಿ ವ್ಯಾಪ್ತಿಯ ಸುಮಾರು 16 ಸಾವಿರ ಕೊಳವೆಬಾವಿಗಳಲ್ಲಿ ಈಗಾಗಲೇ 1,800 ಕೊಳವೆಬಾವಿಗಳಿಗೆ ಐಒಟಿ ಸಾಧನಗಳನ್ನು ಅಳವಡಿಸಲಾಗಿದೆ. ಇವುಗಳ ಮೂಲಕ ಕೊಳವೆಬಾವಿಯಲ್ಲಿನ ನೀರಿನ ಆಳ, ನೀರೆತ್ತುವಿಕೆಯ ಪ್ರಮಾಣ ಹಾಗೂ ಪಂಪ್ ಕಾರ್ಯನಿರ್ವಹಿಸುವ ಅವಧಿಯಂತಹ ಪ್ರಮುಖ ಮಾಹಿತಿಯನ್ನು ರಿಯಲ್‌ಟೈಮ್‌ನಲ್ಲಿ ದಾಖಲಿಸಿ ಕೇಂದ್ರ ವ್ಯವಸ್ಥೆಗೆ ರವಾನಿಸಲಾಗುತ್ತಿದೆ.
ಈ ಮಾಹಿತಿಯನ್ನು ಎರಡು ಪ್ರತ್ಯೇಕ ಡ್ಯಾಶ್‌ಬೋರ್ಡ್‌ಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಮುಂದಿನ ಹಂತದಲ್ಲಿ ಈ ವ್ಯವಸ್ಥೆಯನ್ನು SCADA ವ್ಯವಸ್ಥೆಯೊಂದಿಗೂ ಸಂಯೋಜಿಸುವ ಮೂಲಕ ಕೊಳವೆಬಾವಿಗಳ ಕಾರ್ಯನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿಗಾ ವಹಿಸುವ ಉದ್ದೇಶ ಹೊಂದಲಾಗಿದೆ.
“ನೀರಿಲ್ಲದ ಸಂದರ್ಭದಲ್ಲೂ ಮೋಟಾರ್‌ಗಳನ್ನು ನಿರಂತರವಾಗಿ ಓಡಿಸುವುದು, ಪಂಪ್‌ಸೆಟ್‌ಗಳನ್ನು ಅಗತ್ಯಕ್ಕಿಂತ ಹೆಚ್ಚು ಸಮಯ ಬಳಸುವುದು ಹಾಗೂ ಸಮಸ್ಯೆಗಳನ್ನು ತಡವಾಗಿ ಗುರುತಿಸುವುದರಿಂದ ಕೊಳವೆಬಾವಿಗಳು ಪದೇಪದೇ ತಾಂತ್ರಿಕ ದೋಷಕ್ಕೆ ಒಳಗಾಗುತ್ತಿವೆ. ಐಒಟಿ ಆಧಾರಿತ ಮೇಲ್ವಿಚಾರಣೆಯಿಂದ ಸಮಸ್ಯೆಯನ್ನು ಮುಂಚಿತವಾಗಿಯೇ ಗುರುತಿಸಿ, ತಾಂತ್ರಿಕ ಹಾನಿ ಮತ್ತು ಅನಗತ್ಯ ವೆಚ್ಚವನ್ನು ಕಡಿಮೆ ಮಾಡಬಹುದು,” ಎಂದು ತಿಳಿಸಿದ್ದಾರೆ.
ಐಒಟಿ ಸಾಧನಗಳ ಅಳವಡಿಕೆಯಿಂದ ನೀರಿನ ಲಭ್ಯತೆ ಕಡಿಮೆಯಾಗುತ್ತಿರುವ ಕೊಳವೆಬಾವಿಗಳನ್ನು ಗುರುತಿಸುವುದು, ಮೋಟಾರ್‌ಗಳ ಅನಗತ್ಯ ಕಾರ್ಯಾಚರಣೆಯನ್ನು ತಡೆಯುವುದು, ಪದೇಪದೇ ಮೋಟಾರ್ ಸುಡುವಂತಹ ತಾಂತ್ರಿಕ ಸಮಸ್ಯೆಗಳನ್ನು ಕಡಿಮೆ ಮಾಡುವುದು ಹಾಗೂ ನಿರ್ವಹಣಾ ವೆಚ್ಚವನ್ನು ನಿಯಂತ್ರಿಸುವುದು ಸಾಧ್ಯವಾಗಲಿದೆ.
ಇದರ ಜೊತೆಗೆ, ವಿವಿಧ ಪ್ರದೇಶಗಳಲ್ಲಿನ ಕೊಳವೆಬಾವಿಗಳ ನೀರಿನ ಮಟ್ಟ ಮತ್ತು ಬಳಕೆಯ ಮಾದರಿಯ ಕುರಿತು ನಿರಂತರ ದತ್ತಾಂಶ ಲಭ್ಯವಾಗುವುದರಿಂದ ಅಂತರ್ಜಲದ ಸ್ಥಿತಿಯನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಂಡು, ಸುಸ್ಥಿರ ಬಳಕೆಗೆ ಅಗತ್ಯ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ.
ಉಳಿದ ಕೊಳವೆಬಾವಿಗಳಿಗೆ ಐಓಟಿ ಸಾಧನಗಳನ್ನು ಅಳವಡಿಸುವ ಕಾರ್ಯವನ್ನು ಹಂತಹಂತವಾಗಿ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.

Hot this week

BIG NEWS :MUMBAI TOLL : ಮುಂಬೈ ಟೋಲ್ ದರಗಳಲ್ಲಿ ಶೇ.20ರಷ್ಟು ಏರಿಕೆ

ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1,...

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

Topics

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

ರಾಮರಸದಲ್ಲಿ ಆದಾಶರ್ಮಾ ದುರ್ಗಿ ರೋಲ್

ಗುರುದೇಶಪಾಂಡೆ ಒಡೆತನದ ’ಜಿ ಅಕಾಡೆಮಿ’ಯಲ್ಲಿ(Zee Academy) ನಟನೆ ಕಲಿತಿರುವ ಪ್ರತಿಭೆಗಳಿಗೆ ಅವಕಾಶ...

Related Articles