ಅಂತಾರಾಷ್ಟ್ರೀಯ ನಿಷೇಧಿತ ಮಾದಕ ದ್ರವ್ಯ ಕಳ್ಳಸಾಗಣೆ ಜಾಲ ಭೇದಿಸಿದ ಪೊಲೀಸರು.
05 ವಿದೇಶೀಯರು ಸೇರಿದಂತೆ 8 ಮಂದಿ ಬಂಧನ
₹ 30.43 ಕೋಟಿ ಮೌಲ್ಯದ ಮಾದಕಗಳ ವಶ
ಹೆಬ್ಬಾಳ ಪೊಲೀಸ್ ಠಾಣೆ:
ಹೆಬ್ಬಾಳ ಪೊಲೀಸ್ ಠಾಣೆಯ ಎನ್ಡಿಪಿಎಸ್ ಕಾಯ್ದೆಯಡಿಯಲ್ಲಿ ಈಗಾಗಲೇ ಪ್ರಕರಣ ದಾಖಲು ಮಾಡಿದ್ದು, 03 ವಿದೇಶೀಯರು ಸೇರಿ ಒಟ್ಟು 08 ಜನ ಆರೋಪಿತರನ್ನು ದಸ್ತಗಿರಿಪಡಿಸಿ ₹ 17 ಕೋಟಿ ಮೌಲ್ಯದ (ಮಾರುಕಟ್ಟೆ ಮೌಲ್ಯ ₹ 34 ಕೋಟಿ ) 17 ಕೆಜಿ 400 ಗ್ರಾಂ ಎಂಡಿಎಂಎ ನಿಷೇಧಿತ ಮಾದಕ ವಸ್ತುವನ್ನು ವಶಪಡಿಸಿಕೊಂಡು, ತನಿಖೆಯನ್ನು ಮುಂದುವರೆಸಿ ಕಳೆದ 15 ದಿವಸಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿತರ ಪತ್ತೆಗಾಗಿ 5 ವಿಶೇಷ ತಂಡಗಳನ್ನು ರಚಿಸಿ, ಚಂಡಿಗಡ್, ನವದೆಹಲಿ ಮತ್ತು ಬೆಂಗಳೂರು ನಗರದಲ್ಲಿ ಕಾರ್ಯಾಚರಣೆ ನಡೆಸಿ, ನವದೆಹಲಿಯಲ್ಲಿ ವಾಸವಾಗಿರುವ ಹೊರ ದೇಶದ ಪ್ರಜೆ, ಬೆಂಗಳೂರು ನಗರದಲ್ಲಿ ಮಣಿಪುರ ರಾಜ್ಯದ ಮಹಿಳೆ ಮತ್ತು ಇಬ್ಬರು ಸ್ಥಳೀಯರನ್ನು ದಸ್ತಗಿರಿ ಮಾಡಿ, ಆರೋಪಿಗಳ ವಶದಿಂದ ₹ 17.28 ಕೋಟಿ ಮೌಲ್ಯದ (ಮಾರುಕಟ್ಟೆ ಮೌಲ್ಯ ₹ 34.56 ಕೋಟಿ) 17 ಕೆಜಿ 282 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಯಿತು. ಈ ಕಾರ್ಯಾಚರಣೆಯಲ್ಲಿ 30 ಜನ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಿಸಿರುತ್ತಾರೆ.
ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳ:
ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳ ಅಧಿಕಾರಿ/ಸಿಬ್ಬಂದಿಯವರುಗಳಿಗೆ ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವುದಾಗಿ ಭಾತ್ಮೀದಾರರಿಂದ ಖಚಿತ ಮಾಹಿತಿ ದೊರೆತ್ತಿರುತ್ತದೆ. ಈ ಮಾಹಿತಿಯನ್ನಾಧಾರಿಸಿ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ, ಕಳೆದ 10 ದಿನಗಳಿಂದ ಭಾತ್ಮೀದಾರರಿಂದ ಮಾಹಿತಿಯನ್ನು ಸಂಗ್ರಹಿಸಿ, ಬಾತ್ಮೀಧಾರರು ತಿಳಿಸಿದ ಸ್ಥಳದ ಮೇಲೆ ದಾಳಿ ಮಾಡಿ, ಮೂವರು ವಿದೇಶಿ ವ್ಯಕ್ತಿಗಳು, ಓರ್ವ ಸ್ಥಳೀಯ ವ್ಯಕ್ತಿ ಸೇರಿದಂತೆ 04 ವ್ಯಕ್ತಿಗಳನ್ನು ವಶಕ್ಕೆ ಪಡೆದು ಅವರುಗಳ ವಶದಲ್ಲಿದ್ದ 06 ಕೆಜಿ 718 ಗ್ರಾಂ ಎಂಡಿಎAಎ, 20 ಗ್ರಾಂ ಕೋಕೇನ್ ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ. ಇದರ ಒಟ್ಟು ಮೌಲ್ಯ ₹ 7.15 ಕೋಟಿ (ಮಾರುಕಟ್ಟೆ ಮೌಲ್ಯ ₹ 14.30 ಕೋಟಿ). ನಾಲ್ವರು ವ್ಯಕ್ತಿಗಳು ದೆಹಲಿ ಮೂಲದ ವ್ಯಕ್ತಿಯಿಂದ ನಿಷೇಧಿತ ಮಾದಕ ವಸ್ತುವನ್ನು ಖರೀದಿ ಮಾಡಿಕೊಂಡು ಬಂದು, ಸ್ಥಳಿಯ ಪೆಡ್ಲರ್ಗಳಿಗೆ ಮಾರಾಟ ಮಾಡುತ್ತಿದ್ದುದ್ದಾಗಿ ತನಿಖೆಯಿಂದ ಕಂಡುಬAದಿರುತ್ತದೆ. ವಶಪಡಿಸಿಕೊಂಡಿರುವ ನಿಷೇಧಿತ ಮಾದಕ ವಸ್ತು ಎಂಡಿಎAಎ ಯನ್ನು ನವದೆಹಲಿಯಲ್ಲಿ ವಾಸವಾಗಿರುವ ಹೊರ ದೇಶದ ಪ್ರಜೆಯು ಬೆಂಗಳೂರು ನಗರಕ್ಕೆ ತಂದು ನಗರದಾದ್ಯಂತ ಅಕ್ರಮ ಮಾರಾಟದಲ್ಲಿ ತೊಡಗಿರುತ್ತಾನೆ. ಈ ಕಾರ್ಯಾಚರಣೆಯಲ್ಲಿ 15 ಜನ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಿಸಿರುತ್ತಾರೆ.
ಗಿರಿನಗರ ಪೊಲೀಸ್ ಠಾಣೆ:
ಗಿರಿನಗರ ಪೊಲೀಸ್ ಠಾಣೆಯ ಅಧಿಕಾರಿ/ಸಿಬ್ಬಂದಿಯವರುಗಳಿಗೆ ಠಾಣಾ ಸರಹದ್ದಿನಲ್ಲಿ ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವುದಾಗಿ ಕಳೆದ 10 ದಿನಗಳಿಂದ ಭಾತ್ಮೀದಾರರಿಂದ ಮಾಹಿತಿಯನ್ನು ಸಂಗ್ರಹಿಸಿ, ಈ ಮಾಹಿತಿಯನ್ನಾಧಾರಿಸಿ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಭಾತ್ಮೀದಾರರು ತಿಳಿಸಿದ ಸ್ಥಳದ ಮೇಲೆ ದಾಳಿ ಮಾಡಿ, ಓರ್ವ ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ 05 ಕೆಜಿ ಎಂಡಿಎಂಎ ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ. ಇದರ ಮೌಲ್ಯ ₹ 5 ಕೋಟಿ . ವಶಪಡಿಸಿಕೊಂಡಿರುವ ನಿಷೇಧಿತ ಮಾದಕ ವಸ್ತು ಎಂಡಿಎಂಎಯನ್ನು ನವದೆಹಲಿಯಲ್ಲಿ ವಾಸವಾಗಿರುವ ಹೊರ ದೇಶದ ಪ್ರಜೆಯು ಬೆಂಗಳೂರು ನಗರದ ಸ್ಥಳೀಯ ಆರೋಪಿತರ ಮುಖಾಂತರ ಬೆಂಗಳೂರು ನಗರದಾದ್ಯಂತ ಅಕ್ರಮ ಮಾರಾಟದಲ್ಲಿ ತೊಡಗಿಸಿಕೊಂಡಿರುತ್ತಾನೆ. ಈ ಯಶಸ್ವಿ ಕಾರ್ಯಾಚರಣೆಯಲ್ಲಿ 20 ಜನ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಿಸಿರುತ್ತಾರೆ.
ವಶಪಡಿಸಿಕೊಂಡ ನಿಷೇಧಿತ ಮಾದಕ ವಸ್ತುಗಳು :

2026ನೇ ಸಾಲಿನಲ್ಲಿ ಬೆಂಗಳೂರು ನಗರ ಪೊಲೀಸ್ ವತಿಯಿಂದ ಒಟ್ಟು 2936 ಪ್ರಕರಣಗಳನ್ನು ದಾಖಲಿಸಿ, 3840 ಹೊರರಾಜ್ಯ ಮತ್ತು ಬೆಂಗಳೂರು ನಗರದ ಆರೋಪಿತರನ್ನು ಹಾಗೂ 37 ಜನ ವಿದೇಶಿಯರನ್ನು ದಸ್ತಗಿರಿ ಮಾಡಿ, ₹ 221.27 ಕೋಟಿ ಮೌಲ್ಯದ (ಮಾರುಕಟ್ಟೆ ಮೌಲ್ಯ ₹ 322.92 ಕೋಟಿ) ಒಟ್ಟು 1415.274 ಕೆ.ಜಿ ಯ ವಿವಿಧ ಮಾದರಿಯ ನಿಷೇಧಿತ ಮಾದಕ ವಸ್ತುಗಳ ವಶಪಡಿಸಿಕೊಳ್ಳಲಾಗಿರುತ್ತದೆ.
