ಎಲಿವೇಟರ್ ತಂತ್ರಜ್ಞಾನದಲ್ಲಿ ಭಾರತ-ಇಟಲಿ ಜಾಗತಿಕ ಬಾಂಧವ್ಯ

ಬೆಂಗಳೂರು: ಎಲಿವೇಟರ್ಸ್‌ನ ಹೈಡ್ರಾಲಿಕ್ ಬಿಡಿಭಾಗಗಳನ್ನು ತಯಾರಿಸುವ ವಿಶ್ವದ ಪ್ರತಿಷ್ಠಿತ ಇಟಲಿ ಮೂಲದ ‘ಹೈಡ್ರೋನಿಕ್’ (HL Hydronic) ಕಂಪನಿ ಹಾಗೂ ಭಾರತದ ಹೆಮ್ಮೆಯ ಬೆಂಗಳೂರಿನ ‘ಕ್ರಿಯೇಟಿವ್ ಡಿವೈಸಸ್’ (CD) ಮತ್ತು ‘ಎಲಿವೇಟರ್ ಟ್ರೇಡ್ ಸೆಂಟರ್’ (ETC) ಸಂಸ್ಥೆಗಳ ನಡುವಿನ ತಾಂತ್ರಿಕ ಬಾಂಧವ್ಯ ಕ್ಕೆ ದಶಕ ತುಂಬಿದ್ದು, ದಶಕದ ಸಂಭ್ರಮದ ಹಿನ್ನೆಲೆಯಲ್ಲಿ ಉಭಯ ಸಂಸ್ಥೆ ಗಳ ಮುಖ್ಯ ಸ್ಥರು ಸಮಾಲೋಚನೆ ನಡೆಸಿದರು.

ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಇಟಲಿಯ HL ಹೈಡ್ರೋನಿಕ್ ಸಂಸ್ಥೆಯ ಜಾಗತಿಕ ಪ್ರತಿನಿಧಿ ಫೆಡೆರಿಕೊ ಲಾಮಾ (Federico Lama) ಅವರ ವಿಶೇಷ ಆಹ್ವಾನದ ಮೇರೆಗೆ, ಕರ್ನಾಟಕ ಹೈಡ್ರಾಲಿಕ್ ಮತ್ತು ಎಲಿವೇಟರ್ ತಯಾರಕರ ಒಕ್ಕೂಟದ ಅಧ್ಯಕ್ಷರು ಹಾಗೂ ಕ್ರಿಯೇಟಿವ್ ಡಿವೈಸಸ್ ಸಂಸ್ಥೆಯ ಚೇರ್ಮನ್ ಆದ ಕೈಗಾರಿಕಾ ರತ್ನ ಡಾ.ಉಮೇಶ್ ಕುಮಾರ್ ಅವರು ಭೇಟಿ ಮಾಡಿ ಉಭಯ ದೇಶಗಳ ತಾಂತ್ರಿಕ ಪ್ರಗತಿಯ ಕುರಿತು ಸವಿಸ್ತಾರವಾಗಿ ಚರ್ಚಿಸಿದರು.

ಸುಮಾರು 10-12 ವರ್ಷಗಳ ಹಿಂದೆಯೇ ಇಟಲಿಯ ಅತ್ಯಾಧುನಿಕ ಹೈಡ್ರೋನಿಕ್ ತಂತ್ರಜ್ಞಾನವನ್ನು ಭಾರತಕ್ಕೆ ಮೊಟ್ಟಮೊದಲ ಬಾರಿಗೆ ಆಮದು ಮಾಡಿಕೊಂಡು ಪರಿಚಯಿಸಿದ ಕೀರ್ತಿ ‘ಎಲಿವೇಟರ್ ಟ್ರೇಡ್ ಸೆಂಟರ್’ (ETC) ಸಂಸ್ಥೆಗೆ ಸಲ್ಲುತ್ತದೆ. ಅಂದು ಅಳವಡಿಸಲಾದ ಮೊದಲ ಹೈಡ್ರಾಲಿಕ್ ಸಿಸ್ಟಮ್ಸ್ ಇಂದಿಗೂ ಯಾವುದೇ ತಾಂತ್ರಿಕ ದೋಷವಿಲ್ಲದೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಜಾಗತಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದು ಡಾ. ಉಮೇಶ್ ಕುಮಾರ್ ಈ ಸಂದರ್ಭದಲ್ಲಿ ತಿಳಿಸಿದರು. ಎಲಿವೇಟರ್‌ಗಳ ಸಾಮರ್ಥ್ಯ ಪರೀಕ್ಷಿಸಲು ಜಾಗತಿಕ ಮಟ್ಟದ ನೂತನ ಟೆಸ್ಟಿಂಗ್ ಟವರ್‌ (Testing Tower) ಸ್ಥಾಪನೆ. ಹೈಡ್ರಾಲಿಕ್ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ನೂತನ ಸಂಶೋಧನೆ, ಲಿಫ್ಟ್‌ ಬಳಕೆಯಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುವ ಅತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನಗಳ (Safety Technology) ಅಳವಡಿಕೆ ಬಗ್ಗೆ ವಿಸ್ತೃತ ವಾಗಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಮಾಂಟೆಫೆರೊ ಇಂಡಿಯಾ (Monteferro India) ಕಂಪನಿಯ ಭಾರತದ ನಿರ್ದೇಶಕ  ಬಿ.ಎಸ್. ಕುಮಾರಸ್ವಾಮಿ, ಆಡಳಿತ ಮಂಡಳಿಯ ಪ್ರಮುಖರಾದ ಬಿ.ಜಿ.ಹರೀಶ್, ರಾಧಾಕೃಷ್ಣ ಮತ್ತು ಪ್ರಸನ್ನ ಅವರು ಡಾ.ಉಮೇಶ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಿದರು.

