ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಿದ ಪ್ರತಿಷ್ಠಿತ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ವಿದ್ಯಾರ್ಥಿನಿ ಶ್ರೇಯಾ ಎನ್. ಗೌಡ ಅವರಿಗೆ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಡಾ. ಸುಧಾ ಯಾದವ್(Dr.Sudha Yadav) ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಎನ್‌ಡಿಎ ಪರೀಕ್ಷೆಯಲ್ಲಿ ದೇಶದಾದ್ಯಂತದ ಅಭ್ಯರ್ಥಿಗಳ ನಡುವೆ ಪ್ರಥಮ ಸ್ಥಾನ ಗಳಿಸುವ ಮೂಲಕ ಶ್ರೇಯಾ ಅವರು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಅವರ ಈ ಅಸಾಧಾರಣ ಸಾಧನೆಯು ಪರಿಶ್ರಮ, ಶಿಸ್ತು, ಆತ್ಮವಿಶ್ವಾಸ ಮತ್ತು ದೃಢಸಂಕಲ್ಪಕ್ಕೆ ಸಾಕ್ಷಿಯಾಗಿದೆ.

ಒಬ್ಬ ವಿದ್ಯಾರ್ಥಿನಿಯಾಗಿ ರಾಷ್ಟ್ರಮಟ್ಟದಲ್ಲಿ ಇಂತಹ ಮಹತ್ವದ ಸಾಧನೆ ಮಾಡಿರುವುದು ನಾಡಿನ ಹೆಣ್ಣುಮಕ್ಕಳಿಗೆ ಸ್ಫೂರ್ತಿದಾಯಕವಾಗಿದೆ. ವಿಶೇಷವಾಗಿ, ರಕ್ಷಣಾ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಯುವತಿಯರಿಗೆ ಶ್ರೇಯಾ ಅವರ ಸಾಧನೆ ಹೊಸ ಭರವಸೆ ಮತ್ತು ಪ್ರೇರಣೆ ನೀಡಲಿದೆ.

ಶ್ರೇಯಾ ಅವರು ತಮ್ಮ ಮುಂದಿನ ಶೈಕ್ಷಣಿಕ ಹಾಗೂ ವೃತ್ತಿಜೀವನದಲ್ಲಿಯೂ ಇದೇ ರೀತಿಯ ಯಶಸ್ಸು ಸಾಧಿಸಲಿ. ದೇಶಸೇವೆಯ ಮಹತ್ತರ ಗುರಿಯನ್ನು ಸಾಕಾರಗೊಳಿಸಿ, ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುವ ಅವರ ಕನಸು ನನಸಾಗಲಿ ಎಂದು ರಾಜ್ಯಪಾಲರು ಹಾರೈಸಿದ್ದಾರೆ.

ಶ್ರೇಯಾ ಅವರ ಸಾಧನೆಯು ಕರ್ನಾಟಕದ ಯುವಜನತೆಗೆ ಪ್ರೇರಣೆಯಾಗಿದ್ದು ಅವರ ಉಜ್ವಲ ಭವಿಷ್ಯಕ್ಕೆ ರಾಜ್ಯಪಾಲರು ಶುಭ ಹಾರೈಸಿದ್ದಾರೆ.

ಆಲ್ ಇಂಡಿಯಾ ಪೊಲೀಸ್ ಲಾನ್ ಟೆನ್ನಿಸ್ ಚಾಂಪಿಯನ್‌ಶಿಪ್: ರಾಜ್ಯದ ಆತಿಥ್ಯ ಉನ್ನತ ಮಟ್ಟದಲ್ಲಿರಲಿ

Hot this week

ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಜಾಮೀನು ನಿರಾಕರಣೆ: ಪಶುವೈದ್ಯರ ನೇಮಕಾತಿ ಹಗರಣ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯದ ಮಹತ್ವದ ಆದೇಶ!

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಅಮಾನತುಗೊಂಡ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್(Shivashankarappa...

ವಿದೇಶದಲ್ಲಿ ಪಡೆದ ವಿಚ್ಛೇದನ ಭಾರತದಲ್ಲಿ ಸ್ವಯಂಚಾಲಿತವಾಗಿ ಮಾನ್ಯವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ನವದೆಹಲಿ: ವಿದೇಶಿ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆದ ಮಾತ್ರಕ್ಕೆ ಭಾರತದಲ್ಲಿ ನಡೆದ ವಿವಾಹ...

ಇಂದೋರ್‌ನ 8 ವರ್ಷಗಳ ಸ್ವಚ್ಛತಾ ಸಾಮ್ರಾಜ್ಯಕ್ಕೆ ಅಂತ್ಯ: ದೇಶದ ಅತ್ಯಂತ ಸ್ವಚ್ಛ ನಗರವಾಗಿ ನವಿ ಮುಂಬೈಗೆ ಪಟ್ಟ!

ನವದೆಹಲಿ: ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಮಹಾರಾಷ್ಟ್ರದ ನವಿ...

Topics

ವಿದೇಶದಲ್ಲಿ ಪಡೆದ ವಿಚ್ಛೇದನ ಭಾರತದಲ್ಲಿ ಸ್ವಯಂಚಾಲಿತವಾಗಿ ಮಾನ್ಯವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ನವದೆಹಲಿ: ವಿದೇಶಿ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆದ ಮಾತ್ರಕ್ಕೆ ಭಾರತದಲ್ಲಿ ನಡೆದ ವಿವಾಹ...

ಇಂದೋರ್‌ನ 8 ವರ್ಷಗಳ ಸ್ವಚ್ಛತಾ ಸಾಮ್ರಾಜ್ಯಕ್ಕೆ ಅಂತ್ಯ: ದೇಶದ ಅತ್ಯಂತ ಸ್ವಚ್ಛ ನಗರವಾಗಿ ನವಿ ಮುಂಬೈಗೆ ಪಟ್ಟ!

ನವದೆಹಲಿ: ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಮಹಾರಾಷ್ಟ್ರದ ನವಿ...

ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ (AAP)...

ಬೆಂಗಳೂರು: ಭೂಮಿ ಮೇಲೆ ವಾಸಿಸುವ ಎಲ್ಲಾ ಮನುಕುಲದವರು ಸಮಾನರು, ಇಲ್ಲಿ ನಾವೇ...

ಕರ್ನಾಟಕ ತಿಗಳ ಸಮುದಾಯಗಳ ಅಭಿವೃದ್ಧಿ ನಿಗಮದ ವೆಬ್‍ಸೈಟ್ ಲೋಕಾರ್ಪಣೆ

ಬೆಂಗಳೂರು: ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ...

Related Articles