ಮಾಲಾಸೇರಿ ಡೂಂಗ್ರಿ ಹಾಗೂ ಸವಾಯಿಭೋಜ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಜ್ಯಪಾಲ ಗೆಹ್ಲೋಟ್

ಭವ್ಯ ಭಜನ ಸಂಧ್ಯೆಯಲ್ಲಿ ಪಾಲ್ಗೊಂಡು ಭಜನ ಸಮ್ರಾಟ್ ಪ್ರಕಾಶ್ ಮಾಲಿ ಅವರ ಭಕ್ತಿಗೀತೆಗಳನ್ನು ಆಲಿಸಿದ ರಾಜ್ಯಪಾಲರು

 

ಬೆಂಗಳೂರು :ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್‌ಚಂದ್ ಗೆಹ್ಲೋಟ್(Shri Thawarchand Gehlot) ಅವರು ರಾಜಸ್ಥಾನದ ಭೀಲ್ವಾರಾ ಜಿಲ್ಲೆಯ ಆಸಿಂದ್ ಪ್ರದೇಶದಲ್ಲಿರುವ ಭಗವಾನ್ ಶ್ರೀ ದೇವನಾರಾಯಣ(Lord Sree Devanarayana) ಅವರ ಜನ್ಮಸ್ಥಳವಾದ ಮಾಲಾಸೇರಿ ಡೂಂಗ್ರಿ ಹಾಗೂ ಸವಾಯಿಭೋಜ್ ಮಹಾರಾಜ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ನಂತರ ಅವರು ಸಾಡು, ಸವಾಯಿಭೋಜ್ ಮಹಾರಾಜ ಹಾಗೂ ಭಗವಾನ್ ಶ್ರೀ ದೇವನಾರಾಯಣ ಅವರ ದರ್ಶನ ಪಡೆದು ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ದೇಶದಾದ್ಯಂತ ಸುಖ, ಶಾಂತಿ, ಸಮೃದ್ಧಿ, ಪ್ರಗತಿ ಹಾಗೂ ಜನಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.

ಮಾಲಾಸೇರಿ ಡೂಂಗ್ರಿಗೆ ಆಗಮಿಸಿದ ಸಂದರ್ಭದಲ್ಲಿ ರಾಜ್ಯಪಾಲರ ವಿಶೇಷ ಕರ್ತವ್ಯಾಧಿಕಾರಿ (ಒಎಸ್‌ಡಿ) ಶ್ರೀ ಶಂಕರ್ ಗುರ್ಜರ್ ಸೇರಿದಂತೆ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಅರ್ಚಕರು ರಾಜ್ಯಪಾಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶ್ರೀ ಹೇಮರಾಜ್ ಪೋಷ್ವಾಲ್ ಸೇರಿದಂತೆ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು. ರಾಜ್ಯಪಾಲರು ವಿಧಿವತ್ತಾಗಿ ಪೂಜೆ ಸಲ್ಲಿಸಿ ಭಗವಾನ್ ಶ್ರೀ ದೇವನಾರಾಯಣ ಅವರ ಆಶೀರ್ವಾದ ಪಡೆದರು.

ಬಳಿಕ ರಾಜ್ಯಪಾಲರು ಆಸಿಂದ್‌ನ ಸವಾಯಿಭೋಜ್ ಮಹಾರಾಜ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷರು, ಸದಸ್ಯರು ಹಾಗೂ ಗಾದಿಪತಿ ಮಹಂತ್ ಶ್ರೀ ಶ್ರೀ 1008 ಶ್ರೀ ಸುರೇಶ್‌ದಾಸ್ ಮಹಾರಾಜ ಅವರು ರಾಜ್ಯಪಾಲರನ್ನು ಬರಮಾಡಿಕೊಂಡರು. ರಾಜ್ಯಪಾಲರು ಸವಾಯಿಭೋಜ್ ಮಹಾರಾಜ ಅವರ ದರ್ಶನ ಪಡೆದು ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಭಗವಾನ್ ಶ್ರೀ ದೇವನಾರಾಯಣ  ಅವರ ದರ್ಶನಕ್ಕಾಗಿ ಆಗಮಿಸಿದ್ದ ಗುರ್ಜರ್ ಸಮಾಜ ಸೇರಿದಂತೆ ಸರ್ವ ಸಮಾಜದ ಭಕ್ತರು ಹಾಗೂ ದೇವಭಕ್ತರೊಂದಿಗೆ ರಾಜ್ಯಪಾಲರು ಆತ್ಮೀಯವಾಗಿ ಸಂವಾದ ನಡೆಸಿದರು.

