ಬೆಂಗಳೂರು: ಭೂಮಿ ಮೇಲೆ ವಾಸಿಸುವ ಎಲ್ಲಾ ಮನುಕುಲದವರು ಸಮಾನರು, ಇಲ್ಲಿ ನಾವೇ ಶ್ರೇಷ್ಠ ಎನ್ನುವ ಭಾವ ಮಾಡದೇ ವಿಕಲಚೇತನರೊಂದಿಗೆ ಸಹಕಾರ ಮತ್ತು ಸೌಹಾರ್ಧತೆಯಿಂದ ಬದುಕುವ ಕಲೆ(The art of living) ನಮ್ಮದಾಗಬೇಕೆಂದು ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ನಿರ್ದೇಶಕರಾದ ಡಾ.ಮಹೇಶ್ ಬಾಬು(Dr.Mahesh Baabu|) ತಿಳಿಸಿದರು.

ವಿಕಾಸಸೌಧದಲ್ಲಿಂದು ಆಯೋಜಿಸಿದ್ದ ರಾಜ್ಯ ಮಟ್ಟದ ವಿಕಲಚೇತನರ ಕುಂದು-ಕೊರತೆಗಳ ನಿವಾರಣಾಧಿಕಾರಿಗಳ ಒಂದು ದಿನದ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, 1988 ರಿಂದಲೂ ಕರ್ನಾಟಕದಲ್ಲಿ ವಿಕಲಚೇತನರಿಗಾಗಿ ಅದ್ಭುತವಾದ ಯೋಜನೆಗಳು, ಕಾರ್ಯಕ್ರಮಗಳು ಜರುಗಿವೆ. ಇಂದಿನ ತರಬೇತಿ ಕಾರ್ಯಾಗಾರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ವಿಕಲಚೇತನ ಸಂಸ್ಥೆಗಳಲ್ಲಿ ಮತ್ತು ಸರ್ಕಾರಿ ಸೇವೆಯಲ್ಲಿರುವವರು ಭಾಗವಹಿಸಿದ್ದು, ಇಲ್ಲಿನ ಸಂಪನ್ಮೂಲ ವ್ಯಕ್ತಿಗಳಿಂದ ತಿಳಿದುಕೊಂಡ ವಿಷಯಗಳನ್ನು ತಮ್ಮ ಇಲಾಖೆ ಮತ್ತು ಸಂಸ್ಥೆಯ ಮೂಲಕ ವಿಕಲಚೇತನರಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಅಂಗವಿಕಲ ವ್ಯಕ್ತಿ ಹಕ್ಕುಗಳ ಅಧಿನಿಯಮ ಕಚೇರಿಯ ರಾಜ್ಯ ಆಯುಕ್ತರಾದ ಡಾ. ವೆಂಕಟರಮಣಸ್ವಾಮಿಯವರು ಮಾತನಾಡಿ, ಅಂಗವಿಕಲತೆಯ ಬಗ್ಗೆ ಅರಿವು ಇರಬೇಕು. ಈ ಹಿಂದೆ ಏಳು ಅಂಗವಿಕಲತೆಗೆ ಮಾತ್ರ ಗುರುತಿಸಲಾಗಿದ್ದು, ಅಧಿನಿಯಮ 49 ರನ್ವಯ ದೈಹಿಕ ಅಂಗವಿಕಲತೆ, ಅಂಧತ್ವ, ಕುಷ್ಠರೋಗ ನಿವಾರಿತರ ಮುಂತಾದ 21 ನ್ಯೂನತೆಗಳಿಗೆ ಸಂಬಂಧಿಸಿದಂತೆ ಸೌಲಭ್ಯಗಳನ್ನು ನೀಡಿವೆ. ಈ ವಿಷಯ ಕುರಿತು ಕಾರ್ಯಾಗಾರದಲ್ಲಿ ಚರ್ಚಿಸಲಾಗುವುದು. ಈ ಬಗ್ಗೆ ತಾವೆಲ್ಲರೂ ಅರಿತುಕೊಂಡು ವಿಕಲಚೇತನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕೆಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಮೈಸೂರಿನ ಮಾನಸ ಗಂಗೋತ್ರಿಯ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ನಿರ್ದೇಶಕರಾದ ಡಾ.ಎಂ.ಪುಷ್ಪವತಿ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಮಾಜಿ ರಾಜ್ಯ ಆಯುಕ್ತರು, ಮೆಂಟಲ್ ಹೆಲ್ತ್ ಅಥಾರಿಟಿ ಮಾಜಿ ಸದಸ್ಯರು ಹಾಗೂ ಚಾಮರಾಜನಗರ ಜಿಲ್ಲೆಯ ಮಾರ್ಗದರ್ಶಿ ಸಂಸ್ಥೆಯ ಯೋಜನಾ ನಿರ್ದೇಶಕರಾದ ಕೆ.ವಿ.ರಾಜಣ್ಣ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಮಾಜಿ ರಾಜ್ಯ ಆಯುಕ್ತರು ಹಾಗೂ ಬೆಂಗಳೂರಿನ ಲಿಂಗರಾಜಪುರಂನ ಮಾಯ, ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಲಿಟಿ ಸಂಸ್ಥೆಯ ಮಾಜಿ ನಿರ್ದೇಶಕರು, ಪ್ರಸ್ತುತ ಮುಖ್ಯ ಕಾರ್ಯನಿರ್ವಾಹಕರಾದ ವಿ.ಎಸ್.ಬಸವರಾಜು, ಕೊಪ್ಪಳ ಜಿಲ್ಲೆಯ ಸಾಮಥ್ರ್ಯ ಟ್ರಸ್ಟ್, ಡಿಸೆಬಲಿಟಿ ರಿಹಬಿಲಿಟೇಷನ್ಸ್ ಸೆಂಟರ್ ನ ನಿರ್ದೇಶಕರಾದ ಹಂಪಣ್ಣ, ಬೆಂಗಳೂರಿನ ಸಮರ್ಥನಂ ಟ್ರಸ್ಟ್‍ನ ಪ್ರೋಗ್ರಾಂ ಲೀಡ್ ಶಿವರಾಂ ದೇಶಪಾಂಡೆ, ಬೆಂಗಲೂರಿನ ಈಶಾನ್ಯ ಇಂಡಿಯಾ ಫೌಂಡೇಶನ್‍ನ ಅನೂಪ್ ಸಿಂಹ, ಬೆಂಗಳೂರಿನ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಕಚೇರಿಯ ಸಹಾಯಕ ಆಯುಕ್ತರಾದ ಶ್ರೀಮತಿ ಡಿ.ಯಮುನಾ ಉಪಸ್ಥಿತರಿದ್ದರು.

