ಬೆಂಗಳೂರು: ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿರುವ ಭಾರತೀಯ ಕಾಫಿ ಮಂಡಳಿಯು, 2026ರ ಅಕ್ಟೋಬರ್ 1 ರಂದು ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 1.00 ರವರೆಗೆ ಬೆಂಗಳೂರಿನ BIEC ಯ ಪಾರಿಜಾತ ಸಭಾಂಗಣದಲ್ಲಿ ‘ಅಗ್ರಿಕಾನ್ ಹಾರ್ಟಿಕನೆಕ್ಟ್’ ಕಾರ್ಯಕ್ರಮದೊಂದಿಗೆ ಅಂತರರಾಷ್ಟ್ರೀಯ ಕಾಫಿ ದಿನವನ್ನು ಆಚರಿಸಲಿದೆ.
ಕಾಫಿ ಮಂಡಳಿಯ ಅಧ್ಯಕ್ಷರಾದ ಎಂ. ಜೆ. ದಿನೇಶ್ ಅವರು ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಆಚರಣೆಯಲ್ಲಿ ಭಾರತೀಯ ಕಾಫಿ ಸುಸ್ಥಿರತೆಯ ಮಾನದಂಡದ ಯೋಜನೆ ‘ಇಂಡಿಕಾಫ್ಸ್’ ಕುರಿತು ವಿಚಾರಸಂಕಿರಣ, ಬೆಳೆಗಾರರು, ರೋಸ್ಟರ್‍ಗಳು ಹಾಗೂ ಕೆಫೆ ಉದ್ಯಮಿಗಳೊಂದಿಗೆ ಸಂವಾದ, ಮತ್ತು “ಇಂಡಿಯಾ ಕಾಫಿ” ಬ್ರ್ಯಾಂಡ್‍ನಡಿ ಭಾರತದ ಭೌಗೋಳಿಕ ಸೂಚ್ಯಂಕ ಮಾನ್ಯತೆ ಪಡೆದ ಕಾಫಿಗಳ ಹೊಸ ಪ್ಯಾಕೇಜಿಂಗ್ ಬಿಡುಗಡೆ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ ಸಾರ್ವಜನಿಕರಿಗಾಗಿ ‘ಲೈವ್ ಬ್ರೂ ಬಾರ್’ ವ್ಯವಸ್ಥೆ ಇರಲಿದ್ದು, ಉಚಿತ ಕಾಫಿ ಸವಿಯುವ ಮತ್ತು ಸ್ವತಃ ಕಾಫಿ ತಯಾರಿಸುವ ಅನುಭವವನ್ನು ಪಡೆಯಬಹುದು.
ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದ್ದು, ಜಾಲತಾಣದಲ್ಲಿ https://mmiconnect.in/agi-