ಅನಂತರ ರಾಜ್ಯಪಾಲರಾದ ಶ್ರೀ ಥಾವರ್‌ಚಂದ್ ಗೆಹ್ಲೋಟ್ ಅವರು ಸವಾಯಿಭೋಜ್ ದೇವಸ್ಥಾನ ಆವರಣದಲ್ಲಿ ಮಹಂತ್ ಶ್ರೀ ಸುರೇಶ್‌ದಾಸ್  ಮಹಾರಾಜ, ಶ್ರೀ ನಾರಾಯಣ ನಾಥ್  ಮಹಾರಾಜ ಹಾಗೂ ಶ್ರೀ ಮಹೇಂದ್ರ ಪುರಿ  ಮಹಾರಾಜ ಅವರ ಸಾನ್ನಿಧ್ಯದಲ್ಲಿ ಆಯೋಜಿಸಲಾದ ಭವ್ಯ ಭಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಭಜನ ಸಮ್ರಾಟ್ ಶ್ರೀ ಪ್ರಕಾಶ್ ಮಾಲಿ ಅವರು ಪ್ರಸ್ತುತಪಡಿಸಿದ ಭಕ್ತಿರಸಪೂರ್ಣ ಭಜನೆಗಳನ್ನು ರಾಜ್ಯಪಾಲರು ಆಲಿಸಿದರು. ಭಕ್ತಿ ಮತ್ತು ಶ್ರದ್ಧೆಯಿಂದ ಕೂಡಿದ ಈ ಭಜನ ಸಂಧ್ಯೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಂತ್ಯದಲ್ಲಿ ರಾಜ್ಯಪಾಲರು ಭಗವಾನ್ ಶ್ರೀ ದೇವನಾರಾಯಣ  ಅವರ ಸನ್ನಿಧಿಯಲ್ಲಿ ದೇಶದ ಸರ್ವಜನರ ಸುಖ, ಶಾಂತಿ ಮತ್ತು ಸಮೃದ್ಧಿಗಾಗಿ ಮತ್ತೊಮ್ಮೆ ಪ್ರಾರ್ಥನೆ ಸಲ್ಲಿಸಿ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಆಶೀರ್ವಾದ ಕೋರಿದರು.

ರಾಜ್ಯದ ಇನ್ನಷ್ಟು ತಾಲೂಕುಗಳು ಬರಪೀಡಿತ: ಹೆಚ್ಚುವರಿಯಾಗಿ 23 ತಾಲೂಕುಗಳನ್ನು ಘೋಷಿಸಿದ  ಸರ್ಕಾರ

Hot this week

BIG NEWS :MUMBAI TOLL : ಮುಂಬೈ ಟೋಲ್ ದರಗಳಲ್ಲಿ ಶೇ.20ರಷ್ಟು ಏರಿಕೆ

ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1,...

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

Topics

BIG NEWS :MUMBAI TOLL : ಮುಂಬೈ ಟೋಲ್ ದರಗಳಲ್ಲಿ ಶೇ.20ರಷ್ಟು ಏರಿಕೆ

ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1,...

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

ರಾಮರಸದಲ್ಲಿ ಆದಾಶರ್ಮಾ ದುರ್ಗಿ ರೋಲ್

ಗುರುದೇಶಪಾಂಡೆ ಒಡೆತನದ ’ಜಿ ಅಕಾಡೆಮಿ’ಯಲ್ಲಿ(Zee Academy) ನಟನೆ ಕಲಿತಿರುವ ಪ್ರತಿಭೆಗಳಿಗೆ ಅವಕಾಶ...

Related Articles