Hot this week

ಕರ್ನಾಟಕ ತಿಗಳ ಸಮುದಾಯಗಳ ಅಭಿವೃದ್ಧಿ ನಿಗಮದ ವೆಬ್‍ಸೈಟ್ ಲೋಕಾರ್ಪಣೆ

ಬೆಂಗಳೂರು: ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ...

ಬೆಂಗಳೂರು: ಬೆಂಗಳೂರು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಎಐಸಿಟಿಇ(AICTE)ಯಿಂದ ಅನುಮೋದನೆಗೊಂಡು...

ಬೆಂಗಳೂರು: ಬೆಂಗಳೂರು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ...

ಬೆಂಗಳೂರು: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ...

ಕಾಸರಗೋಡು ಕನ್ನಡ ಗ್ರಾಮದಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಜನ್ಮಶತಮಾನೋತ್ಸವ

ಕಾಸರಗೋಡು: (Kasaragod) ಅನ್ನಪೂರ್ಣ ಪ್ರಕಾಶನ, (Annapoorna Prakashana) ಸಿರಿಗೇರಿ, (Sirigeri) ಸಿರುಗುಪ್ಪ...

Topics

BIG NEWS : ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ವಿಶ್ವದ ಖ್ಯಾತ ಟೆನಿಸ್ ಆಟಗಾರರು ಭಾಗಿ!

ಬೆಂಗಳೂರು : ವರ್ಲ್ಡ್ ಟೆನಿಸ್ ಲೀಗ್ (WTL) ತನ್ನ ಐದನೇ ಸೀಸನ್‌ಗೆ...

BIG NEWS : 80 ಕ್ಕೂ ಹೆಚ್ಚು ನಿಗಮ-ಮಂಡಳಿಗಳಿಗೆ 428 ನೇಮಕಾತಿ; ಸರ್ಕಾರದಿಂದ ಆದೇಶ

ರಾಜ್ಯ ಸರ್ಕಾರದ ವಿವಿಧ ನಿಗಮಗಳು, ಮಂಡಳಿಗಳು ಮತ್ತು ಪ್ರಾಧಿಕಾರಗಳಿಗೆ ನಿರ್ದೇಶಕರು ಮತ್ತು...

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ(Delhi) ಸಮೀಪದ ನೋಯ್ಡಾ(Noida) ಮತ್ತು ಗ್ರೇಟರ್ ನೋಯ್ಡಾ(Greater...

Related Articles