3-06-2026 ರಿಂದ 09-07-2026 ರವರೆಗೆ ಕಳೆದ ಸುಮಾರು ಒಂದು ತಿಂಗಳ ಅವಧಿಯಲ್ಲಿ 565 ಪ್ರಕರಣಗಳನ್ನು ದಾಖಲಿಸಿ 729 ಭಾರತೀಯ ಹಾಗೂ 11 ಜನ ವಿದೇಶಿಯರನ್ನು ದಸ್ತಗಿರಿ ಮಾಡಿ, ₹ 50.43 ಕೋಟಿ ಮೌಲ್ಯದ (ಮಾರುಕಟ್ಟೆ ಮೌಲ್ಯ ₹ 92.86 ಕೋಟಿ) 205.566 ಕೆ.ಜಿ ಯ ವಿವಿಧ ಮಾದರಿಯ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
1-7-2026 ರಿಂದ 9-07-2026 ರ ಅವಧಿಯಲ್ಲಿ ಕೈಗೊಂಡ ಮಾದಕವಸ್ತು ಬೇಡ ಅಂತ ಹೇಳೋಣ ಮತ್ತು ರೈಸ್ ಅಭಿಯಾನದ ನಂತರ 135 ಪ್ರಕರಣ ದಾಖಲಿಸಿ, 156 ಭಾರತೀಯ ಹಾಗೂ 05 ಜನ ವಿದೇಶಿಯರನ್ನು ದಸ್ತಗಿರಿ ಮಾಡಿ, ₹ 32.28 ಕೋಟಿ ಮೌಲ್ಯದ (ಮಾರುಕಟ್ಟೆ ಮೌಲ್ಯ ₹ 63.44 ಕೋಟಿ) 49.133 ಕೆ.ಜಿ. ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿ ಕೊಳ್ಳಲಾಗಿರುತ್ತದೆ.
ಈ ಕಾರ್ಯಾಚರಣೆ ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್, ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರು, ಅಜಯ್ ಹಿಲೋರಿ, ಐಪಿಎಸ್, ಅಪರ ಪೊಲೀಸ್ ಆಯುಕ್ತರು, ಅಪರಾಧ, ಸಿ.ವಂಶಿಕೃಷ್ಣ, ಐಪಿಎಸ್, ಜಂಟಿ ಪೊಲೀಸ್ ಆಯುಕ್ತರು ಪಶ್ಚಿಮ, ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ, ಉಪ ಪೊಲೀಸ್ ಆಯುಕ್ತರುಗಳಾದ ಡಾ:ಕೆ.ವಂಶಿಕೃಷ್ಣ, ಐಪಿಎಸ್, ದಕ್ಷಿಣ ವಿಭಾಗ, ಬಿ.ಎಸ್.ನೇಮಗೌಡ, ಐಪಿಎಸ್, ಉತ್ತರ ವಿಭಾಗ, ಶ್ರೀ. ರಾಜ ಇಮಾಮ್ ಕಾಸಿಂ, ಅಪರಾಧ-02 ವಿಭಾಗರವರು ಮತ್ತು ಸಹಾಯಕ ಪೊಲೀಸ್ ಆಯುಕ್ತರುಗಳಾದ ಜೆ.ಸಿ.ನಗರ ಉಪ ವಿಭಾಗದ ಕೆ.ಎಸ್.ತನ್ವೀರ್, ವಿ.ವಿ.ಪುರಂ ಉಪ ವಿಭಾಗದ ಶಮೀದ್ಪಾಷ, ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದ ಎಲ್.ವೈ.ರಾಜೇಶ್ ರವರ ನೇತೃತ್ವದಲ್ಲಿ, ಪೊಲೀಸ್ ಇನ್ಸ್ಪೆಕ್ಟರ್ಗಳಾದ ಹೆಬ್ಬಾಳ ಪೊಲೀಸ್ ಠಾಣೆಯ ಶ್ರೀ.ಭೈರ, ಉತ್ತರ ವಿಭಾಗದ ಮಹಿಳಾ ಪೊಲೀಸ್ ಠಾಣೆಯ ಜಿ.ವೈ.ಗಿರಿರಾಜ್, ಸುಬ್ರಮಣ್ಯನಗರ ಪೊಲೀಸ್ ಠಾಣೆಯ ಎನ್.ಗುರುಪ್ರಸಾದ್, ಸಿ.ಸಿ.ಬಿಯ ಮಾದಕ ದ್ರವ್ಯ ನಿಗ್ರಹ ದಳದ ವಿ.ಡಿ.ಶಿವರಾಜ್, ಗಿರಿನಗರ ಪೊಲೀಸ್ ಠಾಣೆಯ ಎಸ್.ಮಂಜುನಾಥ್ ಮತ್ತು ಇತರೆ ಅಧಿಕಾರಿ ಸಿಬ್ಬಂದಿ ತಂಡವು ಪ್ರಕರಣ ಬೇಧಿಸಿ ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