ಪ್ರತಿಯಾಗಿ ಡಾ.ಉಮೇಶ್ ಕುಮಾರ್ ಅವರು ಹೈಡ್ರಾನಿಕ್ ಸಂಸ್ಥೆಯ ಮುಖ್ಯ ಸ್ಥರಿಗೂ ಗೌರವ ಸನ್ಮಾನ ದ ಮೂಲಕ ಕೃತಜ್ಞತೆ ಸಲ್ಲಿಸಿದರು.

Hot this week

ಹೊಯ್ಸಳ – ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ, ಸಂಸ್ಥೆಗಳಿಗೆ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಕ್ಕಳ ದಿನಾಚರಣೆ–2026 ಪ್ರಯುಕ್ತ...

ರಾಜ್ಯ ದತ್ತಾಂಶದ ಸುರಕ್ಷತೆ, ಸೈಬರ್ ಭದ್ರತಾ ಚೌಕಟ್ಟು ಬಲಪಡಿಸುವ ಕುರಿತು ಕಾರ್ಯಾಗಾರ

ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ), ಇ-ಆಡಳಿತ...

ಆಧುನಿಕ ಶೈಕ್ಷಣಿಕ ಮೂಲಸೌಕರ್ಯಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕ: ರಾಜ್ಯಪಾಲ ಗೆಹ್ಲೋಟ್

ವಿಶ್ವವಿದ್ಯಾನಿಲಯಗಳಲ್ಲಿ ಗುಣಮಟ್ಟದ ಶೈಕ್ಷಣಿಕ ಮೂಲಸೌಕರ್ಯಗಳ ನಿರ್ಮಾಣವು ಜ್ಞಾನ, ಸಂಶೋಧನೆ, ನಾವೀನ್ಯತೆ ಹಾಗೂ...

ಜವಾಹರ್ ನವೋದಯ ವಿದ್ಯಾಲಯ: 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಬೆಂಗಳೂರು ನಗರ ಜಿಲ್ಲೆಯ ಜವಾಹರ್ ನವೋದಯ ವಿದ್ಯಾಲಯದಲ್ಲಿ 2027-28ನೇ ಶೈಕ್ಷಣಿಕ ಸಾಲಿನ...

Topics

ನಿತ್ಯ ಪಂಚಾಂಗ 13-07-2026 ಸೋಮವಾರ MONDAY

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ13.07.2026 ಸೋಮವಾರMONDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ: ಉತ್ತರಾಯಣ. AYANA: UTTARAYANA. ಋತು:...

ಎಸ್.ಜಾನಕಿ ಅವರ ನಿಧನಕ್ಕೆ ವಿಜಯೇಂದ್ರ ಸಂತಾಪ

ಬೆಂಗಳೂರು: ತಮ್ಮ ಮಾಧುರ್ಯಭರಿತ ಧ್ವನಿಯಿಂದಲೇ ಚಿತ್ರರಂಗದಲ್ಲಿ ಜನರ ಮನಗೆದ್ದಿದ್ದ ಗಾಯಕಿ ಎಸ್.ಜಾನಕಿ...

ಷಣ್ಮುಖ ಶ್ರೀ ಸುಬ್ರಹ್ಮಣ್ಯ ದೇವಾಲಯದ ಭೂಮಿಪೂಜೆ ನೆರವೇರಿಸಿದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್

ಬೆಂಗಳೂರಿನ ಬನಶಂಕರಿಯ ಆರನೇ ಹಂತದ ಲಿಂಗಧೀರನಹಳ್ಳಿಯಲ್ಲಿ ಷಣ್ಮುಖ ಶ್ರೀ ಸುಬ್ರಹ್ಮಣ್ಯ ದೇವಾಲಯದ ಭೂಮಿಪೂಜೆಯನ್ನು...

Related Articles